5 ಅಂತಸ್ತಿನ, 7600 ಟನ್ ತೂಕದ ಹಳೆಯ ಕಟ್ಟಡವು ಮೂಲ ಸ್ಥಳದಿಂದ ಬೇರೆ ಕಡೆಗೆ ಸಾಗಿ ಹೋಯಿತು ಎಂದರೆ ನಂಬುವಿರಾ? ನೋಡಿ ಈ Viral Video
ಕಟ್ಟಡವೊಂದು ಚಲಿಸುವುದನ್ನು ನೀವು ಎಂದಾದರೂ ನೋಡಿರುವಿರಾ? ಬಹುಶಃ ಇಂತಹುದೊಂದು ಆಲೋಚನೆಯೇ ಉತ್ಪ್ರೇಕ್ಷೆ ಎನ್ನುವುದಾದರೆ ಇದು ನಿಜಕ್ಕೂ ಉತ್ಪ್ರೇಕ್ಷೆ ಖಂಡಿತ ಅಲ್ಲ. ಏಕೆಂದರೆ ಚೀನಾದಲ್ಲಿ ಇಂಜಿನಿಯರ್ ಗಳು ಈ ಅಸಾಧ್ಯವನ್ನು ಸುಸಾಧ್ಯವನ್ನಾಗಿ ಮಾಡಿ ತೋರಿಸಿದ್ದಾರೆ. ಚೀನಾದ ಶಾಂಘೈ ನಗರದಲ್ಲಿ 1935 ರಲ್ಲಿ ನಿರ್ಮಾಣವಾಗಿದ್ದ ಲಗೇನಾ ಪ್ರಾಥಮಿಕ ಶಾಲೆಯ ಸುಮಾರು 7600 ಟನ್ ತೂಕ ಇರುವಂತಹ ಐದು ಅಂತಸ್ತಿನ ಕಟ್ಟಡವನ್ನು ಅದು ನಿರ್ಮಾಣವಾಗಿದ್ದ ಮೂಲ ಸ್ಥಾನದಿಂದ ಬೇರೊಂದು ಸ್ಥಾನಕ್ಕೆ ಬಹಳ ಜಾಗರೂಕತೆಯಿಂದ ಹಾಗೂ ಕಟ್ಟಡಕ್ಕೆ ಹಾನಿಯಾಗದಂತೆ ರಸ್ತೆಯಲ್ಲೇ ಸರಿಸುತ್ತಾ ಸ್ಥಳಾಂತರ ಮಾಡಲಾಗಿದೆ ಎಂದರೆ ನಂಬುವುದು ಕಷ್ಟ ಎನಿಸಿದರೆ ಒಮ್ಮೆ ಈ ಪೂರ್ತಿ ಲೇಖನ ಓದಿ.
ಹೀಗೆ ಕಟ್ಟಡವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಮೊದಲು ಕಟ್ಟಡವನ್ನು ಜ್ಯಾಕ್ ಗಳಿಂದ ಮೇಲೆ ಎತ್ತಲಾಗಿದ್ದು, ಅನಂತರ ರೊಬೋಟಿಕ್ ತಂತ್ರಜ್ಞಾನವನ್ನು ಬಳಸಿ ಇಡೀ ಕಟ್ಟಡವನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ. ವರದಿಯ ಪ್ರಕಾರ ಈ ಹಳೆಯ ಕಟ್ಟಡವಿದ್ದ ಜಾಗದಲ್ಲಿ ಹೊಸದಾಗಿ ಕಮರ್ಷಿಯಲ್ ಹಾಗೂ ಆಫೀಸ್ ಕಾಂಪ್ಲೆಕ್ಸ್ ಗಳ ನಿರ್ಮಾಣಕ್ಕಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹೊಸ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ಕೆಡುವುದು ಬೇಡವೇಂದು ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇಂಜಿನಿಯರ್ ಗಳಿಗೆ ಕಟ್ಟಡವನ್ನು ಕಡೆವಲು ಕೂಡಾ ಅವಕಾಶವಿತ್ತು.

ಆದರೆ ಅವರು ಕೆಡವಲು ಬಯಸದೇ ಅದನ್ನು ಅಲ್ಲಿಂದ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ನಿರ್ಧಾರವನ್ನು ಮಾಡಿದರು. ಸ್ಥಳೀಯ ಮಾದ್ಯಮಗಳ ವರದಿಯ ಪ್ರಕಾರ ಕಾಂಕ್ರೀಟಿನ ನ ಈ ಕಟ್ಟಡವನ್ನು ಅದರ ಮೂಲ ಜಾಗದಿಂದ ಸ್ಥಳಾಂತರ ಮಾಡಲು ಇಂಜಿನಿಯರ್ ಗಳ ತಂಡವು ತಂತ್ರಜ್ಞಾನದ ಮೊರೆ ಹೋಯಿತು. ಸುಮಾರು 198 ರೊಬೋಟಿಕ್ ಕಾಲುಗಳ ಸಹಾಯದಿಂದ ಕಟ್ಟಡವನ್ನು ನೆಲದಿಂದ ಮೇಲಕ್ಕೆ ಎತ್ತಿ ಅದನ್ನು ಮೂಲ ಸ್ಥಳದಿಂದ ಸುಮಾರು 62 ಮೀಟರ್ ದೂರದ ಇನ್ನೊಂದು ಸ್ಥಳಕ್ಕೆ ಸಾಗಿಸಲಾಗಿದೆ. ಈ ಕಾರ್ಯಕ್ಕೆ ತೆಗೆದುಕೊಂಡ ಸಮಯ ಹದಿನೆಂಟು ದಿನಗಳು ಎನ್ನಲಾಗಿದೆ.
ಹೀಗೆ ಇಂಜಿನಿಯರ್ ಗಳ ಶ್ರಮ ಹಾಗೂ ಕೌಶಲ್ಯ ದಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಈ ಹಳೆಯ ಕಟ್ಟಡವನ್ನು ಇನ್ನು ಮುಂದೆ ಸೂಕ್ತವಾದ ರೀತಿಯಲ್ಲಿ ಸಂರಕ್ಷಣೆ ಮಾಡುವುದಾಗಿ ಅಲ್ಲಿನ ಸರ್ಕಾರ ಕೂಡಾ ನಿರ್ಧಾರ ಮಾಡಿದೆ ಎನ್ನಲಾಗಿದೆ. ಹೀಗೆ ಕಟ್ಟಡಗಳನ್ನು ಸ್ಥಳಾಂತರ ಮಾಡುವ ಕಾರ್ಯವು ಈಗಾಗಲೇ ಹಲವು ಕಡೆ ಪ್ರಚಲಿತದಲ್ಲಿದೆ. ಆದರೆ ಚೀನಾದಲ್ಲಿ ಇದೇ ಮೊದಲ ಬಾರಿಗೆ ಕಟ್ಟಡವನ್ನು ಸ್ಥಳಾಂತರ ಮಾಡಲು ಚಕ್ರಗಳಿರುವ ರೆಬೋಟಿಕ್ ಲೆಗ್ಸ್ ಗಳನ್ನು ಬಳಸಲಾಗಿದ್ದು, ಈ ವಿಧಾನವನ್ನು ಇನ್ನೂ ಬೇರೆಲ್ಲೂ ಕೂಡಾ ಬಳಕೆ ಮಾಡಿಲ್ಲ ಎನ್ನಲಾಗಿದೆ. ಚೀನಾದ ಇಂಜಿನಿಯರ್ ಗಳ ಈ ಕಾರ್ಯಕ್ಕೆ ಅಲ್ಲಿನ ಸರ್ಕಾರ ಕೂಡಾ ಮೆಚ್ಚುಗೆಯನ್ನು ಸೂಚಿಸಿದೆ.

ಸರ್ಕಾರವೇ ಕೆಡವಲು ಅವಕಾಶವನ್ನು ನೀಡಿದರೂ ಕೂಡಾ ಒಂದು ಹಳೆಯ ಕಟ್ಟಡವನ್ನು ಉಳಿಸಬೇಕೆಂದು ಚೀನಾದ ಇಂಜಿನಿಯರ್ ಗಳು ಮಾಡಿರುವ ಕಾರ್ಯ ನಿಜಕ್ಕೂ ಕೂಡಾ ಶ್ಲಾಘನೀಯ ಎಂದೇ ಹೇಳಬಹುದು. ಕಟ್ಟಡಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಆದರೆ ಇಲ್ಲಿ ಹಳೆಯ ಕಟ್ಟಡವು ಇಷ್ಟೊಂದು ಸುರಕ್ಷಿತವಾಗಿರುವುದು ನಿಜಕ್ಕೂ ಕೂಡಾ ಆಶ್ಚರ್ಯವನ್ನುಂಟು ಮಾಡಿದೆ ಹಾಗೂ ಇಂಜಿನಿಯರ್ ಗಳ ಕೌಶಲ್ಯಕ್ಕೆ ಮೆಚ್ಚುಗೆ ದೊರೆತಿದೆ.