ಮೀನು ಬೇಕೆಂದು ಮೀನಿನಂಗಡಿಗೆ ಬಂದ ಕಾಗೆ; ಅಲ್ಲಿ ಕಾಗೆ ಮಾಡಿದ ಕೆಲಸ ನೋಡಿ ಬೆರಗಾದ ನೆಟ್ಟಿಗರು! ನೋಡಿ ಈ Viral Video
ನಾವು ಬಾಲ್ಯದಲ್ಲಿ ಕೇಳಿರುವ ನೀತಿ ಕಥೆಗಳಲ್ಲಿ ನೀರು ಕುಡಿಯಲು ಬಂದ ಕಾಗೆಯೊಂದು ನೀರು ಹೂಜಿಯ ತಳಭಾಗದಲ್ಲಿದ್ದಾಗ ಅದು ತನ್ನ ಕೊಕ್ಕಿಗೆ ಸಿಗುವುದಿಲ್ಲವೆಂದು ನೀರು ಕುಡಿಯಲು ಉಪಾಯವೊಂದನ್ನು ಹೂಡಿದ ಕಾಗೆ ಆ ನೀರಿನ ಹೂಜಿಯೊಳಗೆ ಕಲ್ಲುಗಳನ್ನು ಹಾಕಿ, ನೀರು ಮೇಲೆ ಬಂದಾಗ ಅದನ್ನು ಕುಡಿದು ಹಾರಿ ಹೋದ ಕಥೆಯನ್ನು ಕೇಳಿಯೇ ಇದ್ದೇವೆ. ಇಲ್ಲಿ ಉಪಾಯ ಬಲ್ಲವರು ಹೇಗೆ ಸ ಮಸ್ಯೆಗಳನ್ನು ಪರಿಹರಿಸಿಕೊಳ್ಳುವರು ಎನ್ನುವ ನೀತಿಯನ್ನು ಹೇಳಿರುವುದನ್ನು ನಾವು ಕೇಳಿದ್ದೇವೆ. ಈಗ ಆ ಕಥೆ ಯಾಕೆ ಅಂತೀರಾ ನಿಜಕ್ಕೂ ಈಗ ನಾವು ಹೇಳೋಕೆ ಹೊರಟಿರೋ ವಿಷಯಕ್ಕೂ ಕಾಗೆಯ ಕಥೆಗೂ ನಿಜಕ್ಕೂ ಕೂಡಾ ಒಂದು ರೀತಿಯ ಸಾಮ್ಯತೆ ಇದೆ.
ಹಕ್ಕಿ ಅಥವಾ ಪಕ್ಷಿಗಳಲ್ಲಿ ಕಾಗೆ ಬಹಳ ಬುದ್ಧಿವಂತ ಪಕ್ಷಿ ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಆಗಾಗ ಸುದ್ದಿಯಾಗಿವೆ ಹಾಗೂ ಕಾಗೆಗಳು ತಮ್ಮ ಜಾಣತನವನ್ನು ಪ್ರದರ್ಶಿಸುವ ವೀಡಿಯೋಗಳು ಕೂಡಾ ವೈರಲ್ ಆಗಿ ಜನರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ ಆ ವೀಡಿಯೋಗಳು ವೈರಲ್ ಕೂಡಾ ಆಗಿ ಬಿಡುತ್ತವೆ. ಅದನ್ನು ನೋಡಿದ ಜನರು ಕೂಡಾ ಕಾಗೆಗಳ ಬುದ್ಧಿವಂತಿಕೆ ನೋಡುವ ಜನರು ಕೂಡಾ ಅಬ್ಬಾ ಎಷ್ಟು ಚಾಣಾಕ್ಷ ಈ ಪಕ್ಷಿಗಳು ಎಂದು ಆಶ್ಚರ್ಯವನ್ನು ಪಡುವುದು ಕೂಡಾ ಉಂಟು. ಈಗ ಅಂತಹುದೇ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೀನು ಮಾರಾಟ ಮಾಡುವ ಅಂಗಡಿಯ ಬಾಗಿಲ ಬಳಿ ಬಂದು ಕೂರುವ ಕಾಗೆ ಮೀನು ಕದಿಯದೆ ಅದಕ್ಕಾಗಿ ನೋಡುತ್ತಿರುತ್ತದೆ. ಆಗ ಮೀನು ಮಾರುವ ವ್ಯಕ್ತಿ ಅದಕ್ಕೊಂದು ಸಣ್ಣ ಮೀನು ನೀಡುತ್ತಾನೆ. ಆದರೆ ಕಾಗೆ ಅದನ್ನು ಅಲ್ಲೇ ಹಾಕಿ ಕಾವ್ ಕಾವ್ ಅನ್ನುತ್ತೆ. ಆ ವ್ಯಕ್ತಿ ಬೇರೆ ಮೀನನ್ನು ಕೊಡುತ್ತಾನೆ. ಆಗಲೂ ಮೀನನ್ನು ಕೊಕ್ಕಲ್ಲಿ ಹಿಡಿದ ಕಾಗೆ ಆ ಮೀನು ಅದು ತನಗೆ ಬೇಡವೆಂದು ಮತ್ತೆ ಅದನ್ನು ಇಟ್ಟಿದ್ದ ಕಡೆಗೆ ಹಾಕಿ ಮತ್ತೆ ಕಾವ್ ಕಾವ್ ಎಂದು ಏನೋ ಸೂಚನೆ ನೀಡುತ್ತದೆ.
ಕೊನೆಗೆ ಆ ವ್ಯಕ್ತಿ ಅಲ್ಲೇ ಇದ್ದ ದೊಡ್ಡ ಗಾತ್ರದ ಮೀನನ್ನು ಕೊಟ್ಟರೆ ಅದನ್ನು ಕಚ್ಚಿಕೊಂಡು ಕಾಗೆ ಅಲ್ಲಿಂದ ಹಾರಿ ಹೋಗುತ್ತದೆ. ಆ ಕಾಗೆ ತನಗೆ ದೊಡ್ಡ ಮೀನು ಬೇಕೆಂದು ಆ ವ್ಯಕ್ತಿಯ ಬಳಿ ಕೇಳಿದ ಅದರದೇ ವಿಧಾನ ಈಗ ಜನರ ಗಮನವನ್ನು ಸೆಳೆಯುತ್ತಿದೆ. ಇನ್ನು ಸುಶಾಂತ್ ನಂದ ಅವರ ವೀಡಿಯೋ ಶೇರ್ ಮಾಡುತ್ತಾ ಶೀರ್ಷಿಕೆಯಲ್ಲಿ “ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ಎನ್ನುವುದು ರೆಕ್ಕೆಯಿಲ್ಲದ ಹಕ್ಕಿಯಂತೆ, ಇಲ್ಲಿ ಕಾಗೆಯ ಗುರಿ ದೊಡ್ಡದಾದ ಮೀನಾಗಿತ್ತು, ನಿಜಕ್ಕೂ ಆಕರ್ಷಣೀಯವಾದ ವೀಡಿಯೋ” ಎಂದು ಅವರು ಬರೆದುಕೊಂಡಿದ್ದಾರೆ. ಈ ವೀಡಿಯೋ ವನ್ನು ಈಗಾಗಲೇ 12 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ವಿಡಿಯೋ ನೋಡಿ
Intelligence without ambition,
— Susanta Nanda IFS (@susantananda3) October 29, 2020
Is like a bird without wings…
This crow had the ambition on a bigger stuff. Real fascinating is the wild👌 pic.twitter.com/e6zBKrc7yr
ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿರುವ ಈ ವೀಡಿಯೋವನ್ನು ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ವೀಡಿಯೋ ನೋಡಿದವರು ಕಾಗೆ ಕದಿಯುವುದು ಬಿಟ್ಟು ಕೇಳಿರುವುದು ನಿಜಕ್ಕೂ ಅದ್ಭುತ ಎಂದರೆ, ಕೆಲವರು ಆ ಕಾಗೆ ಒಂದು ವೆರೈಟಿಯ ಮೀನಿಗೆ ಆಸೆ ಪಟ್ಟಿದೆ ಏಕೆಂದರೆ ಅದರ ರುಚಿ ಹೆಚ್ಚು ಅಲ್ಲಿ ಮೀನಿನ ಗಾತ್ರ ಮುಖ್ಯವಲ್ಲ ಎಂದು ಈ ವೀಡಿಯೋ ಕೇರಳದ್ದು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಅದು ಹೆಣ್ಣು ಕಾಗೆ ಅದಕ್ಕೆ ತನ್ನ ಮರಿಗಳಿಗೆ ಕೂಡಾ ಆಹಾರದ ವ್ಯವಸ್ಥೆ ಮಾಡಿದೆ ಎಂದಿದ್ದಾರೆ. ಒಟ್ಟಾರೆ ಕಾಗೆಯ ಈ ವೀಡಿಯೋ ಜನ ಮೆಚ್ಚುಗೆ ಪಡೆದಿದೆ.