ಗರ್ಲ್ ಫ್ರೆಂಡ್ ಗೆ ಲವ್ ಪ್ರಪೋಸ್ ಮಾಡಲು ಬೈಕ್ ರೇಸ್ ನಲ್ಲಿ ತಾನೆ ಆ್ಯ ಕ್ಸಿ ಡೆಂ ಟ್ ಮಾಡಿಸಿಕೊಂಡ: ಮುಂದೆ ನಡೆದಿದ್ದು ನೀವೇ ಓದಿ

ಮದುವೆಯ ವಿಚಾರ ಬಂದರೆ ಪ್ರಪಂಚದ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ವಿವಾಹ ಅಥವಾ ಮದುವೆಗಳ ಮೇಲೆ ಜನರಿಗೆ ಇರುವ ವ್ಯಾಮೋಹ ಅಥವಾ ಕ್ರೇಜ್ ಬೇರೆ ಯಾವ ದೇಶದಲ್ಲಿ ಕೂಡಾ ನಮಗೆ ನೋಡಲು ಸಿಗುವುದಿಲ್ಲ. ಅಲ್ಲದೇ ಆಡಂಬರದ ಮದುವೆಗಳು ಕೂಡಾ ನಮ್ಮ ದೇಶದಲ್ಲೇ ನಡೆಯುವುದು ಎನ್ನುವುದನ್ನು ಪ್ರತಿಯೊಬ್ಬರೂ ಕೂಡಾ ಒಪ್ಪಲೇಬೇಕು. ಬಹುಶಃ ವರ್ಷವೊಂದಕ್ಕೆ ಕೇವಲ ಮದುವೆಗಳಿಗಾಗಿಯೇ ಕೋಟ್ಯಾನುಕೋಟಿ ಹಣ ಖರ್ಚಾಗುವ ದೇಶ ಕೂಡಾ ಭಾರತವೇ ಎಂದು ನಾವು ಹೇಳಬಹುದು. ಇದು ಮದುವೆಯ ವಿಷಯ, ಇನ್ನು ಪ್ರೇಮ, ಪ್ರೀತಿಯ ವಿಷಯಕ್ಕೆ ಬಂದರೆ ಪ್ರೀತಿಗಾಗಿ ಪ್ರಾ ಣವನ್ನು ಕೂಡಾ ಲೆಕ್ಕಿಸದೆ ಸ ವಾ ಲುಗಳನ್ನು ಸ್ವೀಕಾರ ಮಾಡುವ ಮಂದಿ ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.

ತಮ್ಮ ಪ್ರೇಮ ನಿವೇದನೆಯನ್ನು ಪ್ರಿಯತಮೆಯ ಮುಂದೆ ಮಾಡಿಕೊಳ್ಳಲು ಪ್ರೇಮಿಯೊಬ್ಬ ತನ್ನ ಪ್ರಾ ಣ ವನ್ನು ಕೂಡಾ ಲೆಕ್ಕಿಸದೆ ಮಾಡಿದ ಒಂದು ಸಾಹಸ ಇದೀಗ ದೊಡ್ಡ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ‌. ಇಂತಹ ಒಂದು ಅಪರೂಪದ ಘಟನೆ ಅಮೆರಿಕಾದ ಫ್ಲೊರಿಡಾದಲ್ಲಿ ನಡೆದಿದೆ. ಇಲ್ಲಿನ ಮಿಯಾಮಿಯಲ್ಲಿ ಬೈಕ್ ರೇಸ್ ನಡೆಯುವ ಸಂದರ್ಭದಲ್ಲಿ ಬೈಕರ್ ಒಬ್ಬರು ತನ್ನ ಪ್ರೇಯಸಿಗೆ ಒಂದು ಅ ಪಾ ಯ ಕಾರಿಯಾದ ಸ್ಟಂಟ್ ಮಾಡುವ ಮೂಲಕ ಪ್ರೇಮ ನಿವೇದನೆ ಅಂದರೆ ತನ್ನ ಲವ್ ಪ್ರಪೋಜ್ ಮಾಡಿದ್ದು, ಜನರು ಕೂಡಾ ಆಶ್ಚರ್ಯ ಪಡುವಂತಾಗಿದೆ.

ಈ ಲವ್ ಪ್ರಪೋಸ್ ಸಿನಿಮೀಯ ಮಾದರಿಯಲ್ಲಿ ಇದ್ದು ಇಲ್ಲಿ ನಾಯಕನಾಗಿದ್ದವರು ಬೈಕರ್ ಜೆರೆಮಿ ಡರ್ಸ್ಟ್ ಹಾಗೂ ನಾಯಕಿ ಅವರ ಪ್ರೇಯಸಿಯಾದ ಸಾರಾ ಫ್ರಾಂಕ್. ಲವ್ ಪ್ರಪೋಸ್ ಮಾಡುವ ಸಲುವಾಗಿ ಜೆರೆಮಿ ಪೆನ್ಸಿಲ್ವೇನಿಯಾದಲ್ಲಿ ಹ್ಯಾರಿಸ್ ಬರ್ಗ್ ನ ಮೋಟಾರಾಮ ರೇಸಿಂಗ್ ಈವೆಂಟ್ ನಲ್ಲಿ ಪಾಲ್ಗೊಂಡಿದ್ದಾರೆ‌. ರೇಸಿಂಗ್ ನಲ್ಲಿ ತನ್ನ ಬೈಕ್ ಆ್ಯ ಕ್ಸಿ ಡೆಂ ಟ್ ಆದ ಹಾಗೆ ಸೀನ್ ಕ್ರಿಯೇಟ್ ಮಾಡಿ ನಾಟಕವಾಡಿದ್ದಾರೆ ಜೆರೆಮಿ. ಇದು ಜೆರೆಮಿಯ ಮೊದಲನೇ ಬೈಕ್ ರೇಸ್, ಇದರಲ್ಲೇ ಅ ಪ ಘಾ ತ ವಾದಂತೆ ನಟಿಸಿ ಸಾರಾ ಅವರ ಕುಟುಂಬ ಹಾಗೂ ಜನರ ಮುಂದೆ ಸಾರಾಗ ಲವ್ ಪ್ರಪೋಸ್ ಮಾಡುವುದು ಅವರ ಪ್ಲಾನ್ ಆಗಿತ್ತು.

ಜೆರೆಮಿ ಬೈಕ್ ರೇಸ್ ನಲ್ಲಿ ಭಾಗವಹಿಸಿದ್ದ ದೃಶ್ಯಾವಳಿಗಳನ್ನು ಗಮನಿಸಿದಾಗ ಆತ ಉದ್ದೇಶ ಪೂರ್ವಕವಾಗಿಯೇ ಬೈಕ್ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅನಂತರ ಬೈಕರ್ ನಿಯಂತ್ರಣ ತಪ್ಪಿದ ಬೈಕ್ ಟ್ರಾಕ್ ನಿಂದ ಮಣ್ಣಿನ ಮೇಲೆ ಸ್ವಲ್ಪ ದೂರ ಜೆರೆಮಿ ಹಾಗೂ ಅವರ ಬೈಕ್ ನೆಲದ ಮೇಲೆ ಬಿದ್ದು ಹಾಗೆ ಮುಂದೆ ಹೋಗಿದೆ. ಜೆರೆಮಿ ಬೈಕ್ ರೇಸ್ ಇವೆಂಟ್ ನಲ್ಲೇ ಏಕೆ ಪ್ರೇಮ ನಿವೇದನೆ ಮಾಡುವ ನಿರ್ಧಾರ ಮಾಡಿದರು ಎನ್ನುವುದಕ್ಕೆ ಕೂಡಾ ನಿರ್ದಿಷ್ಟವಾದ ಕಾರಣವು ಇದೆ. ಜೆರೆಮಿ ಗೆ ತಮ್ಮ ಹಾಗೂ ಸಾರಾ ಕುಟುಂಬದವರ ಎದುರಲ್ಲೇ ಲವ್ ಪ್ರಪೋಸ್ ಮಾಡುವ ಆಸೆಯಿತ್ತು.

ಜೆರೆಮಿ ಅಲ್ಲಿನ ಸಂಘಟಕರ ಜೊತೆ ಸೇರಿ ಪ್ಲಾನ್ ಮಾಡಿದ್ದರು. ಅವರು ಬಿದ್ದ ಕೂಡಲೇ ಅಲ್ಲಿನ ಅಧಿಕಾರಿಯೊಬ್ಬರು ಓಡಿ ಬಂದು ಮೈಕ್ ಮತ್ತು ರಿಂಗ್ ನೀಡಿದ್ದಾರೆ. ಆ ವೇಳೆಗೆ ಸಾರಾ ಕೂಡಾ ಜೆರೆಮಿಗೆ ಏನಾಯ್ತೋ ಎಂದು ಅವರ ಕಡೆ ಓಡಿ ಬಂದಿದ್ದಾರೆ. ಆಕೆ ಹತ್ತಿರ ಬಂದ ಕೂಡಲೇ ಜೆರಮಿ ಮೊಣಕಾಲೂರಿ ಕುಳಿತು ರಿಂಗ್ ನೀಡುತ್ತಾ ಲವ್ ಪ್ರಪೋಸ್ ಮಾಡಿದ್ದಾರೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಸಾರಾ ಆಶ್ಚರ್ಯ ಪಟ್ಟಿದ್ದು, ತನ್ನ ಪ್ರೀತಿಗಾಗಿ ಜೆರೆಮಿ ಇಷ್ಟೆಲ್ಲಾ ಸಾಹಸ ಮಾಡಿದ್ದಾರೆಂದು
ತಿಳಿದು ಪುಳಕಿತಳಾಗಿದ್ದು, ಜೆರಮಿಯ ಲವ್ ಪ್ರೋಪಸ್ ಅನ್ನು ಒಪ್ಪಿಕೊಂಡಿದ್ದಾರೆ.