ಒಮ್ಮೆ ಮಾತ್ರ ಹೂಡಿಕೆ ಮಾಡಿ ಜೀವಮಾನವಿಡೀ ತಿಂಗಳಿಗೆ ₹19,000 ಪಡೆಯಿರಿ; ‘ಭರ್ಜರಿ’ ಯೋಜನೆ ಪರಿಚಯಿಸಿದ LIC!

ದೇಶದ ಅತಿದೊಡ್ಡ ಮತ್ತು ಎಲ್ಲರ ವಿಶ್ವಾಸಕ್ಕೆ ಪಾತ್ರವಾದ ಇನ್ಶೂರೆನ್ಸ್ ಕಂಪನಿ LIC ಯು ಸಮಯ ಸಮಯಕ್ಕೆ ಹೊಸ ಹೊಸ ಯೋಜನೆಗಳನ್ನು ಗ್ರಾಹಕರಿಗಾಗಿ ತರುತ್ತಿರುತ್ತದೆ. ಈ ಕಂಪನಿಯು ಭಾರತ ಸರಕಾರದ ಅಡಿಯಲ್ಲಿ ಇರುವುದರಿಂದ ಗ್ರಾಹಕನು ಹೂಡಿಕೆ ಮಾಡಿದ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ಇದೆ.

LIC ಈಗ ಹೊಸದೊಂದು ಯೋಜನೆಯನ್ನು ಜಾರಿಯಲ್ಲಿ ತಂದಿದೆ. ಈ ಯೋಜನೆಯ ಹೆಸರು ಜೀವನ ಅಕ್ಷಯ್ ಯೋಜನೆ. ಈ ಯೋಜನೆಯಲ್ಲಿ ಗ್ರಾಹಕನು ಒಂದೇ ಸಲ ಹಣದ ಹೂಡಿಕೆ ಮಾಡಿ ತನ್ನ ಜೀವಮಾನವಿಡೀ ಹಣ ಗಳಿಸಬಹುದು. ಯಾರಿಗೆ ವೃದ್ಧಾಪ್ಯ ಕಾಲದ ಚಿಂತೆ ಇದೆ, ಅಂಥವರಿಗೆ ಈ ಯೋಜನೆಯು ಹೇಳಿ ಮಾಡಿಸಿದಂತಿದೆ. ಈ ಯೋಜನೆಯಲ್ಲಿ 10 ಪ್ರಕಾರದ ಪರ್ಯಾಯಗಳು ಇವೆ. ಅವುಗಳಲ್ಲಿ ನಿಮ್ಮ ಅವಶ್ಯಕತೆಯ ಅನುಸಾರ ನೀವು ಆಯ್ಕೆ ಮಾಡಬಹುದು.

ಇದರಲ್ಲಿ ಒಂದು ‘Annuity Payable for life at a uniform rate’ ( ಪ್ರತಿ ತಿಂಗಳು ಪಿಂಚಣಿ ಆಯ್ಕೆ) ಈ ಪ್ಲಾನ್ ಒಂದು ಇದೆ. ಈ ಯೋಜನೆ ಆಗಸ್ಟ್ 25 2000 ದಿಂದಲೇ ಪ್ರಾರಂಭವಾಗಿದೆ. ಒಂದು ವೇಳೆ ಈ ಪ್ಲಾನ್ ನಿಮಗೆ ಹಿಡಿಸಿದರೆ ಇದನ್ನು ನೀವು ಆನ್ ಲೈನ್ ಅಥವಾ ಆಫ್ ಲೈನ್ ಎರಡು ಪದ್ಧತಿಯಿಂದ ಖರೀದಿಸಬಹುದು. ಈ ಯೋಜನೆ 30 ರಿಂದ ಹಿಡಿದು 85 ವರ್ಷಗಳವರೆಗೆ ಉಪಲಬ್ಧವಿದೆ.

ಈ ಪಾಲಿಸಿಯನ್ನು ನೀವು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಅನ್ಯೂಟಿ ಮೋಡ್ ನಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ ಕಡಿಮೆಯೆಂದರೆ 12 ಸಾವಿರಗಳವರೆಗೆ ಅನ್ಯುಟಿ ದೊರೆಯುವುದು. ಅದೇ ರೀತಿ ಈ ಯೋಜನೆ ಪ್ರಾರಂಭವಾದ ಮೂರು ತಿಂಗಳ ನಂತರ ಸಾಲದ ಸೌಲಭ್ಯವು ಉಂಟು. ಅಂದರೆ ಪಾಲಿಸಿ ಹೋಲ್ಡರ್ ಗಳು ಸಾಲ ತೆಗೆಯಬಹುದು.

ಈ ಪಾಲಿಸಿಯಲ್ಲಿ ನೀವು ಕಡಿಮೆ ಎಂದರೆ 1 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಮತ್ತು ಅತೀ ಹೆಚ್ಚು ಹಣವನ್ನು ಹೂಡಿಕೆ ಮಾಡಲು ಯಾವುದೇ ಮರ್ಯಾದೆಗಳಿಲ್ಲ.

ಈ ಪಾಲಿಸಿಯಲ್ಲಿ ಒಂದು ವೇಳೆ 5072000 ರೂಪಾಯಿಗಳ ಒಂದೇ ಮೊತ್ತವನ್ನು ಹೂಡಿಕೆ ಮಾಡಿದ್ದೆ ಆದಲ್ಲಿ, ನಿಮ್ಮ ಖಾತೆಯಲ್ಲಿ ಪ್ರತಿ ತಿಂಗಳು 19 ಸಾವಿರ ರೂಪಾಯಿಗಳು ಪಿಂಚಣಿಯ ಸ್ವರೂಪದಲ್ಲಿ ಜಮೆಯಾಗುವವು.