OMG! ಕಾರಲ್ಲಿ ಸಮಸ್ಯೆ ಎಂದು 2 ಕೋಟಿಯ ಮರ್ಸಿಡಿಸ್ ಕಾರಿಗೆ ಬೆಂಕಿ ಇಟ್ಟ ಭೂಪ: ನೋಡಿ ಈ Video

ಕೆಲವರ ಮನಸ್ಥಿತಿ ಕೆಲವೊಮ್ಮೆ ಹೇಗಿರುತ್ತದೆ ಎಂಬುದನ್ನು ಯಾರೂ ಕೂಡಾ ಊಹೆ ಮಾಡಲಾಗುವುದಿಲ್ಲ. ಕೆಲವರ ವರ್ತನೆಯಂತೂ ವಿಚಿತ್ರ ಹಾಗೂ ಆ ಘಾ ತ ಕಾರಿಯಾಗಿ ಕೂಡಾ ಇರುತ್ತದೆ. ರಷ್ಯಾದ ಒಬ್ಬ ಯೂಟ್ಯೂಬರ್ ಒಬ್ಬರು ತನ್ನ ಮರ್ಸಿಡೀಸ್ ಬೆನ್ಜ್ ಕಾರನ್ನು ಸು ಟ್ಟು ಹಾಕಿದ್ದು ಈ ವೀಡಯೋ ನೋಡಿದ ಲಕ್ಷಾಂತರ ವೀಕ್ಷಕರು ಕೂಡಾ ಒಂದು ಕ್ಷಣ ಶಾ ಕ್ ಆಗಿದ್ದಾರೆ. ಮಾದ್ಯಮ ಒಂದರ ವರದಿಯ ಪ್ರಕಾರ ರಷ್ಯಾದ ಬ್ಲಾಗರ್ ಮೈಖೇಲ್ ಲಿಟ್ವಿನ್ ಬಹಳ ಸಮಯದಿಂದ ತಮ್ಮ ಕಾರಿನ ಬಗ್ಗೆ ತೀವ್ರವಾದ ಅ ಸ ಮಾಧಾನ ಹೊಂದಿದ್ದರು ಎನ್ನಲಾಗಿದೆ. ಆತ ತನ್ನ ಕಾರನ್ನು ಒಂದು ಖಾಲಿ ಮೈದಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ.

ಮೈಕೇಲ್ ತನ್ನ ಮರ್ಸಿಡೀಸ್ ಎಎಂಜಿ ಜಿಟಿ 63 ಎಸ್ ಕಾರನ್ನು 2.3 ಕೋಟಿ ರೂಪಾಯಿಗಳನ್ನು ನೀಡಿ ಅಧಿಕೃತ ಮಾರಾಟಗಾರರಿಂದ ಖರೀದಿ ಮಾಡಿದ್ದರು. ಆದರೆ ಈಗ ಅದೇ ಐಶಾರಾಮೀ ಕಾರನ್ನು ಸು ಟ್ಟು ಹಾಕಿದ್ದು, ಆ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಮೈಕೇಲ್ ಕಾರು ಖರೀದಿ ಮಾಡಿದ ಸ್ವಲ್ಪ ದಿನಗಳ ನಂತರ ಅದರಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಮೈಕೇಲ್ ಅದನ್ನು ಸರಿ ಮಾಡುವಂತೆ ಮಾರಾಟಗಾರರಿಗೆ ಐದು ಬಾರಿ ತನ್ನ ಕಾರನ್ನು ಕಳುಹಿಸಿದ್ದಾರೆ. ಆದರೆ ದು ರಸ್ತಿ ಮಾತ್ರ ಸರಿಯಾಗಿ ಆಗಿಲ್ಲ. ಅಲ್ಲದೇ ಪ್ರತಿ ಬಾರಿ ಸುಮಾರು 40 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ. ಅನಂತರ ಜರ್ಮನಿಯಿಂದ ಹೊಸ ಟರ್ಬೈನ್ ತರಿಸಿ ರಿಪೇರಿ ಮಾಡಿದರೂ ಕೂಡಾ ಕಾರಿನ ಸಮಸ್ಯೆ ಬಗೆಹರಿದಿಲ್ಲ‌.

ಎಷ್ಟೇ ಪ್ರಯತ್ನ ಪಟ್ಟರೂ ಕಾರಿಗೆ ಸರಿಯಾಗಲಿಲ್ಲ. ಮೈಕೇಲ್ ಈ ಬಗ್ಗೆ ಬೇಸರ ಪಟ್ಟುಕೊಂಡರು. ಅವರು ಡೀಲರ್ ಗೆ ಕಾಲ್ ಮಾಡಿದರೆ ಅವರು ಕೂಡಾ ಕರೆಯನ್ನು ಸ್ವೀಕರಿಸುವುದು ನಿಲ್ಲಿಸಿಬಿಟ್ಟರು. ಇಷ್ಟಪಟ್ಟು ಕೊಂಡ ಕಾರಿನಲ್ಲಿ ಉಂಟಾದ ಸಮಸ್ಯೆ, ಅದಕ್ಕೆ ಮಾರಾಟಗಾರರಿಂದ ಸರಿಯಾದ ಪ್ರತಿಕ್ರಿಯೆ ಹಾಗೂ ಸರಿಯಾದ ಸೇವೆ ದೊರೆಯದೇ ಬೇ ಸ ತ್ತ ಮೈಕೇಲ್ ಕಡೆಗೆ ತನ್ನ ಸಿ ಟ್ಟ ನ್ನು ಹಾಗೂ ಕಾರು ಮಾರಾಟಗಾರರ ವಿ ರು ದ್ಧ ತನ್ನ ಅ ಸಮಾಧಾನವನ್ನು ಹೊರಹಾಕಲು ನಿರ್ಧರಿಸಿ ಒಂದು ತೀರ್ಮಾನವನ್ನು ಮಾಡಿದರು. ಬಹುಶಃ ಅಂತಹುದೊಂದು ತೀರ್ಮಾನವನ್ನು ಯಾರೂ ಕೂಡಾ ಊಹೆ ಮಾಡಿರಲಿಲ್ಲ.

ಮೈಕೇಲ್ ತನ್ನ ಐಶಾರಾಮೀ ಕಾರನ್ನು ಸು ಟ್ಟು ತನ್ನ ವಿ ರೋ ಧವನ್ನು ವ್ಯಕ್ತಪಡಿಸುವ ದೃಢ ನಿರ್ಧಾರವನ್ನು‌ ಮಾಡಿದ್ದರು. ಅದೇ ಕಾರಣದಿಂದ ಅವರು ತನ್ನ ಕಾರನ್ನು ಒಂದು ಖಾಲಿ ಇರುವ ಮೈದಾನಕ್ಕೆ ತೆಗೆದುಕೊಂಡು ಹೋಗಿ ಕಾರಿನ ಮೇಲೆ ಪೆಟ್ರೋಲ್ ಸುರಿದು,ಅದಕ್ಕೆ ಬೆಂ ಕಿ ಇಟ್ಟಿದ್ದಾರೆ. ತನ್ನ ಕಾರನ್ನು ಸು ಟ್ಟು ಹಾಕಿದ ವೀಡಿಯೋವನ್ನು ಕೂಡಾ ಮೈಕೇಲ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಮರ್ಸಿಡಿಸ್ ಕಡೆಯಿಂದ ಸಹಾಯ ದೊರೆಯದ ಕಾರಣ ಏನೂ ಮಾಡಬೇಕೆಂದು ಬಹಳ ದಿನಗಳಿಂದ ಯೋಚಿಸಿ, ಕಡೆಗೆ ಕಾರನ್ನು ಸು ಡ ಲು ತೀರ್ಮಾನ ಮಾಡಿದೆ ಎಂದು ಬರೆದುಕೊಂಡಿದ್ದಾರೆ.‌

ವಿಡಿಯೋ ನೋಡಿ

ಮೈಕೇಲ್ ಶೇರ್ ಮಾಡಿದ ಈ ವೀಡಿಯೋವನ್ನು 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಅನೇಕರು ಶಾ ಕ್ ಆಗಿದ್ದಾರೆ. ಒಬ್ಬರು ಅಮೆರಿಕನ್ ಯೂಟ್ಯೂಬರ್ ಐಫೋನ್ ಮುರಿದು ಹಾಕಿದರೆ, ರಷ್ಯನ್ ಯೂಟ್ಯೂಬರ್ ಮರ್ಸಿಡಿಸ್ ಕಾರನ್ನು ಸು ಟ್ಟು ಹಾಕುತ್ತಾರೆ ಎನ್ನುವ ಪ್ರತಿಕ್ರಿಯೆಯನ್ನು ಕೂಡಾ ನೀಡಿದ್ದಾರೆ. ನೆಟ್ಟಿಗರು ಅನೇಕರು ಹಾಗೆ ಮಾಡಬಾರದಿತ್ತು ಎಂದು ತಮ್ಮ ಅಭಿಪ್ರಾಯ ಕಾಮೆಂಟ್ ಮಾಡಿದ್ದಾರೆ. ಮೈಕೇಲ್ ಅವರಿಗೆ ಯೂಟ್ಯೂಬ್ ನಲ್ಲಿ ಒಟ್ಟು ಐದು ಮಿಲಿಯನ್ ಫಾಲೋಯರ್ಸ್ ಇರುವುದು ಕೂಡಾ ನಾವು ಗಮನಿಸಬಹುದಾಗಿದೆ.