ರಸ್ತೆ ಮೇಲೆ ಚಲಿಸುತ್ತಲೇ ವಿಮಾನವಾಗಿ ಬದಲಾಗಿ ಹಾರುವ ಕಾರು: ವೀಡಿಯೋ ನೋಡಿ ಬೆರಗಾದ ನೆಟ್ಟಿಗರು
ಹಾರುವ ಕಾರು ಇದ್ದರೆ ಟ್ರಾಫಿಕ್ ಸಮಸ್ಯೆ ಇರಲ್ಲ, ಆರಾಮವಾಗಿ ಬೇಗ ಹೋಗಬೇಕಾದ ಸ್ಥಳವನ್ನು ತಲುಪಬಹುದು ಅಲ್ಲವೇ? ಇದೊಂದು ಕಲ್ಪನೆ ಎನ್ನುವುದರಿಂದ ಶೀಘ್ರದಲ್ಲೇ ವಾಸ್ತವ ಆಗೋ ಎಲ್ಲಾ ಲಕ್ಷಣಗಳು ಕೂಡಾ ಕಂಡು ಬರುತ್ತಿವೆ ಎಂದು ನಾವು ಹೇಳಬಹುದು. ಸ್ಲೋವಾಕಿಯಾ ಕಂಪನಿಯೊಂದು ಫ್ಲೈಯಿಂಗ್ ಕಾರನ್ನು ಅಭಿವೃದ್ಧಿ ಪಡಿಸಲು ಸುಮಾರು 30 ವರ್ಷಗಳಿಂದಲೂ ಕೂಡಾ ಸತತವಾದ ಪ್ರಯತ್ನವನ್ನು ಮಾಡುತ್ತಾ ಬರುತ್ತಿದೆ. ಜಾಗತಿಕ ಮಟ್ಟದ ಮಾದ್ಯಮವೊಂದರ ವರದಿಯ ಪ್ರಕಾರ ಕ್ಲೆನ್ ವಿಷನ್ ಎನ್ನುವ ಸಂಸ್ಥೆಗೆ ತನ್ನ ಕನಸನ್ನು ನನಸು ಮಾಡಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿದ್ದು, ಹಾರುವ ಕಾರು ತನ್ನ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದೆ ಎನ್ನಲಾಗಿದೆ.
ಹೌದು ಹಾರುವ ಕಾರಿನ ಬಗ್ಗೆ ಒಂದು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಇತ್ತೀಚಿಗೆ ವರದಿಯೊಂದನ್ನು ಕೂಡಾ ಪ್ರಕಟ ಮಾಡಿದೆ. ಈ ಹಾರುವ ಕಾರು ನೆಲದ ಮೇಲೆ ಹಾಗೂ ಗಾಳಿಯಲ್ಲಿ ಕೂಡಾ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ರಸ್ತೆಯಲ್ಲಿ ಸಂಚರಿಸುತ್ತಲೇ ಕಾರು ವಿಮಾನದಂತೆ ಹಾರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಾರುವ ಕಾರು 1,100 ಕೆಜಿ ತೂಕವನ್ನು ಹೊಂದಿದ್ದು, ಹೆಚ್ಚುವರಿ 200 ಕೆಜಿ ತೂಕವನ್ನು ಇದು ಹೊರುವ ಸಾಮರ್ಥ್ಯವನ್ನು ಅದು ಹೊಂದಿದೆ ಎನ್ನಲಾಗಿದೆ. ಕ್ಲೆನ್ ವಿಶನ್ ಸಂಸ್ಥೆ ತನ್ನ ಈ ಹೊಸ ಕಾರಿನ ಬಗ್ಗೆ ವೀಡಿಯೋ ಶೇರ್ ಮಾಡಿದ್ದು ಅದರ ವಿಶೇಷತೆಯನ್ನು ಕೂಡಾ ತಿಳಿಸಿದೆ.
ಕ್ಲೆನ್ ವಿಶನ್ ತನ್ನ ಕಾರು ಮೂರೇ ನಿಮಿಷದಲ್ಲಿ ರಸ್ತೆಯ ಮೇಲೆ ಸಂಚರಿಸುವ ವಾಹನದಿಂದ ಹಾರುವ ವಿಮಾನವಾಗಿ ಬದಲಾಗುತ್ತದೆ. ವೀಡಿಯೋದಲ್ಲಿ ಕೂಡಾ ಈ ಕಾರು ಮೊದಲು ರಸ್ತೆಯ ಮೇಲೆ ಚಲಿಸುತ್ತಾ ಅನಂತರ ವಿಮಾನದಂತೆ ಹಾರುವುದನ್ನು ನಾವು ಗಮನಿಸಬಹುದು. ವೈರಲ್ ಆದ ವೀಡಿಯೋ ನೋಡಿದ ನೆಟ್ಟಿಗರೊಬ್ಬರು, ಬಹಳ ಪ್ರಭಾವಶಾಲಿಯಾದ ಕಾರು ಇದಾಗಿದೆ, ಕಡೆಗೂ ಹಾರು ಕಾರು ಸಿಕ್ಕಿಂತಾಯಿತು ಪ್ರೊಫೆಸರ್ ಕ್ಲೆನ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತೋರ್ವ ನೆಟ್ಟಿಗರು ನಿಜವಾಗಿಯೂ ಈ ಕಾರು ಅದ್ಭುತವಾಗಿದೆ, ನಾನು ಇದನ್ನು ಆದಷ್ಟು ಬೇಗ ಪಡೆಯಲು ಇಚ್ಛಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಆಟೋ ಇವೆಲ್ಯೂಷನ್ ಪ್ರಕಾರ ಕಡೆಯ ಬಾರಿ ಏರ್ ಕಾರು ಅಥವಾ ಹಾರುವ ಕಾರನ್ನು 2019 ರಲ್ಲಿ ಮೂಲ ಮಾದರಿಯನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿತ್ತು. ಇನ್ನು ಇತ್ತೀಚಿಗೆ ಹಾರುವ ಕಾರಿನ ಪರೀಕ್ಷಾ ಹಾರಾಟವನ್ನು ಸ್ಲೋವಾಕಿಯಾದ ಪಿಯಾಸ್ಟ್ನಿ ವಿಮಾನ ನಿಲ್ದಾಣದಲ್ಲಿ ನಡೆಸಲಾಯಿತು.
ಪರೀಕ್ಷೆಯಲ್ಲಿ ಎರಡು ಟೇಕ್ ಆಫ್ ಮತ್ತು ಎರಡು ಲ್ಯಾಂಡಿಂಗ್ ಮಾಡಲಾಗಿದೆ. ಈ ಎಲ್ಲಾ ಪರೀಕ್ಷೆಯಲ್ಲಿ ಕೂಡಾ ಹೊಸ ಹಾರುವ ಕಾರು ಯಶಸ್ವಿಯಾಗಿ ತನ್ನ ಹಾರಾಟವನ್ನು ನಡೆಸಿದೆ. ಇನ್ನು ಈ ವಿಮಾನವನ್ನು ಅಭಿವೃದ್ಧಿ ಪಡಿಸಿರುವವರು ಕ್ಲೆನ್ ವಿಶನ್ ಸಂಸ್ಥೆಯ ಪ್ರೊಫೆಸರ್ ಸ್ಟೀಫನ್ ಕ್ಲೆನ್ಸ್ ಅವರು.
ವಿಡಿಯೋ ನೋಡಿ.
ಇನ್ನು ಈ ಕಾರು ನೆಲದಿಂದ ಸುಮಾರು 300 ಮೀಟರ್ ಮೇಲೆ ಹಾರಬಲ್ಲದು ಹಾಗೂ ಗಂಟೆಗೆ 200 ಕಿಮೀ ವೇಗದಲ್ಲಿ ಹಾರುವುದು ಎನ್ನಲಾಗಿದೆ. ಒಟ್ಟಾರೆ ಟ್ರಾಫಿಕ್ ಜಂಜಾಟದಿಂದ ಬೇ ಸ ತ್ತ ಜನರಿಗೆ ಈ ಹಾರುವ ಕಾರುಗಳು ನಿಜಕ್ಕೂ ವರವಾಗಲಿದೆ ಎನ್ನಲಾಗಿದೆ. ಅಲ್ಲದೇ ಭವಿಷ್ಯದಲ್ಲಿ ಈ ಕಾರುಗಳ ಬಳಕೆ ಅನಿವಾರ್ಯ ಕೂಡಾ ಆಗಬಹುದು ಎಂದು ಅನೇಕರು ಅಭಿಪ್ರಾಯ ಕೂಡಾ ಆಗಿದೆ. ಈ ಹೊಸ ಹಾರುವ ಕಾರುಗಳ ಬೆಳವಣಿಗೆ ಯಾವ ಮಟ್ಟದಲ್ಲಿ ಆಗಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.