ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಆದ ಹಾರ್ಧಿಕ್ ಪಾಂಡ್ಯಗಿದೆ ಐಶಾರಾಮೀ ಕಾರುಗಳ ಕ್ರೇಜ್ : ಇಲ್ನೋಡಿ ಅವರ ಕಾರುಗಳ ಕಲೆಕ್ಷನ್

ಕ್ರಿಕೆಟ್ ಆಟಗಾರರು ಎಂದರೆ ನಮ್ಮಲ್ಲಿ ಒಂದು ರೀತಿಯ ಕ್ರೇಜ್ ಹಾಗೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳೇ ಇದ್ದಾರೆ. ಕ್ರಿಕೆಟ್ ಎಂದರೆ ನಮ್ಮ ದೇಶದಲ್ಲಿ ಒಂದು ರೀತಿಯ ಕ್ರೇಜ್. ಕ್ರಿಕೆಟ್ ಆಟ ಎಂದರೆ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ನೋಡುವವರು ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಈ ಕ್ರೇಜ್ ಕ್ರಿಕೆಟ್ ಆಟದ ಬಗ್ಗೆ ಮಾತ್ರವಲ್ಲ, ಕ್ರಿಕೆಟ್ ಆಟಗಾರರ ಬಗ್ಗೆ ಕೂಡಾ ಇರುವುದು ಮತ್ತೊಂದು ವಿಶೇಷ. ಕ್ರಿಕೆಟ್ ಆಟಗಾರರು ನಮ್ಮ ದೇಶದಲ್ಲಿ ಯಾವ ಸಿನಿಮಾ ನಟರಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಇದ್ದಾರೆ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಐಶಾರಾಮೀ ಜೀವನ ನಡೆಸುತ್ತಾರೆ. ಅಂತಹ ಕ್ರಿಕೆಟಿಗರಲ್ಲಿ ಇಂದು ನಾವು ಐಶಾರಾಮೀ ಕಾರುಗಳ‌ ಕೆಲಕ್ಷನ್ ಇರುವ ಒಬ್ಬ ಕ್ರಿಕೆಟ್ ಸ್ಟಾರ್ ಬಗ್ಗೆ ಹೇಳಲು ಹೊರಟಿದ್ದೇವೆ. ಬನ್ನಿ ಯಾರೆಂದು ನೋಡೋಣ.

ಭಾರತೀಯ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿ ಹೆಸರು ಮಾಡಿರುವ ಕ್ರಿಕೆಟ್ ಆಟಗಾರ ಹಾರ್ಧಿಕ್ ಪಾಂಡ್ಯ ಒಬ್ಬ ಆಲ್ ರೌಂಡರ್ ಎನ್ನುವುದನ್ನು ಕ್ರಿಕೆಟ್ ಪ್ರಿಯರಿಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಹಲವು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಟವನ್ನು, ಆಟದಲ್ಲಿ ಅವರ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ನೋಡಿದ್ದಾರೆ, ಮೆಚ್ಚಿದ್ದಾರೆ ಹಾಗೂ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಅವರನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಹಾರ್ಧಿಕ್ ಪಾಂಡ್ಯ ಬೌಲಿಂಗ್ ಆದರೂ ಸರಿ, ಬ್ಯಾಟಿಂಗ್ ಆದರೂ ಸರಿ ತಮ್ಮ ಅಭಿಮಾನಿಗಳಿಗೆ ತನ್ನ ಆಟದ ಮೂಲಕವೇ ಹುಚ್ಚು ಹಿಡಿಸುವಂತಹ ಪ್ರತಿಭಾವಂತ ಆಟಗಾರನಾಗಿದ್ದಾರೆ.

ತನ್ನ ಅದ್ಭುತವಾದ ಪ್ರದರ್ಶನದ ಮೂಲಕ ಎದುರಾಳಿಗಳ ಎದೆಯಲ್ಲಿ ಒಂದು ಸಂಚಲನ ಸೃಷ್ಟಿಸುವ ಈ ಕ್ರಿಕೆಟ್ ಆಟಗಾರನ ಬಳಿ ಐಶಾರಾಮೀ ಕಾರುಗಳ ಸಂಗ್ರಹ ಒಂದಿದೆ. ಹೌದು ಹಾರ್ಧಿಕ್ ಪಾಂಡ್ಯ ಐಶಾರಾಮೀ ಕಾರುಗಳ ಒಡೆಯನಾಗಿದ್ದು ಅವರ ಕಲೆಕ್ಷನ್ ನಲ್ಲಿ ಇರುವ ಪ್ರಮುಖ ಕಾರುಗಳ ಬಗ್ಗೆ ತಿಳಿಯೋಣ ಬನ್ನಿ. ಹಾರ್ಧಿಕ್ ಪಾಂಡ್ಯ ಅವರ ಬಳಿ ಇರುವ ಐಶಾರಾಮೀ ಕಾರುಗಳಲ್ಲಿ ಮರ್ಸಿಡೀಸ್ ಎಎಂಜಿ ಜಿ63 ಕಾರು ಕೂಡಾ ಇದೆ‌. ಈ ಕಾರಿನ ಬೆಲೆ ಬರೋಬ್ಬರಿ 2.2 ಕೋಟಿ ರೂಪಾಯಿಗಳು ಎನ್ನಲಾಗಿದ್ದು, ಹಾರ್ಧಿಕ್ ಪಟೇಲ್ ಅವರು ಈ ವಿಲಾಸೀ ಕಾರಿನ ಮಾಲಿಕರಾಗಿದ್ದಾರೆ.

ಹಾರ್ಧಿಕ್ ಪಾಂಡ್ಯ ಅವರ ಮತ್ತೊಂದು ಕಾರು ಲ್ಯಾಂಬೊರ್ಗಿನಿಯ ಹುರಾಕನ್ ಇವಿಓ ಆಗಿದೆ. ಈ ಕಾರು ಕೂಡಾ ಐಶಾರಾಮೀ ಕಾರುಗಳಲ್ಲಿ ಒಂದಾಗಿದ್ದು ಇದು ಅವರ ಮರ್ಸೀಡೀಸ್ ಕಾರಿಗಿಂತ ದುಬಾರಿ ಬೆಲೆಯ ಕಾರಾಗಿದೆ‌. ಇದರ ಬೆಲೆ 3.75 ಕೋಟಿ ರೂಪಾಯಿಗಳು ಎನ್ನಲಾಗಿದೆ. ಪಾಂಡ್ಯ ಅವರ ಬಳಿ ಮಿನಿ ಕ್ಲಬ್ ಮೈನ್ ಕೂಪರ್ ಕಾರು ಕೂಡಾ ಇದೆ. ಇದು ಭಾರತದಲ್ಲಿ ಎಲ್ಲದಕ್ಕಿಂತ ದೊಡ್ಡ‌ ಮಿನಿ ಕಾರಾಗಿದ್ದು, ಇದು ಕೂಡಾ ಒಂದು ವಿಶೇಷವಾದ ಕಾರಾಗಿದೆ‌. ಇದರ ಜೊತೆಗೆ ಅವರ ಬಳಿ ಮತ್ತೊಂದು ವಿಲಾಸಿ ಕಾರು ಕೂಡಾ ಇದೆ. ಅದೇ ರೇಂಜ್ ರೋವರ್ ಕಾರು. ಇಷ್ಟಕ್ಕೆ ಅವರ ಕಾರಿನ ಸಂಗ್ರಹ ಮುಗಿಯಿತು ಎಂದು ಕೊಳ್ಳಬೇಡಿ.

ಹಾರ್ಧಿಕ್ ಪಾಂಡ್ಯ ಅವರ ಬಳಿ 70 ಲಕ್ಷ ರೂಪಾಯಿ ಬೆಲೆ ಬಾಳುವ ಆಡಿ ಎ6 35 ಟಿಡಿಐ ಕಾರು ಕೂಡಾ ಇದೆ. ಇದರ ಜೊತೆಗೆ ಅವರ ಬಳಿ ಟೊಯೋಟಾ ಎಟಿಯೋಸ್ ಐಶಾರಾಮೀ ಕಾರು ಕೂಡಾ ಇದೆ. ಹೀಗೆ ಕ್ರಿಕೆಟ್ ಆಟಗಾರ ಹಾರ್ಧಿಕ್ ಪಾಂಡ್ಯ ತಮ್ಮ ಆಟದಿಂದ ಅಭಿಮಾನಿಗಳಲ್ಲಿ ಕ್ರಿಕೆಟ್ ಕ್ರೇಜ್ ಹುಟ್ಟು ಹಾಕಿದ್ದರೆ, ಇನ್ನೊಂದೆಡೆ ಅವರ ಕಾರ್ ಕ್ರೇಜ್ ಕೂಡಾ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅವರ ಕಲೆಕ್ಷನ್ ನಲ್ಲಿರುವ ದುಬಾರಿ ಕಾರುಗಳ ಪರಿಚಯ ನೋಡಿದಾಗಲೇ ಕಾರುಗಳ ಬಗ್ಗೆ ಅವರಿಗಿರುವ ಆಸಕ್ತಿ ಎಂತದ್ದು ಎಂದು ನಮಗೆ ತಿಳಿಯುತ್ತದೆ.