‘ಆ’ ಸ್ಥಾನದಲ್ಲಿ ನಾನು ಇದ್ದಿದ್ದರೆ ವಿರಾಟ್ ಕೊಹ್ಲಿಗೆ ಎಂದೋ ನಾಯಕತ್ವದಿಂದ ತೆಗೆದು ಹಾಕುತ್ತಿದ್ದೆ!

ಸತತ 13 ವರ್ಷಗಳಿಂದ ನಮ್ಮ ಪ್ರೀತಿಯ RCB ತಂಡದ IPL ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಕಳೆದ ಶುಕ್ರವಾರ ನಮ್ಮ ತಂಡ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸೋತು ಐಪಿಲ್ ಪಟ್ಟ ಗೆಲ್ಲುವ ಕನಸಿನಲ್ಲಿ ಮತ್ತೊಮ್ಮೆ ಮುಗ್ಗುರಿಸಿ ಬಿತ್ತು.

ಕರ್ನಾಟಕದ ಅಭಿಮಾನಿಗಳ ಹಾಗೆಯೇ KKR ತಂಡದ ಮಾಜಿನಾಯಕರಾದ ದೆಹಲಿಯ ಗೌತಮ್ ಗಂಭೀರ್ ಅವರಿಗೂ ಇದು ಯಾಕೋ ಸರಿ ಎನಿಸಿಲ್ಲ, ಎಂದೇ ಕಾಣುತ್ತದೆ.

ಬೆಂಗಳೂರಿನ ಸೋಲಿಗೆ ಗಂಭೀರ್ ಅವರು ಸಂಪೂರ್ಣವಾಗಿ ವಿರಾಟ್ ಅವರೇ ಜವಾಬ್ದಾರರಾಗಿದ್ದಾರೆ ಎಂದು ಪ್ರಖರವಾಗಿ ಟೀಕಿಸಿದ್ದಾರೆ. ಹಾಗೆಯೇ ಅವರನ್ನು ನಾಯಕತ್ವದಿಂದಲೂ ಕಿತ್ತೆಗೆದು ಹಾಕಬೇಕು ಎಂದಿದ್ದಾರೆ. ಅದರ ಜೊತೆಗೆ ಒಂದು ಪ್ರಶ್ನೆಯನ್ನೂ ಉಪಸ್ಥಿತ ಮಾಡಿದ್ದಾರೆ.

ವಿರಾಟ್ ಅವರು ಕಳೆದ 8 ವರ್ಷಗಳಿಂದ RCB ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಎಂಟು ವರ್ಷಗಳ ಈ ಕಾಲಖಂಡ ತುಂಬಾ ದೀರ್ಘವಾಗಿದೆ. ಎಂಟು ವರ್ಷಗಳ ಕಾಲಾವಧಿಯಲ್ಲಿ ಒಂದು ಬಾರಿಯಾದರೂ ಕೊಹ್ಲಿ ಅವರು ಐಪಿಎಲ್ ಪಟ್ಟವನ್ನು ಗೆಲ್ಲಬೇಕಾಗಿತ್ತು. ಆದರೆ ಹಾಗೆ ಆಗಿಲ್ಲ.

ವಿರಾಟ್ ಅವರ ಕಳೆದ ಎಂಟು ವರ್ಷಗಳನ್ನು ಅವಲೋಕಿಸಿದರೆ, ವಿರಾಟ್ ಅವರು ತಾವೇ ಸ್ವತ: ನಾಯಕತ್ವದ ಪಟ್ಟದಿಂದ ಕೆಳಗಿಳಿಯಬೇಕು. ಕಾರಣ ಇವರ ಎಂಟು ವರ್ಷಗಳ ಕಾಲಾವಧಿ ಸೇರಿ ಒಟ್ಟು 13 ವರ್ಷಗಳಲ್ಲಿ RCB ತಂಡ ಒಮ್ಮೆಯೂ ಐಪಿಎಲ್ ಚಾಂಪಿಯನ್ ಪಟ್ಟ ಧರಿಸಿಲ್ಲ ಎಂದು ಗೌತಮ್ ಅವರು ತಮ್ಮ ಮಾತನ್ನು ಹೇಳಿದ್ದಾರೆ.

ಆರ್ಸಿಬಿ ಜೊತೆಗೆ ಇನ್ನೂ ಎರಡು ದುರ್ದೈವಿ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಸಹಿತ ಐಪಿಎಲ್ ಗೆಲ್ಲುವ ಕನಸನ್ನು ಕಾಣುತ್ತಲೇ ಇದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿಯ ಫೈನಲ್ ಪ್ರವೇಶಿಸಿದರೂ ಸಹ ಮುಂಬೈ ಎದುರು ಮತ್ತೆ ಸೋಲನ್ನು ಅನುಭವಿಸಿತು. ಹೀಗಾಗಿ ಈ ಮೇಲಿನ ಮೂರೂ ತಂಡಗಳಿಗೆ ಐಪಿಎಲ್ ಮರೀಚಿಕೆಯಾಗಿಯೇ ಉಳಿದಿದೆ.