ಕಡಿಮೆ ಬೆಲೆ, ಹೆಚ್ಚು ಮೈಲೇಜ್; ತಿಳಿದುಕೊಳ್ಳಿ 4 ಲಕ್ಷಕ್ಕೂ ಕಡಿಮೆ ಬೆಲೆಗೆ ಸಿಗುವ ಬಜೆಟ್ ಕಾರುಗಳು!
ಸದ್ಯ ಸ್ವಂತದ ಕಾರು ಖರೀದಿಸುವುದು ನೀರು ಕುಡಿದಷ್ಟು ಸುಲಭವಾಗಿದೆ. ಕಾರಣ ಎಲ್ಲ ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳೊಂದಿಗೆ ಸಾಲ ಕೊಡಲು ಗ್ರಾಹಕನ ಮೇಲೆ ನಾಮುಂದು ತಾಮುಂದು ಎಂದು ಮುಗಿ ಬೀಳುತ್ತಿವೆ. ಅದರಲ್ಲಿ ದಸರೆ ಮತ್ತು ದೀಪಾವಳಿಯಂತಹ ದೊಡ್ಡ ದೊಡ್ಡ ಹಬ್ಬದ ವಾತಾವರಣಗಳಂತೂ ಬಂದರೆ ಮುಗಿದೇಹೋಯಿತು. ಈ ಸಮಯದಲ್ಲಿ ಗ್ರಾಹಕರಿಗಾಗಿ ಕಾರಿನ ಕಂಪನಿಗಳು ಮತ್ತು ಬ್ಯಾಂಕುಗಳು ದೊಡ್ಡ ದೊಡ್ಡ ಆಫರ್ ಗಳನ್ನೇ ತರುತ್ತಾರೆ.
ಒಂದು ವೇಳೆ ನೀವು ಈ ಹಬ್ಬಗಳ ಶುಭ ಮಹೂರ್ತದಲ್ಲಿ ಕಾರು ಖರೀದಿಸುವ ಯೋಚನೆ ಮಾಡುತ್ತಿದ್ದರೆ, ಹಾಗೂ ನಿಮ್ಮ ಬಜೆಟ್ 4 ಲಕ್ಷ ರೂಪಾಯಿಗಳದ್ದು ಆಗಿದ್ದರೆ ನಿಮ್ಮ ಹತ್ತಿರ ಒಳ್ಳೆಯ ವಾಹನವನ್ನು ಖರೀದಿಸುವ ಅವಕಾಶವಿದೆ ಎಂದೇ ಹೇಳಬಹುದು. ಸದ್ಯ ಮಾರುತಿ ಸುಜುಕಿಯು ತನ್ನ ಕಾರುಗಳ ಮೇಲೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಆಫರ್ ಗಳನ್ನು ನೀಡಿದೆ.

ಇದರಲ್ಲಿ Datsun Go ಈ ಕಾರು ಒಳ್ಳೆಯದು. ಈ ಕಾರಿನಲ್ಲಿ 1.2 ಲೀಟರಿನ ಪೆಟ್ರೋಲ್ ಇಂಜಿನ್ ನೀಡಲಾಗಿದೆ. BS6 Datsun Go 19.02 kmpl CVT ನಲ್ಲಿ 19.59 kmpl ಮೈಲೇಜ್ ನೀಡುತ್ತದೆ. ಈ ಕಾರನ್ನು ನೀವು 3.99 ಲಕ್ಷ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ. ಹೀಗಾಗಿ ಇದೊಂದು ಒಳ್ಳೆಯ ಆಯ್ಕೆಯಾಗಿದೆ.

Maruti Suzuki Alto- ಈ ಕಾರಿನ ಮೇಲೆ 18 ಸಾವಿರ ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್, 15 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಮತ್ತು 5 ಸಾವಿರ ರೂಪಾಯಿಗಳ ಡಿಸ್ಕೌಂಟ್ ಬೇರೆ ದೊರೆಯಲಿದೆ. ಕಂಪನಿಯು ಸರ್ವಸಾಮಾನ್ಯರ ಬಜೆಟ್ಟಿಗೆ ಸರಿ ಹೊಂದುವ ಸಲುವಾಗಿ ಈ ಕಾರಿನ ನಿರ್ಮಿತಿ ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಈ ಕಾರು ಒಂದಾಗಿದೆ. ಆಲ್ಟೊ ಕಾರು ಒಂದು ಲೀಟರ್ ಪೆಟ್ರೋಲಿಗೆ ಸುಮಾರು 22 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದನ್ನೇ ಒಂದು ವೇಳೆ CNG ಮುಖಾಂತರ ಯೂಸ್ ಮಾಡಿದ್ದಲ್ಲಿ 31.59 Km/kg ಇದೆ. ಈ ಕಾರಿನ ಬೆಲೆ 2,94,800 ರೂಪಾಯಿಗಳಷ್ಟಿದೆ.

ಹಾಗೆಯೇ Maruti S-Presso – ಈ ಕಾರು ಸಹ ಸಾಮಾನ್ಯರ ಜೇಬಿಗೆ ಸರಿದೂಗುವ ಬಜೆಟ್ ಕಾರಾಗಿದೆ. ಈ ಮಾರುತಿ ಎಸ್ ಪ್ರೆಸೋ ಒಂದು ಲೀಟರ್ ಪೆಟ್ರೋಲ್ ನಲ್ಲಿ 21.4 ಕಿಲೋಮೀಟರ್ ಮೈಲೇಜ್ ನೀಡುವುದು. ಈ ಕಾರನ್ನು ನೀವು 3.7 ಲಕ್ಷ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ.

ಈ Renault ಕಂಪನಿಯ Kwid BS6 ಮಾಡೆಲ್ ಖರೀದಿಯು ಒಂದು ಒಳ್ಳೆಯ ಆಯ್ಕೆಯಾಗಿದೆ. ಇದರಲ್ಲಿ 1.0 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. ಇದು 21-22 ಕಿಲೋಮೀಟರ್ ಪ್ರತಿ ಲೀಟರ್ ಗೆ ಮೈಲೇಜ್ ನೀಡುವಂತಹ ಕಾರಾಗಿದೆ.
Renault Kwid BS6 ಈ ಕಾರಿನ ಶೋರೂಮ್ ಬೆಲೆ 2.92 ಲಕ್ಷ ರೂಪಾಯಿಗಳಿಗೆ ಖರೀದಿಸಬಹುದಾಗಿದೆ.
ಮಿತ್ರರೇ ಒಂದು ವೇಳೆ ಮುಂಬರುವ ಹಬ್ಬದ ಮುಹೂರ್ತಗಳಲ್ಲಿ ಕಾರು ಖರೀದಿಸುವ ವಿಚಾರ ಮಾಡುತ್ತಿದ್ದರೆ, ಈ ಮೇಲಿನ ಬಜೆಟ್ ಕಾರ್ಯಗಳನ್ನು ನೀವು ಖರೀದಿಸಬಹುದು. ಜೊತೆಗೆ ಒಳ್ಳೆಯ ಆಫರ್ ಗಳು ಇರುವುದರಿಂದ ಇನ್ನಷ್ಟು ಹಣ ಉಳಿಸುವ ಅವಕಾಶವು ಇಲ್ಲಿದೆ.