ನಿಮ್ಮ ಮಗಳು ನ್ಯಾಸಾ ಶಾರೂಖ್ ಖಾನ್ ಮಗನ ಜೊತೆ ಓಡಿ ಹೋದರೆ ಏನು ಮಾಡುವಿರಿ? ವಿಚಿತ್ರ ಪ್ರಶ್ನೆಗೆ ಕಾಜೋಲ್ ಕೊಟ್ಟ ಉತ್ತರ ಹೀಗಿತ್ತು…

ಚಲನಚಿತ್ರಗಳಲ್ಲಿ ಕಂಡುಬರುವ ನಾಯಕ-ನಾಯಕಿಯರ ಕೆಮೆಸ್ಟ್ರಿ ಕೆಲವುಸಲ ಅಭಿಮಾನಿಗಳಿಗೆ ತುಂಬಾ ಹಿಡಿಸುತ್ತದೆ. ಅವರು ಮಾಡಿದ ಪ್ರತಿಯೊಂದು ಚಿತ್ರಗಳು ಸೂಪರ್ ಹಿಟ್ ಆದ ಮೇಲೆ ಆ ಜೋಡಿಯು ಸದಾ ಕಾಲದವರೆಗೆ ರಸಿಕರ ಹೃದಯದ ಮೇಲೆ ಛಾಪು ಮೂಡಿಸಿದಂತೆ ಆಗಿರುತ್ತದೆ.

ಹಿಂದಿ ಚಿತ್ರರಂಗದಲ್ಲಿ ಇದೇ ರೀತಿಯ ಒಂದು ಜೋಡಿಯ ಬಗ್ಗೆ ಹೇಳಬೇಕಾದರೆ ಶಾರುಖ್ ಖಾನ್ ಮತ್ತು ಕಾಜಲ್. ಇವರಿಬ್ಬರು ಕೂಡಿ ನಟಿಸಿದ ಅನೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿ ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ’ ಈ ಚಿತ್ರವಂತೂ ಚಿತ್ರರಸಿಕರು ಎಂದಿಗೂ ಮರೆಯುವಂತಿಲ್ಲ. ಈ ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟ್ರಿ ತುಂಬಾ ಚೆನ್ನಾಗಿ ಕೂಡಿತ್ತು.

ಹಿಂದಿ ಚಾನೆಲ್ ಒಂದರಲ್ಲಿ ಕರನ್ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿತ್ ಕರನ್’ ಈ ಕಾರ್ಯಕ್ರಮವು ತುಂಬಾ ಫೇಮಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಕಾಜಲ್ ಮತ್ತು ರಾಣಿ ಮುಖರ್ಜಿ ಅವರು ಗೆಸ್ಟ್ ಆಗಿ ಬಂದಿದ್ದರು. ಕರಣ್ ಜೋಹರ್ ಅವರು ಕಾಜಲ್ ಅವರಿಗೆ, ಹತ್ತು ವರ್ಷಗಳ ನಂತರ ನಿಮ್ಮ ಮಗಳು ನ್ಯಾಸಾ ಶಾರುಖ್ ಅವರ ಮಗ ಆರ್ಯನ್ ಅವರೊಂದಿಗೆ ಓಡಿಹೋದರೆ ನೀವು ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ಕಾಜಲ್ ಅವರು ನೀಡಿದ ಉತ್ತರ ಶಾರುಖ್ ಅವರಿಗೂ ಸಹಿತ ಬೆಚ್ಚಿಬೀಳುವಂತೆ ಆಗಿತ್ತು.

ಕಾಜಲ್ ಅವರು ಹೇಳಿದ್ದು ಹೀಗೆ, ದಿಲ್ವಾಲೆ ದುಲ್ಹಾ ಲೇ ಜಾಯೆಂಗೆ ಅಂದಿದ್ದನ್ನು ಕೇಳಿ ಶಾರುಖ್ ಅವರು ಗರಬಡಿದವರಂತೆ ಆಗಿದ್ದರು.

ಇದೇ ಪ್ರಶ್ನೆಗೆ ಸಂಬಂಧಿಸಿದಂತೆ ಕರನ್ ಅವರು ಶಾರುಕ್ ಖಾನ್ ಅವರಿಗೆ ಕೇಳಿದಾಗ, ಅವರು ಸ್ವಲ್ಪ ಹೊತ್ತು ವಿಚಾರ ಮಾಡಿ ಹೀಗೆ ಹೇಳುತ್ತಾರೆ, ಕಾಜಲ್ ಅವರು ನನ್ನ ಸಂಬಂಧಿಕರಾದರೆ ನಾನು ನಿಜಕ್ಕೂ ಹೆದರಿ ಬಿಡುತ್ತೇನೆ….ಎಂದಾಗ ಕಾಜಲ್ ಮತ್ತು ರಾಣಿ ಮುಖರ್ಜಿ ಇಬ್ಬರು ಒಂದೇ ಸಮನೆ ನಕ್ಕಿದ್ದಾರೆ.