ನೀವು ಸಹ ಊಟದಲ್ಲಿ ಮೊಸರು ಸೇವನೆ ಮಾಡುತ್ತಿದ್ದರೆ ಇದನ್ನು ಒಮ್ಮೆ ಓದಿ!!

ಮೊಸರು ಸೇವನೆ ಮಾಡುವದರಿಂದ ನಮ್ಮ ಶರೀರಕ್ಕೆ ಯಾವ ತರಹದ ಲಾಭಗಳು ಸಿಗುತ್ತವೆ ಎಂಬುದು ನಿಮಗೆ ಗೊತ್ತಾ? ಹಾಗಿದ್ರೆ ಅದರ ಬಗ್ಗೆತಿಳಿದುಕೊಳ್ಳಲು ಈ ಲೇಖನವನ್ನು ಓದಿರಿ.

ನಾವು ನಿರೋಗಿ ಯಾಗಿರಲು ನಮ್ಮ ಶರೀರಕ್ಕೆ ಕ್ಯಾಲ್ಸಿಯಂ ಮತ್ತು ವಿಟ್ಯಾಮಿನ್ ಗಳ ಅವಶ್ಯಕತೆ ತುಂಬಾ ಇರುತ್ತದೆ. ಇವೆರಡು ಮೊಸರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಇರುತ್ತವೆ. ಆದುದರಿಂದ ದಿನಂಪ್ರತಿ ಮೊಸರು ಸೇವನೆ ಮಾಡುವದು ತುಂಬಾ ಲಾಭದಾಯಕವಾಗಿದೆ. ಆದರೆ ನಿಮಗೆ ಕೆಮ್ಮು ಅಥವಾ ನೆಗಡಿಯ ಸಮಸ್ಯೆ ಇದ್ದರೆ ಮೊಸರಿನ ಜೊತೆಗೆ ಓಮು ಕಾಳನ್ನು ಬೆರಿಸಿ ಸೇವನೆ ಮಾಡಿದರೆ ಆ ಸಮಸ್ಯೆ ದೂರವಾಗುವದು.

ಮೊಸರು ಶರೀರದಲ್ಲಿಯ ಉಷ್ಣತೆಯನ್ನು ಕಡಿಮೆ ಮಾಡುವ ಕಾರ್ಯ ಮಾಡುವುದು. ದಿನಾಲು ಮೊಸರು ಸೇವನೆ ಮಾಡುವದರಿಂದ ನಮ್ಮ ಶರೀರ ತಂಪಾಗಿರುವದು ಮತ್ತು ಉಷ್ಣತೆಯ ಸಮಸ್ಯೆ ದೂರ ವಾಗುವದು. ನಮಗೆ ಬಾಯಲ್ಲಿ ಉಷ್ಟತೆ ಗುಳ್ಳೆಗಳು ಬಂದಾಗ ನಮಗೆ ಏನನ್ನು ತಿನ್ನಲು ಬರುವದಿಲ್ಲ ಅಂತಹ ಸಮಯದಲ್ಲಿ ಆ ಜಾಗಕ್ಕೇ ಸ್ವಲ್ಪ ಮೊಸರು ಹಚ್ಚಿರಿ. ದಿನದಲ್ಲಿ ಎರಡು ಅಥವಾ ಮೂರು ಸಲ ಹೀಗೆ ಮಾಡಿರಿ. ಇದರಿಂದ ಬಾಯಿಯಲ್ಲಿಯ ಉಷ್ಣತೆಇಲ್ಲದಂತಾಗುವದು.

ಮೊಸರು ನಮ್ಮ ಪಚನಕ್ರಿಯೆ ಶಕ್ತಿಯನ್ನುಹೆಚ್ಚಿಸುವದು. ಮೊಸರಿನಿಂದ ಕೋಲಾಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಸಹಾಯ ವಾಗುವದು. ಆದ್ದರಿಂದ ಅತೀರಕ್ತದೊತ್ತಡ ಮತ್ತು ಕೋಲಾಸ್ಟ್ರಾಲ್ನಿಂದ ಉಂಟಾಗುವ ಹೃದಯದ ವಿವಿಧ ರೋಗಗಳು ಬಾರದಂತೆ ಮೊಸರು ತಡೆಗಟ್ಟುವದು. ಮೊಸರಿನಲ್ಲಿ ಕ್ಯಾಲ್ಸಿಯಂ ಇರುವದರಿಂದ ನಮ್ಮ ಶರೀರದಲ್ಲಿಯ ಎಲುಬುಗಳು ಸದೃಢ ವಾಗುವವು. ಮೊಸರು ಎಂದರೆ ಇನ್ಸ್ಟಂಟ್ ಎನರ್ಜಿ ಸ್ತೋತ್ರ ಇದೆ.

ಒಂದು ವೇಳೆ ನೀವು ಹೊರಗಿನಿಂದ ಬಂದಾಗ ಅಥವಾ ನೀಮಗೆ ತುಂಬಾ ಆಯಾಸ ವಾದಾಗ ಮೊಸರಿನ ಸೇವನೆ ಮಾಡಿ ಆಗ ಬೇಗನೆ ನಿಮ್ಮ ಶರೀರ ಫ್ರೆಶ್ ಹಾಗೂ ಲವಲವಿಕೆ ಅನಿಸುವದು.

ನಿಮ್ಮ ತ್ವಚೆ ಬಿಸಿಲಿನಿಂದ ಕಪ್ಪು ಆಗಿದ್ದರೆ ಅದರ ಮೇಲೆ ಮೊಸರಿನ ಲೇಪನೆ ಮಾಡಿ ನೋಡಿ ತ್ವಚೆ ಮುಟ್ಟಿನಂತೆ ಹೊಳೆಯುವದು.

ಮೊಸರಿನಿಂದ ಕೂದಲಿಗೆ ಚಮಕ್ ಬರುವುದು. ಮೊಸರಿನಿಂದ ಕೂದಲು ತೊಳೆದು ಕೊಳ್ಳುವದರಿಂದ ತಲೆಯಲ್ಲಿಯ ಹೊಟ್ಟು ಇಲ್ಲದಂತಾಗುವದು. ಹೀಗೆ ಮಾಡುವಾಗ ನಿಮ್ಮ ಕೂದಲುಗಳು ಬೇಗನೆ ಒಣಗಿಸಿಕೊಳ್ಳಬೇಕು.