ಫೈವ್ ಸ್ಟಾರ್ ಲೈಫ್ ಬಿಟ್ಟು ತಿಂಗಳಿಂದ ಭಾರತದ ಹಳ್ಳಿ ಜೀವನ & ಊಟಕ್ಕೆ ಮಾರು ಹೋದ ಫ್ರಾನ್ಸಿಗರು!

ಪ್ರವಾಸಕ್ಕೆ ನಾವು ಎಲ್ಲೇ ಹೋದರೂ ತಂಗಲು ಮಾತ್ರ ಒಳ್ಳೊಳ್ಳೆಯ ಹೋಟೆಲ್ಲುಗಳನ್ನೇ ನೋಡುವಾಗ ಇನ್ನು ಫಾರೆನ್ನರು ಇದಕ್ಕೆ ಹೊರತಾಗಿಲ್ಲ.ಅವರ ವಾಸ್ತವ್ಯವಂತು ಸಾಮಾನ್ಯವಾಗಿ 5 ಸ್ಟಾರ್ ಅಥವಾ ಅದಕ್ಕಿಂತ ಮೇಲ್ಪಟ್ಟ ಹೋಟೆಲ್ ಗಳಲ್ಲೆ ಇರುತ್ತದೆ.

ಹೀಗಿರುವಾಗ ಫ್ರಾನ್ಸ್ ದೇಶದ 7 ಜನರ ಒಂದು ಗುಂಪು ಭಾರತ ಸುತ್ತಾಡಲು ಬಂದು UP ಯ ಮಹಾರಾಜಗಂಜ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಘಟನೆ ಲಾಕ್ ಡಾವುನ್ ಪೂರ್ವದ್ದಾಗಿದೆ. ಇವರು ಭಾರತವನ್ನು ಸುತ್ತಿ ರಸ್ತೆಯ ಮಾರ್ಗವಾಗಿ ನೇಪಾಳಕ್ಕೆ ನಡೆದಿದ್ದರು. ಅದೇ ಸಮಯಕ್ಕೆ ನೇಪಾಳ ಇನ್ನು 30 ಕಿ.ಮೀ. ದೂರ ವಿರುವಾಗಲೇ 22 ಮಾರ್ಚ್ ದಿಂದ ದೇಶದಲ್ಲಿ ಎಲ್ಲೆಡೆ ಕೊರೊನಾ ಕಾರಣದಿಂದ ಲಾಕ್ ಡಾವುನ್ ಆರಂಭವಾದುದರಿಂದ ಈ ಗುಂಪು ಲಕ್ಷ್ಮೀಪುರ ಹೆಸರಿನ ಕೋಲ್ಹುಆ ಗ್ರಾಮದ ಹತ್ತಿರ ಒಂದು ಶಿವಮಂದಿರದಲ್ಲಿಯೇ ಉಳಿದುಕೊಂಡಿತು.ಈ ಪರಿವಾರ ಟೂರಿಸ್ಟ್ ವೀಸಾ ಮುಖಾಂತರ ಭಾರತ ಸುತ್ತಲೂ ಬಂದಿದ್ದರು.25 ಮಾರ್ಚ್ ಗೆ ನೇಪಾಳಕ್ಕೆ ಹೋಗಬೇಕಾಗಿತ್ತು. 22 ಮಾರ್ಚ್ ರಂದು ಅಂತರ್ ರಾಷ್ಟ್ರೀಯ ಸೀಮೆ ಸೀಲ್ ಮಾಡಿದ ಕಾರಣ ಇಲ್ಲಿಯೇ ಭಾರತದಲ್ಲಿ ಉಳಿಯಬೇಕಾಯಿತು.

ಮುಂದೆ ಈ ಕುಟುಂಬ ಮಂದಿರದಲ್ಲಿಯೇ ವಾಸ್ತವ್ಯ ಹೂಡಿದ ಸುದ್ದಿ ಸರಕಾರಕ್ಕೆ ಗೊತ್ತಾದ ಮೇಲೆ ಸ್ಥಾನಿಕ ಸಿಬ್ಬಂದಿ ವರ್ಗ ಅವರಿಗೆ ಬೇಕಾದ ದಿನಸಿ ಪದಾರ್ಥಗಳನ್ನು ಉಪಲಬ್ಧಮಾಡಿ ಕೊಟ್ಟಿದ್ದಾರೆ. ಜೊತೆಗೆ ಅವರೆಲ್ಲರ ಮೆಡಿಕಲ್ ಚೆಕ್ ಅಪ್ ಸಹಿತ ಮಾಡಿಸಿ ಆರೋಗ್ಯ ಸರಿಯಾಗಿದ್ದುದರ ಬಗ್ಗೆ ಖಾತರಿ ಪಡಿಸಿಕೊಂಡಿದ್ದಾರೆ.

ಆಮೇಲೆ ಸರಕಾರ ಅವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದೆಂದು ಒಳ್ಳೆಯ ಹೋಟೆಲ್ ಗಳಲ್ಲಿ ಅಥವಾ 5 ಸ್ಟಾರ್ ಗಳಂತಹ ಹೋಟೆಲ್ ಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಲಾಗುವದು ಎಂದು ಕೇಳಿದಾಗ ಅವರು ಅದನ್ನು ತಿರಸ್ಕರಿಸಿ ನಾವು ಇಲ್ಲಿಯೇ ಇದೇ ಗ್ರಾಮದಲ್ಲಿರುತ್ತೇವೆ ಎಂದು ಹೇಳಿದ್ದಾರೆ. ಈ ಕುಟುಂಬಕ್ಕೆ ಭಾರತ ತುಂಬಾ ಇಷ್ಟವಾಗಿದ್ದು ದಿನಾಲು ಶಿವಮಂದಿರದಲ್ಲಿ ಪೂಜೆ ಸಲ್ಲಿಸುತ್ತಾರೆ, ಹಾಗೆಯೇ ಈ ಜಗತ್ತು ಬೇಗ ಕೊರೊನಾದಿಂದ ಮುಕ್ತವಾಗಲಿ ಅಂತ ದೇವರಲ್ಲಿ ಮೊರೆ ಇಡುತ್ತಿದ್ದಾರೆ.ಅವರು ಹೇಳುವ ಪ್ರಕಾರ ನಮಗೆ ಈ ಊರಲ್ಲಿ ಯಾವುದೇ ಆತಂಕವಿಲ್ಲ ನಾವು ಆರಾಮವಾಗಿದ್ದೇವೆ,ಲಾಕ್ ಡಾವುನ್ ಕಾಲಾವಧಿ ಮುಗಿದ ನಂತರ ನೇಪಾಳಕ್ಕೆ ಪ್ರವಾಸ ಮುಂದುವರಿಸುತ್ತೇವೆ.