ಬಾಲಿವುಡ್ ಸ್ಟಾರ್ ರಿಷಿ ಕಪೂರ್ ಇನ್ನಿಲ್ಲ!!
ನಿನ್ನೆಯಷ್ಟೇ ಇರ್ಫಾನ್ ಖಾನ್ ತೀರಿಕೊಂಡ ಸುದ್ದಿ ಹಸಿರಿರುವಾಗಲೇ ಬಾಲಿವುಡ್ ಗೆ ರಿಷಿ ಕಪೂರ್ ಅವರ ನಿಧನದ ಮತ್ತೊಂದು ದುಃಖದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ.

ಬಿಗ್ ಬಿ ಬಚ್ಚನ್ ಅವರು ಟ್ವಿಟ್ ಅಕೌಂಟ್ ನಿಂದ ರಿಷಿ ಕಪೂರ್ ಗೆ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.ತಮ್ಮ ಟ್ವಿಟ್ ನಲ್ಲಿ ನಾನು ಸಂಪೂರ್ಣ ನಿರಾಶನಾಗಿದ್ದೇನೆ ಎಂದಿದ್ದಾರೆ.ಇಡೀ ಬಾಲಿವುಡ್ ಶೋಕ ಸಾಗರದಲ್ಲಿ ಮುಳುಗಿದೆ. ನಿಧನದ ಕಾರಣ ಕ್ಯಾನ್ಸರ್ ಅಂತ ಹೇಳಲಾಗಿದೆ.