ನೇಪಾಳ ಅಥವಾ ಭಾರತ! ಸೀತೆಯ ಜನ್ಮಸ್ಥಾನ ಯಾವುದು ಗೊತ್ತಾ?
ಕೊರೊನಾ ಕಾರಣದಿಂದ ಲಾಕ್ ಡಾವುನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಪುನಃ ಪ್ರಸಾರವಾಗುತ್ತಿರುವ ರಾಮಾಯಣದಿಂದ ಮತ್ತೆ 80 ದಶಕದ ನೆನಪುಗಳು ಮರುಕಳಿಸುತ್ತಿವೆ.
ಹಾಗೆಯೇ ಸೀತೆಯ ಜನ್ಮಸ್ಥಾನ ಯಾವುದು ಎಂಬುದರ ಬಗ್ಗೆ ಮೊನ್ನೆ ನೆಟ್ಟಿಗರಲ್ಲಿಯೂ ಸಹಿತ ಚರ್ಚೆ ಜೋರಾಗಿ ನಡೆದಿತ್ತು.
ಆದ್ದರಿಂದಲೇ ಸೀತೆಯು ಹುಟ್ಟಿದ ಸ್ಥಳ ಯಾವುದು? ಮತ್ತು ನಿರ್ಧಿಷ್ಟವಾಗಿ ಅದು ಸದ್ಯಕ್ಕೆ ಎಲ್ಲಿ ಬರುತ್ತದೆ ಎಂಬುದನ್ನು ಇಲ್ಲಿ ತಿಳಿಯುವಾ.

ಸೀತೆಯ ಜನ್ಮಸ್ಥಾನವಿರುವದು ಈಗಿನ ನೇಪಾಳದಲ್ಲಿ.ನೇಪಾಳದ ಧಾನುಷಾ ಜಿಲ್ಲೆಯ ಆಗ್ನೇಯ ದಿಕ್ಕಿಗೆ 200 ಕೀ. ಮೀ ದೂರದಲ್ಲಿದೆ. ಅಲ್ಲಿ ಜನಕಪುರ ನಗರದಲ್ಲಿ ಸೀತಾಮತೆಯ ಸುಂದರ ಹಾಗೂ ಭವ್ಯ ಮಂದಿರವಿದೆ.ಆದರೆ ನಮ್ಮ ಭಾರತದ ಸೀಮೆಯಿಂದ ಬರೀ22 ಕೀ ಮೀ ಅಂತರದಲ್ಲಿದೆ. ತ್ರೇತಾಯುಗದಲ್ಲಿ ಅಥವಾ ರಾಮಾಯಣದ ಕಾಲದಲ್ಲಿ ಈ ಪ್ರದೇಶದ ಹೆಸರು ಮಿಥಿಲಾ ಅಂತಲೇ ಪ್ರಸಿದ್ಧವಿತ್ತು.ಅಷ್ಟೇ ಅಲ್ಲ ಈ ಪ್ರಾಂತದಲ್ಲಿ ಇಲ್ಲಿಯವರೆಗೂ ಮೈಥಿಲೀ ಭಾಷೆಯನ್ನು ಸಹಿತ ಜನರ ಆಡು ಭಾಷೆಯಾಗಿದೆ. ಜನಕಪುರದ ರಾಜ ಜನಕನ ಮಗಳೇ ಈ ಜಾನಕಿ. ಜಾನಕಿ ಅಂದರೇನೆ ಸೀತೆಯ ಇನ್ನೊಂದು ಹೆಸರು.