ಹುಲಿಯ ಹಿಂದೆ ಹೆಜ್ಜೆ ಹಾಕಿದ ಜಿಂಕೆ, ಕತ್ತಲಲ್ಲಿ ತನ್ನ ಬೇಟೆಯೊಡನೆ ಹೆಜ್ಜೆ ಹಾಕಿದ ಹುಲಿಯ ನೋಡಿ ವಿಸ್ಮಯಗೊಂಡ ನೆಟ್ಟಿಗರು! ನೋಡಿ ಈ Video
ಬೇ ಟೆ ಹಾಗೂ ಆ ಬೇ ಟೆಯನ್ನು ಗುರಿಯಾಗಿಸಿಕೊಳ್ಳುವ ಮಾಂ ಸಾ ಹಾರಿ ಪ್ರಾಣಿ ಎರಡೂ ಕೂಡಾ ಜೊತೆ ಜೊತೆಯಲ್ಲಿ ನಡೆಯುವುದನ್ನು ನೋಡಿರುವಿರಾ? ವಿಚಿತ್ರ ಪ್ರಶ್ನೆ ಎನಿಸಬಹುದು. ಆದರೆ ಇಂತಹುದೊಂದು ಘಟನೆ ನಡೆದ್ರೆ, ಅದರ ವೀಡಿಯೋ ನಮ್ಮ ಕಣ್ಮುಂದೆ ಬಂದ್ರೆ ನಿಜಕ್ಕೂ ಒಂದು ವಿಸ್ಮಯ, ಸೋಜಿಗ ಎನಿಸದೇ ಇರಲಾರದು. ಇಂತಹ ವಿಸ್ಮಯ ಗಳು ಕೂಡಾ ಆಗಾಗ ಕಾಡಿನಲ್ಲಿ ನಡೆಯುವುದು ಉಂಟು. ಆದರೆ ಇಂತಹವುಗಳನ್ನು ನೋಡೋ ಭಾಗ್ಯ ಎಲ್ಲರಿಗೂ ದಕ್ಕೋದಕ್ಕೆ ಸಾಧ್ಯವಂತೂ ಇಲ್ಲ. ಆದರೆ ಇಂತ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಆದ್ರೆ ಭರ್ಜರಿ ವೈರಲ್ ಆಗೋದಂತೂ ನಿಜ.
ಈಗ ಸೋಶಿಯಲ್ ಮೀಡಿಯಾದಲ್ಲಿ ಇಂತದ್ದೇ ಒಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು ಪ್ರವೀಣ್ ಕಾಸ್ವಾನ್ ಎನ್ನುವ ಒಬ್ಬರು ಐಎಫ್ಎಸ್ ಅಧಿಕಾರಿಯು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ವೀಡಿಯೋವನ್ನು ಹಂಚಿಕೊಂಡ ಜೊತೆಗೆ ವೀಡಿಯೋಗೆ ಶೀರ್ಷಿಕೆಯಲ್ಲಿ, “ರಾತ್ರಿಯಲ್ಲಿ ಬೇ ಟೆ ಮತ್ತು ಬೇ ಟೆಯನ್ನು ತಿನ್ನುವ ಭ ಕ್ಷ ಕ, ಇದಕ್ಕೆ ಯಾವುದೇ ಅರ್ಥವಿಲ್ಲ, ಸ್ನೇಹಿತರೊಬ್ಬರು ಹಂಚಿಕೊಂಡ ವೀಡಿಯೋ, ಯಾರಾದರೂ ಇದಕ್ಕೆ ಒಂದು ಕಥೆಯನ್ನು ಹೇಳಬಹುದೇನು?” ಎಂದು ಬರೆದುಕೊಂಡು ನೆಟ್ಟಿಗರಿಗೇ ಆ ವೀಡಿಯೋ ಬಗ್ಗೆ ಬರೆಯಲು ಆಯ್ಕೆ ನೀಡಿದ್ದಾರೆ.
ವೀಡಿಯೋದಲ್ಲಿ ಒಂದು ಕತ್ತಲಾದ ಕಾರಣ ಸ್ಪಷ್ಟವಾಗಿ ಕಾಣುತ್ತಿಲ್ಲವಾದರೂ, ಅದೊಂದು ಹುಲಿಯೋ ಅಥವಾ ಚಿರತೆಯೋ ಮುಂದೆ ಸಾಗುತ್ತಿದ್ದರೆ, ಅದರ ಹಿಂದೆ ಒಂದು ಜಿಂಕೆ ಕೂಡಾ ನಡೆದು ಹೋಗುತ್ತಿರುವುದನ್ನು ನಾವು ನೋಡಬಹುದು. ಕತ್ತಲು ಇರುವುದರಿಂದ ಬಹುಶಃ ಜಿಂಕೆಗೆ ತನ್ನ ಮುಂದೆ ಇರುವ ಪ್ರಾಣಿ ಯಾವುದೆಂದು ತಿಳಿಯಲಿಲ್ಲವೋ ಅಥವಾ ತನ್ನ ಹಿಂದೆ ಜಿಂಕೆ ಬರುತ್ತಿರುವುದು ತಿಳಿಯಲಿಲ್ಲವೇನೋ ಎನ್ನುವಂತೆ ಮುಂದೆ ಸಾಗಿದೆ. ಈ ವೀಡಿಯೋ ಶೇರ್ ಆದ ಒಂದೇ ದಿನದಲ್ಲಿ 96 ಸಾವಿರ ದಾಟಿದ ವೀಕ್ಷಣೆ, ನಾಲ್ಕು ಸಾವಿರದ ಹತ್ತಿರದ ಲೈಕ್ಸ್ ಪಡೆದುಕೊಂಡಿದೆ.
ಇನ್ನು ಶೀರ್ಷಿಕೆಯಲ್ಲಿ ಈ ವೀಡಿಯೋಗೆ ಒಂದು ಕಥೆ ಹೇಳಿ ಎಂದು ಬರೆದಿರುವ ಕಾರಣ ಅನೇಕರು ಪ್ರತಿಕ್ರಿಯೆ ಗಳನ್ನು ನೀಡುತ್ತಾ ತಮ್ಮದೇ ಆದ ರೀತಿಯಲ್ಲಿ ವೀಡಿಯೋಕ್ಕೆ ವಿವರಣೆ ನೀಡಿದ್ದಾರೆ. ಅನೇಕರು ವನ್ಯ ಪ್ರಾಣಿಗಳಿಗೆ ಪರಿಸರದ ನಿಯಮ ತಿಳಿದಿದೆ. ಅವು ಹಸಿವಾದಾಗ ಮಾತ್ರವೇ ಆಹಾರವನ್ನು ಬೇಟೆಯಾಡುತ್ತವೆಯೇ ಹೊರತು ಮನುಷ್ಯನ ಹಾಗೇ ಸ್ವಾರ್ಥ ದಿಂದ ಎಲ್ಲವೂ ತನಗೆ ಬೇಕೆನ್ನುವುದಿಲ್ಲ ಎಂದು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು ಇದು ಕನ್ನಡದ ಪುಣ್ಯಕೋಟಿ ಹಾಡನ್ನು ನೆನಪಿಸಿದೆ ಎಂದು ಬರೆದಿದ್ದಾರೆ.
ವಿಡಿಯೋ ನೋಡಿ
Prey & predator in night. This makes no sense. Can someone come up with a story. Shared by a friend. pic.twitter.com/DLs5t9PvO7
— Parveen Kaswan, IFS (@ParveenKaswan) November 13, 2020
ಕೆಲವರು ಇದಕ್ಕೆ ಹೊಂದಾಣಿಕೆ ಆಗುವ ನೀತಿ ಕಥೆಗಳನ್ನು ಕೂಡಾ ಬರೆದು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಬಹುಶಃ ರಾತ್ರಿ ವೇಳೆ ಅ ಎರಡಕ್ಕೂ ಅಪರಿಚಿತ ಜಾಗದಲ್ಲಿ ಅ ಪಾ ಯ ಎದುರಾದ ಕಾರಣ ಅವು ಹಾಗೆ ಜೊತೆಯಾಗಿ ನಡೆದಿವೆ ಎಂದಿದ್ದಾರೆ. ಇದೆಲ್ಲದರ ನಡುವೆಯೇ ಕೆಲವರು ಇದು ಎಡಿಟೆಡ್ ವೀಡಿಯೋ, ಎರಡು ಭಿನ್ನವಾದ ಸನ್ನಿವೇಶಗಳನ್ನು ಜಾಣ್ಮೆಯಿಂದ ಎಡಿಟ್ ಮಾಡಲಾಗಿದೆ, ಎಡಿಟ್ ಮಾಡಿದವನು ಅತಿ ಬುದ್ಧಿವಂತ ಎಂದು ಕೂಡಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಏನೇ ಆದರೂ ವೀಡಿಯೋ ಮಾತ್ರ ಭರ್ಜರಿ ವೈರಲ್ ಆಗ್ತಾ ಸಾಗಿದೆ.