17 ವರ್ಷದ ಯುವತಿಯೊಂದಿಗೆ ಮದುವೆಯಾದ 78 ವರ್ಷದ ವೃದ್ಧ! ಆದರೆ ಮದುವೆಯ 22 ದಿನಕ್ಕೇನೆ…

ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ ಜಗತ್ತಿನಲ್ಲಾದ ವಿಚಿತ್ರ ಘಟನೆಗಳ ಸುದ್ದಿಗಳು ನೋಡುನೋಡುವಷ್ಟರಲ್ಲಿ ಜಗತ್ತಿನ ತುಂಬೆಲ್ಲ ವೈರಲ್ ಆಗಿಬಿಡುತ್ತವೆ. ಸದ್ಯ ಇಂಡೋನೇಷಿಯಾದಲ್ಲಿ 78 ರ ವೃದ್ಧನೊಬ್ಬ 17 ವರ್ಷದ ತರುಣಿಯ ಜೊತೆಗೆ ವಿವಾಹವಾದ ಸುದ್ದಿಯೊಂದು ಭರ್ಜರಿ ವೈರಲ್ ಆಗುತ್ತಿದೆ. ಪತಿ-ಪತ್ನಿ ಇವರಿಬ್ಬರಲ್ಲಿ 50 ವರ್ಷಗಳ ದೀರ್ಘ ಅಂತರವಿರುವುದರಿಂದ ಈ ಸುದ್ದಿಯು ಸೋಶಿಯಲ್ ಮೀಡಿಯಾದಲ್ಲಿ ಚೆನ್ನಾಗಿಯೇ ಗುಲ್ಲೆಬ್ಬಿಸಿದೆ.

78 ವರ್ಷದ ಅಭಹ ಸರ್ನಾ ಹೆಸರಿನ ವ್ಯಕ್ತಿ 17 ವರ್ಷದ ನೋನಿ ನವಿಟಾಳ ಜೊತೆಗೆ ಮದುವೆಯನ್ನು ಮಾಡಿಕೊಂಡ ಫೋಟೋಗಳು ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿವೆ.

ಈ ಮದುವೆಯಲ್ಲಿ ವರನಾದ ಅಭಹ ಸರ್ನಾ ವರದಕ್ಷಿಣೆಯನ್ನು ಸಹಿತ ಪಡೆದಿದ್ದಾನೆ. ವರದಕ್ಷಿಣೆ ಅಂಗವಾಗಿ 50 ಸಾವಿರ ರೂಪಾಯಿಗಳ ಜೊತೆಗೆ ಒಂದು ಬೈಕ್ ಹಾಗೂ ಅನೇಕ ಗೃಹ ಬಳಕೆಯ ಸಾಮಾನುಗಳನ್ನು ಪಡೆದಿದ್ದಾನೆ.

ಮದುವೆಯಲ್ಲಿ ವರದಕ್ಷಿಣೆ ಸ್ವರೂಪದಲ್ಲಿ ಪಡೆದ ಆತನ ಎಲ್ಲ ಸಾಮಾನುಗಳನ್ನು ತುಂಬಲು ಒಂದು ಟ್ರಕ್ಕೇ ಬೇಕಾಯಿತು.

ವಿಷಾದದ ಸಂಗತಿಯೆಂದರೆ ಯಾವ ವೇಗದಲ್ಲಿ ಇವರಿಬ್ಬರ ಮದುವೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದವೋ, ಅದೇ ವೇಗದಲ್ಲಿ ಇವರಿಬ್ಬರ ವಿಚ್ಛೇದನೆಯನ್ನು ತೆಗೆದುಕೊಳ್ಳುವ ಸುದ್ದಿಯೂ ಚರ್ಚೆಗೆ ಗುರಿಯಾಗಿದೆ. ಮದುವೆಯಾದ 22ನೇ ದಿನಕ್ಕೆ ಅಭಹ ಸರ್ನಾ ಈತ ತನ್ನ ಹೆಂಡತಿಗೆ ವಿಚ್ಛೇದನೆಯ ನೋಟಿಸ್ ಕಳುಹಿಸಿದ್ದಾನೆ.

ಇಬ್ಬರ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲವಾದರೂ ಅಭಹ ಸರ್ನಾ ಈತ ತನ ಪತ್ನಿ ನೋನಿ ನವಿಟಾಳಿಂದ ವಿಚ್ಛೇದನೆಯನ್ನು ಯಾಕೆ ಕೇಳುತ್ತಿದ್ದಾರೆ ಎಂಬುದರ ಬಗ್ಗೆ ನೋನಿ ಅವಳ ಕುಟುಂಬದವರು ಗೊಂದಲಕ್ಕೀಡಾಗಿದ್ದಾರೆ. ನೋನಿ ಅವಳ ಕುಟುಂಬದವರು ಹೇಳುವ ಪ್ರಕಾರ, ನಮಗೆ ವರನಿಂದ ಯಾವುದೇ ಸಮಸ್ಯೆ ಇಲ್ಲ, ಬಹುಶ: ಆತನ ಕುಟುಂಬದವರು ಈ ಮದುವೆಗೆ ವಿರೋಧಿಸುತ್ತಿರಬಹುದು ಎಂಬ ಮಾತನ್ನು ನೋನಿ ಅವಳ ಸಹೋದರಿಯು ಹೇಳುತ್ತಿದ್ದಾಳೆ.

ವರ ವಿಚ್ಛೇದನೆಯನ್ನು ತೆಗೆದುಕೊಳ್ಳುವ ಹಿಂದೆ ಅನೇಕ ಕಾರಣಗಳು ಸದ್ಯ ಕೇಳಿಬರುತ್ತಿವೆ. ಅದರಲ್ಲಿ ಒಂದು ಏನೆಂದರೆ, ನೋನಿ ಮದುವೆಯ ಮೊದಲೇ ಗರ್ಭ ಧರಿಸಿದ್ದಾಳೆ ಎಂಬ ಕಾರಣದಿಂದ ವರ ವಿಚ್ಛೇದನೆಯನ್ನು ನೀಡಲು ತಯಾರಾಗಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಮಾತನ್ನು ನೋನಿಯ ಸಹೋದರಿಯು ಸಾರಾಸಗಟಾಗಿ ತಳ್ಳಿಹಾಕಿದ್ದಾಳೆ.