ರಾಗಿಣಿ ಪ್ರಜ್ವಲ್ ಅವರ ಈ ಫಿಟ್ನೆಸ್ ವೀಡಿಯೋ ನೋಡಿದ್ರೆ ಅಬ್ಬಾ ಏನು ಫಿಟ್ನೆಸ್ ಅನ್ನದೇ ಇರೋಕೆ ಸಾಧ್ಯವೇ ಇಲ್ಲ! ನೋಡಿ ಈ Video
ಇತ್ತೀಚಿನ ವರ್ಷಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಕಾಳಜಿಯನ್ನು ಜನರು ತೋರಲು ಆರಂಭಿಸಿದ್ದಾರೆ. ಒಂದು ಕಡೆ ಆಧುನಿಕ ಜೀವನದ ಒತ್ತಡ, ಇನ್ನೊಂದೆಡೆ
ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳು, ಮತ್ತೊಂದೆಡೆ ಸಾಂಕ್ರಾಮಿಕಗಳ ಭಯದ ನಡುವೆಯೇ ಹೆಚ್ಚುತ್ತಿರುವ ಆಸ್ಪತ್ರೆಯ ವೆಚ್ಚಗಳು ಜನರನ್ನು ಆರೋಗ್ಯದ ಕಡೆ ಹೆಚ್ಚು ಕಾಳಜಿಯನ್ನು ವಹಿಸುವಂತೆ ಮಾಡುತ್ತಿವೆ. ಇಂದು ಜನರು ಆಹಾರದ ಕ್ರಮದಿಂದ ಹಿಡಿದು, ಜೀವನ ವಿಧಾನವನ್ನು ಕೂಡಾ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚಿನ ಕಾಳಜಿಯನ್ನು ವಹಿಸಿ ಇಂಟರ್ನೆಟ್ ನಲ್ಲಿ ಕೂಡಾ ಆರೋಗ್ಯ ಸಂಬಂಧಿತ ವಿಚಾರಗಳನ್ನು ಹುಡುಕುವುದು ಕೂಡಾ ಸಾಮಾನ್ಯವಾಗಿದೆ.
ಇನ್ನು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಸೆಲೆಬ್ರಿಟಿಗಳು ಕೂಡಾ ಹಿಂದೆ ಬಿದ್ದಿಲ್ಲ.
ಸಿನಿಮಾ ನಟ, ನಟಿಯರು ಮಾತ್ರವೇ ಅಲ್ಲದೇ ಅನೇಕರು ಫಿಟ್ನೆಸ್ ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕವೇ ಸೆಲೆಬ್ರಿಟಿಗಳಂತೆ ಹಿಂಬಾಲಕರನ್ನು ಪಡೆದುಕೊಂಡು ಜನಪ್ರಿಯತೆಯನ್ನು ಕೂಡಾ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಕೂಡಾ ನಿಜ. ಸಿನಿಮಾ ನಟಿಯರು ಆಗಾಗ ಫಿಟ್ನೆಸ್ ವೀಡಿಯೋಗಳನ್ನು ಶೇರ್ ಮಾಡಿ ಅದರ ಉಪಯೋಗ ಏನೆಂದು ಕೂಡಾ ವಿವರಿಸುವುದು ವಿಶೇಷ.
ಕನ್ನಡದಲ್ಲಿ ಕೂಡಾ ಇಂತಹುದೊಂದು ಕಾರ್ಯವನ್ನು ಮಾಡ್ತಾ ಇದ್ದಾರೆ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ಕೂಡಾ ಮಾಡುತ್ತಿದ್ದಾರೆ. ರಾಗಿಣಿ ಪ್ರಜ್ವಲ್ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಆಗಾಗ ಫಿಟ್ನೆಸ್ ವೀಡಿಯೋಗಳನ್ನು ಶೇರ್ ಮಾಡುತ್ತಾರೆ. ಅವರ ವೀಡಿಯೋಗಳು ಅಷ್ಟೇ ಭರ್ಜರಿಯಾಗಿ ವೀಕ್ಷಣೆ ಪಡುವುದು ಮಾತ್ರವೇ ಅಲ್ಲದೇ ಅವರ ಈ ಫಿಟ್ನೆಸ್ ವೀಡಿಯೋಗಳು ನೂರಾರು ಜನ ಅಭಿಮಾನಿಗಳು ಹಾಗೂ ನೆಟ್ಟಿಗರು ಕೂಡಾ ಮೆಚ್ಚುಗೆಯನ್ನು ತಮ್ಮ ಪ್ರತಿಕ್ರಿಯೆಗಳ ಮೂಲಕ ತಿಳಿಸುತ್ತಾರೆ.
ರಾಗಿಣಿ ಪ್ರಜ್ವಲ್ ಅವರು ಈಗ ಒಂದು ಫಿಟ್ನೆಸ್ ವೀಡಿಯೋ ಒಂದನ್ನು ಹಂಚಿಕೊಂಡಿದ್ದು ಈಗಾಗಲೇ ಈ ವೀಡಿಯೋವನ್ನು 6 ಲಕ್ಷ 30 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಸುಮಾರು 30 ಸಾವಿರಕ್ಕಿಂತ ಅಧಿಕ ಜನರು ಈ ವೀಡಿಯೋವನ್ನು ಇಷ್ಟ ಪಟ್ಟಿದ್ದಾರೆ. ಅಲ್ಲದೇ ನೂರಾರು ಜನರು ವೀಡಿಯೋವನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಬಾರಿ ರಾಗಿಣಿ ದೇವರಾಜ್ ಅವರು ಫಿಟ್ನೆಸ್ ವೀಡಿಯೋ ಹಂಚಿಕೊಂಡಿದ್ದು, ಅದರ ಜೊತೆಗೆ ಅದರಿಂದಾಗುವ ಪ್ರಯೋಜನ ಏನೆಂಬುದನ್ನು ಕೂಡಾ ತಿಳಿಸಿದ್ದಾರೆ. ವಾರಕ್ಕೊಮ್ಮೆ ಫಿಟ್ನೆಸ್ ಎಕ್ಸ ಸೈಸ್ ಮಾಡುವಾಗ ಹಿಟ್ ಗಳನ್ನು ಮಾಡುವುದು ಅತಿ ಅವಶ್ಯಕವಾಗಿದೆ.
ಇದು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸಮರ್ಪಕವಾಗಿ ಇರಿಸುತ್ತದೆ, ದೇಹದಲ್ಲಿ ಕೂಡಿರುವ ಕೊಬ್ಬನ್ನು ಬೇಗ ಕರಗಿಸಲು ನೆರವಾಗುತ್ತದೆ, 200 ಕ್ಯಾಲರಿಗಳ ಫ್ಯಾಟ್ ಬ ರ್ನ್ ಮಾಡಲು ಇದು ನೆರವಾಗುತ್ತದೆ. ಮಸಲ್ ಗ್ರೋತ್ ಮತ್ತು ಬಾಡಿ ಟೋನ್ ಅನ್ನು ಕೂಡಾ ಸಮರ್ಪಕವಾಗಿ ಇರಿಸಲು ಈ ಅಭ್ಯಾಸ ಅಗತ್ಯ ಎಂದು ರಾಗಿಣಿ ಅವರು ವೀಡಿಯೋ ಜೊತೆಗೆ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ವೀಡಿಯೋವನ್ನು ನೋಡಿದ ಅನೇಕರು ರಾಗಿಣಿ ಅವರ ಈ ಫಿಟ್ನೆಸ್ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.