‘ಚಿಕನ್ 65′ ಹೆಸರಿನಲ್ಲಿಯ ’65’ ಇದು ಏನು, ‘ಈ’ ಹೆಸರು ಬಂದುದ್ದಾದರೂ ಹೇಗೆ? ಅಚ್ಚರಿ ಪಡಿಸುವ ಕಾರಣಗಳು ಒಮ್ಮೆ ನೋಡಿ

ಬಾಯಿಗೆ ನೀರು ಬಂತಾ ಮಿತ್ರರೇ? ಹೆಚ್ಚು ಕಡಿಮೆ ಚಿಕನ್ 65 ಎಲ್ಲರಿಗೂ ಗೊತ್ತೇ ಇದೆ. ಹೆಚ್ಚಿನವರು ಇದನ್ನೇ ತಿಂದೇ ಇದ್ದಾರೆ.

ಇದನ್ನು ತಿನ್ನುವಾಗ ಸಹಜವಾಗಿ ಎಷ್ಟೋ ಜನರಿಗೆ ಚಿಕನ್ 65 ಹೆಸರು ಹೇಗೆ ಬಂತು ಅಥವಾ ಇದಕ್ಕೆ ಚಿಕನ್ 65 ಏಕೆ ಅಂತಾರೆ ಎಂಬ ಪ್ರಶ್ನೆ ಕಾಡಿರಲೇಬೇಕು ಅಲ್ವಾ? ಇದೇ ಪ್ರಶ್ನೆಗೆ ನಾವು ನಮ್ಮ ಪ್ರಕಾರ ಅನುಮಾನದ ಉತ್ತರಗಳನ್ನು ಹುಡುಕಿ ತಂದಿದ್ದೇವೆ, ನಿಶ್ಚಿತವಾಗಿಯೂ ಇದರಲ್ಲಿಂದಲೇ ಒಂದು ಉತ್ತರವಾಗಿರಬೇಕು ಎಂದು ನಿಮಗೂ ಎನಿಸದೆ ಇರದು. ಹಾಗಾದರೆ ನೋಡಿ ಅವು ಯಾವುವು ಅಂತ?

ಅನುಮಾನ1:- ದಕ್ಷಿಣ ಭಾರತದಲ್ಲಿ ಕೆಲವು ವರ್ಷಗಳ ಹಿಂದೆ, ಒಬ್ಬ ಹೋಟೆಲ್ ಮಾಲೀಕ ಒಂದು ಡಿಶ್ ತಯಾರಿಸಿದ. ಸಾಮಾನ್ಯವಾಗಿ ಹೋಟೆಲ್ ಮತ್ತು ಬಾರ್ ಗಳಲ್ಲಿ ಆ ಸಮಯದಲ್ಲಿ ಒಂದು ಟ್ರೆಂಡ್ ಇತ್ತು, ಯಾರು ಎಷ್ಟು ಮೆಣಸಿನಕಾಯಿಗಳನ್ನು ತಿನ್ನುತ್ತಾರೆ ಎಂದು? ಆತ ತಯಾರಿಸಿದ ಪ್ರತಿ ಕಿಲೋ ಚಿಕನ್ ಡಿಶ್ ನಲ್ಲಿ 65 ಮೆಣಸಿನಕಾಯಿಗಳು ಇರುತ್ತಿದ್ದವು. ಅಂದಿನಿಂದಲೇ ಈ ಹೆಸರು ಪ್ರಚಲಿತದಲ್ಲಿದೆ ಎಂದು ಹೇಳುತ್ತಾರೆ.

ಅನುಮಾನ 2:- ಇನ್ನೊಂದು ಅನುಮಾನದ ಪ್ರಕಾರ ಒಂದು ಪ್ಲೇಟ್ ಚಿಕನ್ (65) ಡಿಶ್ ಆರ್ಡರ್ ಮಾಡಿದರೆ ಅದರಲ್ಲಿ ಸರಿಯಾಗಿ 65 ಪೀಸುಗಳನ್ನು ಕೊಡುತ್ತಿದ್ದರು. ಇದು ಒಂದು ಕಾರಣವಿರಬಹುದು.

ಅನುಮಾನ 3:- ಮೂರನೆಯ ಅನುಮಾನದ ಪ್ರಕಾರ 1965 ರಲ್ಲಿ ಚೆನ್ನೈಯ ಬುಹಾರಿ ರೆಸ್ಟಾರೆಂಟ್ ನವರು ಮೊಟ್ಟ ಮೊದಲ ಬಾರಿಗೆ ಈ ಡಿಶ್ ಪ್ರಾರಂಭಿಸಿದರು. ಇದೇ ಹೋಟೆಲಿನಲ್ಲಿ ಚಿಕನ್ 78, ಚಿಕನ್ 82, ಚಿಕನ್ 90 ಈ ಡಿಶ್ ಗಳು ಸಹ ಲಭ್ಯವಿದ್ದವು. ಅವರು ಈ ಡಿಶ್ ಗಳನ್ನು ಅನುಕ್ರಮವಾಗಿ 1978, 1982 ಮತ್ತು 1990 ಈ ವರ್ಷಗಳಲ್ಲಿ ಪ್ರಾರಂಭಿಸಿದರು. ಅದಕ್ಕಾಗಿ ಈ ಹೆಸರುಗಳು ಬಂದಿವೆ ಎಂದೂ ಅಂದಾಜಿಸಲಾಗಿತ್ತದೆ.

ಅನುಮಾನ 4:- ಕೊನೆಯ ಅನುಮಾನ ಉತ್ತರ ಭಾರತದಲ್ಲಿಯದಿದೆ. ಈ ಕೊನೆಯ ಅಂದಾಜಿನ ಪ್ರಕಾರ ಉತ್ತರ ಭಾರತದ ಸೈನಿಕರನ್ನು ದಕ್ಷಿಣ ಭಾರತದಲ್ಲಿ ಸೇವೆಗಾಗಿ ನಿಯುಕ್ತಿ ಮಾಡಲಾಗುತ್ತಿತ್ತು, ಆಗ ಅವರಿಗೆ ಭಾಷೆಯ ಸಮಸ್ಯೆ ತುಂಬಾ ಎದುರಾಗುತ್ತಿತ್ತು. ಚೆನ್ನೈಯ ಹೋಟೆಲುಗಳಲ್ಲಿ ಮೆನು ಸಹ ತಮಿಳು ಭಾಷೆಯಲ್ಲಿಯೇ ಇರುತ್ತಿತ್ತು. ಈ ಕಾರಣದಿಂದ ಅವರು ಆರ್ಡರ್ ಕೊಡುವಾಗ ಮೇನುವಿನ ಸೀರಿಯಲ್ ನಂಬರ್ ನೋಡಿ ಆ ನಂಬರ್ ಪ್ರಕಾರ ಆರ್ಡರ್ ಕೊಡುತ್ತಿದ್ದರು. ಈ ಡಿಶ್ ತುಂಬಾ ಫೇಮಸ್ ಇರುವದರಿಂದ ಈ ಶಬ್ದವೇ ತುಂಬಾ ಫೇಮಸ್ ಆಯಿತು ಏನೋ ಎಂದೆನಿಸುತ್ತದೆ. ಹೀಗೂ ಒಂದು ತರ್ಕವಿರಬಹುದು.

ಒಟ್ಟಿನಲ್ಲಿ ಚಿಕನ್ 65 ನಲ್ಲಿಯ 65 ಈ ಶಬ್ದದ ನಿಶ್ಚಿತ ಅರ್ಥ ಏನಿರಬಹುದು ಎಂದು ಹೇಳಲು ಯಾರ ಹತ್ತಿರ ನಿರ್ದಿಷ್ಟವಾಗಿ ಉತ್ತರವಿಲ್ಲ. ಇದರ ಹಿಂದೆ ಅನುಮಾನದ ಕಥೆಗಳು ಬಹಳಷ್ಟಿವೆ, ಅದರಲ್ಲಿಂದ ಕೆಲವು ಮಾತ್ರ ನಾವು ಹೇಳಿದ್ದೇವೆ. ಸ್ವಲ್ಪ ಮಟ್ಟಿಗೆ ಇವು ಸರಿಯೂ ಎನಿಸುತ್ತವೆ. ಆದರೆ ಓದುಗರೇ ನಿಮ್ಮ ಕಡೆಯೂ ಚಿಕನ್ 65 ಸಂಬಂಧವಾಗಿ ಬೇರೆ ಬೇರೆ ಅನುಮಾನಗಳು ಇದ್ದರು ಇರಬಹುದು ಇದರಲ್ಲಿ ಎರಡು ಮಾತಿಲ್ಲ.