Amazon ನಿಂದ 40 ಸಾವಿರದ ಮೊಬೈಲ್ ಆರ್ಡರ್ ಮಾಡಿದ ವ್ಯಕ್ತಿ; ಪಾರ್ಸಲ್ ತೆರೆದು ನೋಡುತ್ತಲೇ ಶಾಕ್ ಆದ!

ಸದ್ಯ ಎಲ್ಲೆಡೆಯೂ ಹಬ್ಬದ ಸಂಭ್ರಮ ನಡೆದಿದೆ. ಇದಕ್ಕೆ ಅನುಸರಿಸಿದಂತೆ ಇ-ಕಾಮರ್ಸ್ ಕಂಪನಿಗಳು ಹಬ್ಬದ ಹೆಸರಿನಲ್ಲಿ ಗ್ರಾಹಕರಿಗಾಗಿ ಅನೇಕ ಪ್ರಕಾರದ ಆಫರ್ ಗಳನ್ನು ನೀಡುತ್ತಿವೆ. ಹೀಗಾಗಿ ಗ್ರಾಹಕರು ಆನ್ಲೈನ್ ಶಾಪಿಂಗ್ ಮೇಲೆ ಮುಗಿಬೀಳುತ್ತಿದ್ದಾರೆ.

ದೊರೆತ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕನಕ ಗ್ರಾಮದ ನಿವಾಸಿಯಾದ ಹರ್ದೀಪ್ ಸಿಂಗ್ ಕಳೆದ ಅಕ್ಟೋಬರ್ ತಿಂಗಳಿನ 24ನೇ ತಾರೀಖಿಗೆ ಅಮೆಜಾನ್ನಲ್ಲಿ 40 ಸಾವಿರ ರೂಪಾಯಿ ಬೆಲೆಯ ಮೊಬೈಲ್ ಆರ್ಡರ್ ಮಾಡಿದ್ದರು. ಮನೆಗೆ ಪಾರ್ಸಲ್ ಬಂದನಂತರ ಅದನ್ನು ಓಪನ್ ಮಾಡಿ ನೋಡಿದಾಗ ಅವರಿಗೆ ಶಾಕ್ ಆಗಿದೆ. ಕಾರಣ ಪಾರ್ಸಲ್ ನಲ್ಲಿ ಮೊಬೈಲ್ ಅಲ್ಲದೆ ಒಂದು ಡ್ರೆಸ್ ಇತ್ತು. ಕೋಪಗೊಂಡ ಹರ್ದೀಪ್ ಸಿಂಗ್ ಅವರು ಕಂಪನಿಗೆ ಕಾಂಟ್ಯಾಕ್ಟ್ ಮಾಡಿದಾಗ ಕಂಪನಿಯವರು ಏಳು ದಿವಸಗಳ ಸಮಯ ಕೇಳಿದ್ದಾರೆ.

ಅಮೆಜಾನ್ ಕಂಪನಿಯ ವಿರುದ್ಧ 420 ಕೇಸ್ ದಾಖಲು…

ಏಳು ದಿವಸಗಳ ನಂತರ ಕಂಪನಿಯು ಹರ್ದೀಪ್ ಸಿಂಗ್ ಅವರಿಗೆ ಕಾಂಟ್ಯಾಕ್ಟ್ ಮಾಡಿ ನಾವು ಕಳಿಸಿದ ಪಾರ್ಸಲ್ ನೀವು ಆರ್ಡರ್ ಮಾಡಿದ ಪ್ರಕಾರ ಸರಿಯಾಗಿಯೇ ಕಳಿಸಿದ್ದೇವೆ. ಹೀಗಾಗಿ ನಮ್ಮಿಂದ ಯಾವುದೇ ರೀತಿಯ ತಪ್ಪಾಗಿಲ್ಲ ಎನ್ನುವ ಉಡಾಫೆಯ ಮಾತುಗಳು ಕೇಳಿಬಂದವು. ಕೋಪಗೊಂಡ ಹರ್ದಿಪ್ ಸಿಂಗ್ ಅವರು ಜಹನಬಾದ್ ಪೊಲೀಸ್ ಠಾಣೆಗೆ ಹೋಗಿ ಅಮೆಜಾನ್ ವಿರುದ್ಧ ಮೋಸ ಮತ್ತು ವಂಚನೆಯ ಕೇಸು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ

ಆನ್ಲೈನ್ ಶಾಪಿಂಗ್ ಸಂಬಂಧಿಸಿದಂತೆ ಈ ರೀತಿ ಮೋಸಗಳು ಆಗುವುದು ಇದೇ ಮೊದಲಲ್ಲ. ಹೀಗೆ ಮೇಲಿಂದ ಮೇಲೆ ಘಟನೆಗಳಾಗುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಸುದ್ದಿಗಳು ಹಬ್ಬುತ್ತಲೇ ಇರುತ್ತವೆ. ಕೆಲವೇ ದಿನಗಳ ಹಿಂದೆ ಸುಮಿತ್ ಚೌಹಾನ್ ಹೆಸರಿನ ವ್ಯಕ್ತಿಯೊಬ್ಬರು 1.40 ಲಕ್ಷ ರೂಪಾಯಿಗಳ ಕ್ಯಾಮೆರಾ ಒಂದನ್ನು ಇದೆ ರೀತಿಯಾಗಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಮನೆಗೆ ಪಾರ್ಸಲ್ ಬಂದನಂತರ ಓಪನ್ ಮಾಡಿ ನೋಡಿದಾಗ ಅದರಲ್ಲಿ ಕ್ಯಾಮೆರಾ ಬದಲಾಗಿ ಹಳೆಯ ಚಪ್ಪಲಿ ಮತ್ತು ಕಲ್ಲುಗಳಿದ್ದವು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಆ ಸಮಯದಲ್ಲಿ ತುಂಬಾ ವೈರಲ್ ಆಗಿತ್ತು.