ವಿಚಿತ್ರ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಜೀವ ತೆಗೆದುಕೊಂಡ ಹುಂಜ!
ಜಗತ್ತಿನ ಪಟಲದ ಮೇಲೆ ದಿನಂಪ್ರತಿ ಅನೇಕ ವಿಚಿತ್ರ ಘಟನೆಗಳು ನಡೆದ ವರದಿಗಳು ಬರುತ್ತಲೇ ಇರುತ್ತವೆ. ಸದ್ಯದ ರಿಪೋರ್ಟ್ ಫಿಲಿಪಿನ್ಸ್ ನಿಂದ ವರದಿಯಾಗಿದೆ. ವರದಿಯಾದ ಈ ಘಟನೆ ಅಷ್ಟೇ ವಿಚಿತ್ರವೂ ಆಗಿದೆ. ಇಲ್ಲಿ ಒಂದು ಹುಂಜವು ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣವಾಗಿದೆ.
ನೋಡಿ ಸಂಪೂರ್ಣ ವರದಿ.
ಫಿಲಿಪ್ಪೀನ್ಸ್ ನಲ್ಲಿ ಅನಧಿಕೃತವಾಗಿ ಹುಂಜಗಳ ಕಾಳಗವನ್ನು ಏರ್ಪಡಿಸಲಾಗುತ್ತದೆ. ಪೊಲೀಸರಿಗೆ ಸುದ್ದಿ ಗೊತ್ತಾದ ನಂತರ ಘಟನೆಯ ಸ್ಥಳಕ್ಕೆ ಹೋಗಿ ಪೊಲೀಸರು ರೇಡ್ ಹಾಕಿದಾಗ ಹುಂಜವೊಂದು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದೆ. ಈ ಹಲ್ಲೆ ತುಂಬಾ ಗಂಭೀರ ಸ್ವರೂಪದ್ದಾಗಿದ್ದುದರಿಂದ ಉಪಚಾರ ನೀಡುವ ಮೊದಲೇ ಪೊಲೀಸ್ ಅಧಿಕಾರಿಯು ಸಾವಿಗೀಡಾಗಿದ್ದಾನೆ. ಯಾವ ಹುಂಜವು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿತ್ತು ಆ ಹಂಜವು ಕಾಳಗದ ಹುಂಜವಾಗಿತ್ತು, ಅದರ ಕಾಲಿಗೆ ತಾಗಿಸಿದ್ದ ಬ್ಲೇಡಿನ ಎಡ್ಜ್ ನಿಂದ ತಯಾರಿಸಿದ ಮುಳ್ಳಿನಂತ ಮೊನಚಾದ ಚಿಕ್ಕ ಆಯುಧವನ್ನು ಕಟ್ಟಲಾಗಿರುತ್ತದೆ. ಇದು ಪೊಲೀಸ್ ಅಧಿಕಾರಿಯ ಕಾಲಿನ ನರವನ್ನು ಕತ್ತರಿಸಿದೆ. ಈ ಅನಾಹುತದಿಂದ ತುಂಬಾ ರಕ್ತಸ್ರಾವವಾಗಿ ವ್ಯಕ್ತಿ ಸಾವಿಗೀಡಾಗಿದ್ದಾನೆ. ಲೆಫ್ಟಿನೆಂಟ್ ಕ್ರಿಶ್ಚಿಯನ್ ಬೋಲೋಕ್ ತೀರಿಕೊಂಡ ಪೊಲೀಸ್ ಅಧಿಕಾರಿಯ ಹೆಸರಾಗಿದೆ.
ಡೇಲಿ ಮೇಲ್ ನೀಡಿದ ವೃತ್ತದ ಪ್ರಕಾರ, ಕಾಳಗ ನಡೆಸುವವರನ್ನು ಹಿಡಿಯುವ ಜಟಾಪಟಿಯಲ್ಲಿ ಹುಂಜಿನ ಕಾಲಿಗೆ ಸಿಲುಕಿಸಿದ ಚಿಕ್ಕ ಮತ್ತು ಹರಿತವಾದ ಆಯುಧ ಪೊಲೀಸ್ ಆಫೀಸರ್ ನ ಎಡಗಾಲಿನ ಹಿಂಭಾಗದಲ್ಲಿರುವ ನರದಲ್ಲಿ ಸಿಲುಕಿ ನರವನ್ನೇ ಕಟ್ ಮಾಡಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಆಗ ವ್ಯಕ್ತಿಗೆ ಆಸ್ಪತ್ರೆಯಲ್ಲಿ ದಾಖಲಿಸಲು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿ ಅಸುನೀಗಿದ್ದಾನೆ. ಫಿಲಿಪಿನ್ಸ್ ನಲ್ಲಿ ಹುಂಜಗಳ ಕಾಳಗ ತುಂಬಾ ಪ್ರಸಿದ್ಧವಾಗಿದೆ. ಈ ಆಟಕ್ಕೆ ಫಿಲಿಪ್ಪಿನ್ಸ್ ನ ಸ್ಥಾನಿಕ ಭಾಷೆಯಲ್ಲಿ ತುಪಡಾ ಎನ್ನುತ್ತಾರೆ. ಆಟದಲ್ಲಿ ಜನರು ಕಾನೂನುಬಾಹಿರವಾಗಿ ಹಣವನ್ನು ಆಡುತ್ತಾರೆ.
ಹುಂಜಗಳ ಈ ಆಟ ಫಿಲಿಪ್ಪಿನ್ಸ್ ನಲ್ಲಿ ತುಂಬಾ ಜೋರಾಗಿ ಆಡುತ್ತಾರೆ. ಈ ಹೋರಾಟವನ್ನು ಗೆಲ್ಲಲು ತಮ್ಮ ತಮ್ಮ ಹುಂಜುಗಳಿಗೆ ಆಯುಧದ ಜೊತೆಗೆ ಕಣಕ್ಕೆ ಇಳಿಸುತ್ತಾರೆ. ಈ ಭಯಾನಕವಾದ ಆಟವು ಎರಡರಲ್ಲಿ ಒಂದು ಹುಂಜ ಮರಣಿಸುವ ತನಕ ನಡೆದೇ ಇರುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಹುಂಜಿನಿಂದ ಒಬ್ಬ ಪೊಲೀಸ್ ಅಧಿಕಾರಿಯ ಜೀವ ಹೋಗುವದು ಎಂದರೆ ನಿಜಕ್ಕೂ ವಿಷಾದನೀಯ. ನಾನು 25 ವರ್ಷಗಳಿಂದ ಪೊಲೀಸ್ ಡ್ಯೂಟಿ ಮಾಡುತ್ತೇನೆ. ಈ ರೀತಿ ಜೀವ ಹೋಗುವುದನ್ನು ಕೇಳಿದ್ದು ಇದೇ ಮೊದಲ ಬಾರಿ ಎಂದು ಆತನ ಮಿತ್ರ ಅಪುಡ್ ಹೇಳುತ್ತಾನೆ. ನಾನು ನನ್ನ ಸಹಕಾರಿ ಮಿತ್ರನನ್ನು ಹುಂಜಿನ ಕಾಳಗದಲ್ಲಿ ಕಳೆದುಕೊಂಡೆನು ಎಂದು ದುಃಖ ವ್ಯಕ್ತ ಮಾಡಿದನು.
Fighting cock kills police officer during raid in the Philippines https://t.co/YKsRV36mAk
— Daily Mail Online (@MailOnline) October 27, 2020
ಸ್ಯನ್ ಜೋಸೆ ನಗರದಲ್ಲಿ ಹಾಕಿದ ರೇಡ್ ನಲ್ಲಿ ಈ ಸಂಬಂಧವಾಗಿ ಮೂರು ಜನರನ್ನು ಅರೆಸ್ಟ್ ಮಾಡಲಾಗಿ ಎರಡು ಹುಂಜಗಳನ್ನು ಜಪ್ತಿ ಮಾಡಲಾಗಿದೆ.