‘ಆಂಟಿ’ ಎಂದು ಕರೆದ ಹುಡುಗಿಗೆ ‘ಗೂ ಸಾ’ ಕೊಟ್ಟ ಮಹಿಳೆ! ಜ ಗಳ ಬಿಡಿಸಲು ಬಂದ ಪೊಲೀಸರು! ನೋಡಿ ಈ video
ಉತ್ತರ ಭಾರತದಲ್ಲಿ ಪರಂಪರಾಗತ ಹಬ್ಬ ಕರ್ವ ಚೌತ್ ಹೆಚ್ಚಾಗಿ ಆಚರಿಸಲಾಗುತ್ತದೆ. ಇದನ್ನು ಮೊನ್ನೆ ಬುಧವಾರ ಆಚರಣೆ ಮಾಡಲಾಯಿತು. ಹಬ್ಬವನ್ನು ಆಚರಿಸುವ ಮುನ್ನ ಮಾರ್ಕೆಟಿನಲ್ಲಿ ಶಾಪಿಂಗ್ ಸಲುವಾಗಿ ಮಹಿಳೆಯರ ಗುಂಪು ಗೂಡಿತ್ತು. ಇದೇ ಸಂದರ್ಭದಲ್ಲಿ ಸೇಲ್ಸ್ ಗರ್ಲ್ ಒಬ್ಬಳು ಮಹಿಳೆಯೊಬ್ಬಳಿಗೆ ಆಂಟಿ ಎಂದ ಮಾತ್ರಕ್ಕೆ ಮಾರ್ಕೆಟ್ ಏರಿಯಾ ಸ್ವಲ್ಪ ಸಮಯ ಬದಲಾಗಿ ಕದನದಲ್ಲಿ ಪರಿವರ್ತನೆಯಾಗಿದೆ. ಇಲ್ಲಿ ನಡೆದ ಜಗಳದ ಮತ್ತು ಏಟು ಎದುರೇಟುಗಳ ವಿಡಿಯೋ @Live Hindustan ಟ್ವಿಟರ್ ಹ್ಯಾಂಡಲ್ ನಿಂದ ಮೀಡಿಯಾದಲ್ಲಿ ಶೇರ್ ಆಗಿದೆ. ಈ ವಿಡಿಯೋ ಸದ್ಯ ತುಂಬಾ ವೈರಲ್ ಆಗುತ್ತಿದೆ.
ದೊರೆತ ಮಾಹಿತಿಯ ಪ್ರಕಾರ ಉತ್ತರಪ್ರದೇಶದ ಏಟಾ ಪಟ್ಟಣದಿಂದ ಈ ಸುದ್ದಿಯು ವರದಿಯಾಗಿದೆ.
ಕೋರೋನಾ ಸಂಕಟ ಕಾಲದನಂತರ ಮಾರ್ಕೆಟ್ ಗಳು ಈಗ ನಿಧಾನವಾಗಿ ತೆರೆಯುತ್ತಿರುವ ಬೆನ್ನಲ್ಲೇ ಮಾರ್ಕೆಟ್ ನಲ್ಲಿ ನಿಂತುಹೋದ ಜಗಳಗಳು ಸಹಿತ ಮತ್ತೆ ನಿಧಾನವಾಗಿ ಶುರುವಾಗುತ್ತಲಿವೆ ಎನ್ನಬಹುದು. ಇಲ್ಲಿ ಕರ್ವ ಚೌತ್ ಹಬ್ಬಕ್ಕೆ ಸಂಬಂಧಿಸಿದಂತೆ ಶಾಪಿಂಗ್ ಗೆ ಹೋದ ಮಹಿಳೆಯೊಬ್ಬಳಿಗೆ ಅಲ್ಲಿಯ ಸೇಲ್ಸ್ ಗರ್ಲ್ ಆಂಟಿ ಎಂದು ಕರೆದ ಮಾತ್ರಕ್ಕೆ ಜಗಳ ವಿಕೋಪಕ್ಕೆ ತಿರುಗಿದೆ. ಈ ಜಗಳದಲ್ಲಿ ಮಹಿಳೆಯು ಆ ಹುಡುಗಿಗೆ ಚೆನ್ನಾಗಿ ಥಳಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಲೈವ್ ಹಿಂದುಸ್ತಾನ್ ಟ್ವಿಟರ್ನಲ್ಲಿ ಶೇರ್ ಮಾಡಿದೆ. ಪ್ರಸ್ತುತ ಘಟನೆ ಕಳೆದ ಸೋಮವಾರ ರಾತ್ರಿ ಸಂಭವಿಸಿದೆ. ಆಂಟಿ ಎಂದು ಕರೆದ ಮಾತ್ರಕ್ಕೆ ಮಹಿಳೆಯು ಹುಡುಗಿಯ ಜೊತೆಗೆ ವಾದಕ್ಕೆ ಹೇಳಿದ್ದಾಳೆ. ವಾದ-ಪ್ರತಿವಾದ ವಿಕೋಪಕ್ಕೆ ಹೋದಾಗ ಮಹಿಳೆಯು ಹುಡುಗಿಯನ್ನು ಎಳೆದು ಹೊಡೆಯಲು ಶುರು ಮಾಡಿದ್ದಾಳೆ. ಇವರಿಬ್ಬರ ಜಗಳ ಮುಗಿಯದ ಲಕ್ಷಣ ಕಾಣದಿದ್ದಾಗ ಕೊನೆಗೆ ಪೊಲೀಸರು ಮಧ್ಯದಲ್ಲಿ ಎಂಟ್ರಿ ಮಾಡಬೇಕಾಯಿತು.
यूपी के एटा में आंटी कहने पर भड़की महिला, करवा चौथ की खरीददारी छोड़ बाल पकड़कर पीटा#UttarPradesh pic.twitter.com/yIr9werUzW
— Hindustan (@Live_Hindustan) November 3, 2020
ಈ ವಿಡಿಯೋವನ್ನು ಇಲ್ಲಿಯವರೆಗೆ 1.42 k ಜನ ಟ್ವಿಟರ್ನಲ್ಲಿ ವೀಕ್ಷಿಸಿದ್ದಾರೆ. ಮೂರುವರೆ ಸಾವಿರ ವರೆಗೆ ಲೈಕ್ಸ್ ಗಳು ಮತ್ತು ಸಾವಿರದ ಮೇಲೆ ರಿಟ್ವೀಟ್ ಗಳು ಬಂದಿವೆ.
ಮಿತ್ರರೇ, ಯಾವುದಕ್ಕೂ ಆಂಟಿ ಎನ್ನುವ ಮುನ್ನ ಒಂದು ಸಲ ಚೆನ್ನಾಗಿ ಯೋಚಿಸುವದು ಒಳ್ಳೆಯದು ಏನಂತೀರಾ?