ಲಾಕ್ ಡಾವುನ್ ಅವಾಂತರ! 70 ಲಕ್ಷ ಮಹಿಳೆಯರು ಗರ್ಭ ಧರಿಸಲಿದ್ದಾರಂತೆ!
ಕೊರೊನ ವೈರಸ್ ಹರಡುವದನ್ನು ನಿಲ್ಲಿಸಬೇಕಾದರೆ ಮೊಟ್ಟ ಮೊದಲ ರಾಮಬಾಣ ಉಪಾಯವೇ ಈ ಲಾಕ್ ಡಾವುನ್.ಹೀಗಾಗಿ ಜಗತ್ತಿನ ಹೆಚ್ಚುವರಿ ದೇಶಗಳು ಲಾಕ್ ಡಾವುನ್ ಮೊರೆ ಹೋಗಿವೆ.ಈ ಲಾಕ್ ಡಾವುನ್ ನಿಂದ ಮದ್ಯವಯಸ್ಸು ಮತ್ತು ಜ್ಯೇಷ್ಠ ನಾಗರಿಕರ ಆರೋಗ್ಯ ಸೇವೆಯ ಮೇಲೆ ವಿಪರೀತ ಪರಿಣಾಮವಾಗುತ್ತಿರುವದು ಕಂಡು ಬಂದಿದೆ.

ಇನ್ನೂ ಒಂದು ಮಹತ್ವದ ವಿಷಯವೇನೆಂದರೆ,(UNFPA) ಸಂಯುಕ್ತ ರಾಷ್ಟ್ರ ಜನಸಂಖ್ಯಾ ಕೋಶ ಹೇಳಿದ ಪ್ರಕಾರ ಜಗತ್ತಿನಲ್ಲಿ ಮಹತ್ವದ ಆರೋಗ್ಯಸೇವೆಯಿಂದ ವಿಮುಖರಾಗಿರುದರಿಂದ ಅನೇಕ ದೇಶಗಳಲ್ಲಿ ಸುಮಾರು 5 ಕೋಟಿ ಮಹಿಳೆಯರು ಆಧುನಿಕ ಗರ್ಭನಿರೋಧಕ ಸಾಧನಗಳ ಉಪಯೋಗದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ ಕಾರಣ ಮುಂಬರುವ ತಿಂಗಳುಗಳಲ್ಲಿ ಬೇಡವಾದ ಗರ್ಭಧಾರಣೆಯ ಅಂದಾಜು 70 ಲಕ್ಷ ಕೇಸ್ ಗಳು ಬರುವ ಸಾಧ್ಯತೆಗಳಿವೆ. ಇನ್ನು ಒಂದು ವಿಶೇಷ ಏನೆಂದರೆ ಇದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ ಬಾಲವಿವಾಹ 1.30 ಕೋಟಿ ಕೇಸ್ ಗಳು ಪತ್ತೆಯಾಗುವ ಸಾಧ್ಯತೆಗಳಿವೆ.