ರಾಂಗ್ ಸೈಡ್ ನಿಂದ ಓವರ್ ಟೆಕ್ ಮಾಡಲು ಬಂದ ವ್ಯಕ್ತಿಗೆ ಸರಿಯಾದ ಪಾಠ ಕಲಿಸಿದ ಒಂಟೆ! Video ನೋಡಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು!

ಸೋಶಿಯಲ್ ಮೀಡಿಯಾ ದಲ್ಲಿ ಒಂದು ವೀಡಿಯೋ ಭರ್ಜರಿ ಅಗಿ ವೈರಲ್ ಆಗುತ್ತಿದ್ದು, ಈ ವೀಡಿಯೋ ನೋಡಿದವರಿಗೆ ನಗು ವನ್ನು ತಡೆಯುವುದು ಅಸಾಧ್ಯವೇ ಎನ್ನುವಂತೆ ಇದೆ. ಈ ವೀಡಿಯೋದಲ್ಲಿ ಒಂಟೆಯೊಂದು ರಸ್ತೆ ನಿಯಮಗಳನ್ನು ಹೇಗೆ ಪಾಲಿಸಬೇಕೆಂದು ತಿಳಿಸಿದ ವಿಶಿಷ್ಠವಾದ ವಿಧಾನ ನಿಜಕ್ಕೂ ಹೊಗಳಿಕೆಗೆ ಪಾತ್ರವಾಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಒಂದು ಕಡೆ ವೀಡಿಯೋ ನೋಡು ಬಿದ್ದು ಬಿದ್ದು ನಗುತ್ತಿರುವುದು ಮಾತ್ರವೇ ಅಲ್ಲದೇ ಒಂಟೆಯು ಮಾಡಿದ ಕೆಲಸವನ್ನು ನೋಡಿ ಮೆಚ್ಚುಗೆಯ ಮಳೆಯನ್ನೇ ಹರಿಸುತ್ತಿದ್ದಾರೆ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಂಡು ಸಾಗುತ್ತಿದ್ದಾರೆ.

ವೀಡಿಯೋದಲ್ಲಿ ನಮಗೆ ಸ್ಪಷ್ಟವಾಗಿ ಕಾಣುವುದೇನೆಂದರೆ, ಇಬ್ಬರು ವ್ಯಕ್ತಿಗಳು ಒಂದಷ್ಟು ಒಂಟೆಗಳನ್ನು ವಾಕ್ ಗಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಬೆಳಗಿನ ವಾಕ್ ಅನ್ನು ಬಹಳ ಆನಂದವಾಗಿ ಅನುಭವಿಸುತ್ತಾ ಒಂಟೆಗಳು ರಸ್ತೆಯಲ್ಲಿ ಸಾಗುತ್ತಿವೆ. ಅದೇ ಸಮಯದಲ್ಲಿ ಒಬ್ಬ ಬೈಕ್ ಸವಾರನು ಒಂಟೆಗಳು ಸಾಗುತ್ತಿರುವ ರಸ್ತೆಯಲ್ಲಿ ಬರುತ್ತಾನೆ. ಆತ ಒಂಟೆಗಳನ್ನು ಓವರ್ ಟೇಕ್ ಮಾಡಲು ಬಯಸಿ, ಎಡಗಡೆಯಿಂದ ಅವುಗಳನ್ನು ದಾಟಿ ಮುಂದೆ ಹೋಗುವ ಪ್ರಯತ್ನಕ್ಕೆ ಕೂಡಾ ಆತ ಮುಂದಾಗುತ್ತಾನೆ. ಆದರೆ ಆಗ ನಡೆದ ಘಟನೆ ನಿಜಕ್ಕೂ ಯಾರೂ ಊಹೆ ಕೂಡಾ ಮಾಡಿರಲಿಲ್ಲ ಎನ್ನಬಹುದು.

ಯಾವಾಗ ಆ ವ್ಯಕ್ತಿಯು ಎಡಗಡೆಯಿಂದ ಓವರ್ ಟೇಕ್ ಮಾಡಲು ಮುಂದಾದನೋ ಆ ಕೂಡಲೇ ಅದು ಇಷ್ಟವಾಗದ ಒಂಟೆಯು ಆತನಿಗೆ ತನ್ನ ಹಿಂದಿನ ಕಾಲಿನಿಂದ ಸರಿಯಾದ ಒದೆಯುತ್ತದೆ. ಆಗ ಆ ವ್ಯಕ್ತಿಗೆ ಕೂಡಾ ತಡವಾದರೂ ಪರವಾಗಿಲ್ಲ ಆದರೆ ಸರಿಯಾಗಿ ಹೋದರೆ ಅನಾಹುತವಾಗುವುದರಿಂದ ತಪ್ಪಿಸಕೊಳ್ಳುವುದು ಮುಖ್ಯ ಎಂದು ಜ್ಞಾನೋದಯ ಕೂಡಾ ಆದಂತೆ ಕಂಡು ಬರುತ್ತದೆ. ಆದ್ದರಿಂದಲೇ ರಸ್ತೆಯ ನಿಯಮಗಳನ್ನು ಯಾವಾಗಲೂ ಕೂಡಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದು ಸುರಕ್ಷತೆ ದೃಷ್ಠಿಯಿಂದ ಬಹಳ ಸೂಕ್ತ, ಓವರ್ ಟೇಕ್ ಮಾಡುವಾಗ ಎಂದಿಗೂ ನಿಯಮ ಮೀರಬಾರದು ಎಂಬುದನ್ನು ಒಂಟೆ ಆತನಿಗೆ ತಿಳಿಸಿಕೊಟ್ಟಂತೆ ಇದೆ ವೀಡಿಯೋ.

ಈ ಹಾಸ್ಯಭರಿತವಾದರೂ ಉತ್ತಮ ಸಂದೇಶವನ್ನು ನೀಡುವ ವಿಶೇಷವಾದ ವೀಡಿಯೋವನ್ನು ಐಎಫ್ಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಈ ವೀಡಿಯೋವನ್ನು ಹದಿನೈದು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಅನೇಕರು ಒಂಟೆಯ ಈ ಬುದ್ಧಿವಂತಿಕೆಯನ್ನು ನೋಡಿ ಮೆಚ್ಚುಗೆಯನ್ನು ನೀಡಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಮಾತ್ರವಲ್ಲದೇ ಜನ ರಸ್ತೆಯ ನಿಯಮಗಳನ್ನು ಪಾಲನೆ ಮಾಡುವುದನ್ನು ಮರೆತಿರುವಾಗ ಪ್ರಾಣಿಗಳು ಅದನ್ನು ನೆನಪಿಸಿವೆ ಎಂದಿದ್ದಾರೆ.

ವಿಡಿಯೋ ನೋಡಿ

ಇಂತದ್ದೇ ಮತ್ತೊಂದು ವೀಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು, ಮುಂಬೈನ ರಸ್ತೆಯೊಂದರಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಹಸುವೊಂದು ಗ್ರೀನ್ ಸಿಗ್ನಲ್ ಬೀಳುವವರೆಗೆ ರಸ್ತೆ ದಾಟದೆ ಕಾದಿದ್ದು, ಅನಂತರ ದಾಟಿದ ವೀಡಿಯೋ ಕೂಡಾ ಸಾಕಷ್ಟು ವೈರಲ್ ಆಗಿ ಅಲ್ಲು ಕೂಡಾ ನೆಟ್ಟಿಗರು ಜನ ಈ ಪ್ರಾಣಿಗಳನ್ನು ನೋಡಿ ಟ್ರಾಪಿಕ್ ನಿಯಮಗಳನ್ನು ಪಾಲನೆ ಮಾಡುವುದನ್ನು ಕಲಿಯಬೇಕು ಎಂದು ಅನೇಕ ಮೆಚ್ಚುಗೆ ಗಳನ್ನು ನೀಡಿದ್ದನ್ನು ಕೂಡಾ ನಾವು ಇಲ್ಲಿ ಸ್ಮರಿಸಬಹುದಾಗಿದೆ.