ಹೈ ವೇ ಮೇಲೆ ಬಸ್ಸು ನಿಲ್ಲಿಸಿ ಹಾಡು ಹಗಲೇ ಕಳ್ಳತನ ಮಾಡಿದ ಆನೆ; ಬಸ್ಸಿನೊಳಗೆ ಸೊಂಡಿಲು ಹಾಕಿ ಮಾಡಿದ್ದೇನು ನೋಡಿ ಈ Viral Video!
ಪ್ರಾಣಿ ಮತ್ತು ಪಕ್ಷಿಗಳ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಮನುಷ್ಯನಂತೆ ಮಾಡುವ ಅವುಗಳ ವಿವಿಧ ಆಟಗಳು, ಮೋಜಿನ ಸಂಗತಿಗಳು ಸೋಷಿಯಲ್ ಮೀಡಿಯಾದಲ್ಲಿ ಜನರ ಕಣ್ಮನ ಸೆಳೆಯುತ್ತವೆ ಹಾಗೂ ಮೆಚ್ಚುಗೆಯನ್ನು ಪಡೆಯುತ್ತವೆ. ನೆಟ್ಟಿಗರು ಅಂಥ ವಿಡಿಯೋಗಳನ್ನು ನೋಡಿ ತುಂಬಾ ಖುಷಿ ಪಡುತ್ತಾರೆ.
ಸದ್ಯ ಆನೆಗೆ ಸಂಬಂಧಿಸಿದ ವಿಡಿಯೋ ಒಂದು ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಆನೆಯು ತನ್ನ ಶಕ್ತಿಯ ಪ್ರಭಾವದಿಂದ ಅಥವಾ ಪುಂಡಾಟದಿಂದ ತನಗಾದ ಹಸಿವನ್ನು ನೀಗಿಸಿಕೊಳ್ಳಲು ಪ್ರಯತ್ನ ಮಾಡಿದೆ. ವಿಡಿಯೋದಲ್ಲಿ ಆನೆಯು ನಡುರಸ್ತೆಯಲ್ಲಿ ನಿಂತು ಬಸ್ಸಿಗೆ ಅಡ್ಡಗಟ್ಟಿದೆ. ಆನಂತರ ಚಾಲಕನ ಕ್ಯಾಬಿನ್ ಹತ್ತಿರದ ವಿಂಡೋಲಿಂದ ತನ್ನ ಸೊಂಡಿಲನ್ನು ಒಳಗೆ ತೂರಿಸಿ ಅಲ್ಲಿರುವ ಬಾಳೆಹಣ್ಣಿನ ಗೊಂಚಲನ್ನು ತೆಗೆದುಕೊಂಡು ಬಿಟ್ಟಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
ಈ ವಿಡಿಯೋ ನೋಡುವಾಗ ಆನೆಯು ಬಾಳೆಹಣ್ಣನ್ನು ತಿನ್ನಲು ಎಷ್ಟೊಂದು ಆತುರವಾಗಿದೆ ಎಂಬುದನ್ನು ಗಮನಿಸಬಹುದು. ಏಕೆಂದರೆ ವಿಡಿಯೋದಲ್ಲಿ ದೃಶ್ಯವು ಹೀಗೆ ಹೇಳುತ್ತದೆ.
ಈ ವಿಡಿಯೋವನ್ನು ನೋಡಿ ತುಂಬಾ ಜನರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಾಣಿಗಳು ಹಸಿವಾದಾಗ ಹೀಗೆ ಮಾಡುವದು ಸಹಜ ಎನ್ನುತ್ತಾರೆ. ಇನ್ನೊಬ್ಬ ಯೂಸರ್ ಹೀಗೆ ಹೇಳುತ್ತಾನೆ….. ಈ ವಿಡಿಯೋವನ್ನು ಪೂರ್ವ ನಿಯೋಜನೆಯ ಮುಖಾಂತರ ತಯಾರಿಸಲಾಗಿದೆ ಎಂದು. ಕೆಲವರು ಬಾಳೆಹಣ್ಣನ್ನು ಕದಿಯುವ ಶ್ರೀಲಂಕನ್ ಕಳ್ಳ ಎಂದು ವರ್ಣಿಸಿದ್ದಾರೆ.
Daylight robbery on a highway. A forward. pic.twitter.com/QqGfa90gF5
— Parveen Kaswan, IFS (@ParveenKaswan) November 11, 2020
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಆನೆಯು ಮಾಡಿದ ದಾದಾಗಿರಿಯ ಈ ದೃಶ್ಯವನ್ನು ಇಲ್ಲಿಯವರೆಗೆ ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 50 ಸಾವಿರಕ್ಕೂ ಮೇಲ್ಪಟ್ಟು ಶೇರ್ ಮಾಡಲಾಗಿದೆ.