ಭಾರತವನ್ನು ಬಿಟ್ಟು ‘ಈ’ ದೇಶಕ್ಕಾಗಿ ಆಡುವರೆ ಸೂರ್ಯಕುಮಾರ್ ಯಾದವ್? ಕ್ರಿಕೆಟ್ ಆಡಲು ಬಂತು ಬೇರೆ ದೇಶದಿಂದ ಆಫರ್!

ನಮ್ಮ RCB ತಂಡ ಇನ್ನೇನು ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಇದ್ದಾಗ ತಮ್ಮ ಭರ್ಜರಿ ಆಟದ ಮೂಲಕ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಗೆಲುವು ದಾಖಲಿಸಲು ನೆರವಾದ ಮತ್ತು ಎಲ್ಲರಿಗೂ ತನ್ನತ್ತ ಗಮನ ಸೆಳೆಯಲು ಮಾಡಿದ ಸೂರ್ಯಕುಮಾರ್ ಒಂದೇ ರಾತ್ರಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಬಾಯಿಯಲ್ಲಿ ಪ್ರಶಂಸೆಗೆ ಪಾತ್ರರಾದರು.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಕೊಡದಿರುವ ಆಯ್ಕೆ ಸಮಿತಿಗೆ ಸುರ್ಯಕುಮಾರ್ ಯಾದವ್ ಅವರ ಪರವಾಗಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

ದುರ್ಭಾಗ್ಯ ವೆನ್ನುವ ಹಾಗೆ ತಂಡ ಆಯ್ಕೆ ಮಾಡಿದ ಮರುದಿನ ಸೂರ್ಯಕುಮಾರ್ ಅವರು ತಮ್ಮ ಈ ಭರ್ಜರಿ ಆಟವನ್ನು ಪ್ರದರ್ಶಿಸಿದ್ದಾರೆ.

ಆದರೆ ಈಗ ಅವರ ಇದೇ ಆಟ ತುಂಬಾ ಮಹತ್ವ ಪಡೆಯುತ್ತಿದೆ. ಅವರು RCB ತಂಡದ ವಿರುದ್ಧ ಪ್ರದರ್ಶಿಸಿದ ಮಹತ್ವದ ಸಾಧನೆಯ ಆಟಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ಕಾರಣ ನ್ಯೂಜಿಲ್ಯಾಂಡ್ ನ ಆಲ್ ರೌಂಡರ್ ಆಟಗಾರ ಸ್ಕಾಟ್ ಸ್ಟೈರಿಸ್ ಪ್ರಶ್ನೆಯೊಂದನ್ನು ಉಪಸ್ಥಿತ ಮಾಡಿದ್ದಾರೆ. ಸೂರ್ಯಕುಮಾರ್ ಬೇರೆ ದೇಶದ ವತಿಯಿಂದ ಅಂತರಾಷ್ಟ್ರೀಯ ಪಂದ್ಯವನ್ನು ಆಡುವಿರಾ?

ನಿನ್ನೆಯ RCB ತಂಡದ ವಿರುದ್ಧವಾಡಿದ ಪಂದ್ಯದಲ್ಲಿ ಯಾದವ್ ಅವರು ಬರೀ 43 ಎಸೆತಗಳಲ್ಲಿ 79 ರನ್ ಗಳ ವಿದ್ವಂಸಕ ಆಟವಾಡಿ ಅಕ್ಷರಶಃ ಗೆಲುವನ್ನು ಕಸಿದು ಕೊಂಡು ಹೋದರು. ಮುಂಬಯಿಯ ಈ ಗೆಲುವಿನಲ್ಲಿ ಸೂರ್ಯಕುಮಾರ್ ಮಹತ್ವದ ಪಾತ್ರವನ್ನು ವಹಿಸಿದರು. ಇದೇ ಆಟ ಕ್ರಿಕೆಟ್ ದಿಗ್ಗಜರ ಮನಸ್ಸನ್ನು ಗೆದ್ದಿದೆ.

ಒಂದು ಸಮಯದ ಉತ್ತಮ ಆಲ್ ರೌಂಡರ್ ಎನಿಸಿಕೊಂಡ ಸ್ಕಾಟ್ ಅವರು ಸೂರ್ಯಕುಮಾರ್ ಅವರ ಆಟವನ್ನು ನೋಡಿ ಪ್ರಭಾವಿತರಾಗಿ ನೀವು ನ್ಯೂಜಿಲ್ಯಾಂಡ್ ಕಡೆಯಿಂದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ಇಚ್ಚಿಸುವಿರಾ? ಎಂದು ಕೇಳಿದ್ದಾರೆ. ಅದರೊಂದಿಗೆ, ನಾನು ಅವರ ಆಟ ನೋಡಿ ನಿಜಕ್ಕೂ ಆಶ್ಚರ್ಯಚಕಿತನಾಗಿದ್ದೇನೆ, ಒಂದು ವೇಳೆ ಸೂರ್ಯಕುಮಾರ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವದಾದರೆ ಪರದೇಶಗಳ ವಿಚಾರ ಮಾಡಬಹುದು.