ನಾಯಿ, ಕೋತಿಗಳ ಹಿಂದೆ ನಕಲಿ ಹುಲಿಯನ್ನಿಟ್ಟು ಅವುಗಳ ರಿಯಾಕ್ಷನ್ ರೆಕಾರ್ಟ್ ಮಾಡಿದ ಯೂಟ್ಯೂಬರ್; ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು!

ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ವೀಡಿಯೋಗಳು ಹೇಗೆ ಎಂದರೆ, ಅವು ನೋಡು ನೋಡುತ್ತಲೇ ವೈರಲ್ ಆಗಿ ಬಿಡುತ್ತವೆ. ಆದರೆ ಅರಂಭದಲ್ಲಿ ಅಷ್ಟೇನೂ ಸದ್ದು ಮಾಡದ ಕೆಲವು ವೀಡಿಯೋಗಳು ಅನಂತರ ಅಂದರೆ ದಿನಗಳೆದಂತೆ ನೋಡುವವರ ಸಂಖ್ಯೆ ಹಾಗೂ ಹಂಚಿಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ ಎಲ್ಲೆಡೆ ವೈರಲ್ ಆಗುತ್ತಾ ಸಾಗುತ್ತದೆ , ಸೋಶಿಯಲ್ ಮೀಡಿಯಾದ ಬೇರೆ ಬೇರೆ ತಾಣಗಳಲ್ಲಿ ಕೂಡಾ ಅಪಾರವಾದ ಜನಪ್ರಿಯತೆ ಪಡೆದುಕೊಂಡು ಬಿಡುತ್ತದೆ. ಈಗ ಕಳೆದ ಕೆಲವು ದಿನಗಳಿಂದಲೂ ಕೂಡಾ ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಗಮನವನ್ನು ತನ್ನ ಕಡೆಗೆ ಸೆಳೆಯುತ್ತಿದ್ದು, ಈಗಾಗಲೇ ಈ ವೀಡಿಯೊವನ್ನು 55 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಥೈಲ್ಯಾಂಡ್ ನ ಒಬ್ಬ ಯೂಟ್ಯೂಬರ್ ಒಂದು ನಕಲಿ ಹುಲಿ ಅಂದರೆ ಹುಲಿಯಂತೆಯೇ ಕಾಣುವಂತಹ ಒಂದು ಹುಲಿಯ ಬೊಂಬೆಯನ್ನು ಮಲಗಿರುವ ಅಥವಾ ಸುಮ್ಮನೆ ಕುಳಿತಿರುವ ಬೇರೆ ಪ್ರಾಣಿಗಳ ಹಿಂದೆ ಅವುಗಳಿಗೆ ಗೊತ್ತಾಗದ ಹಾಗೆ ಹೋಗಿ ಇಟ್ಟು ಬರುತ್ತಾನೆ. ಆತ ಪ್ರಾಂಕ್ ವೀಡಿಯೋಗಳನ್ನು ಮಾಡಲು ಇಂತಹ ಕಾರ್ಯವನ್ನು ಮಾಡುತ್ತಿದ್ದಾನೆ. ಹೀಗೆ ಆತ ಇಟ್ಟು ಬಂದ ಆ ನಕಲಿ ಹುಲಿಯನ್ನು ಅಸಲಿ ಎಂದೇ ತಿಳಿದ ಪ್ರಾಣಿಗಳು ಅದನ್ನು ನೋಡಿದಾಗ ಅವು ನೀಡುವ ರಿಯಾಕ್ಷನ್ ಅನ್ನು ಆತ ಕ್ಯಾಮೆರಾದಲ್ಲಿ ಬಂ ಧಿ ಸಿ ಅವುಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾನೆ.‌

ಈ ವೀಡಿಯೋ ಯೂಟ್ಯೂಬ್ ನಲ್ಲಿ ಶೇರ್ ಆದ ಮೇಲೆ ಅದನ್ನು ನೋಡಿದ ನೆಟ್ಟಿಗರಿಗೆ ಇದು ಬಹಳ ಮನರಂಜನೆಯನ್ನು ನೀಡುತ್ತಿದೆ. ವೀಡಿಯೋ ನೋಡಿದವರು ಬಿದ್ದು ಬಿದ್ದು ನಗುವುದು ಸಾಮಾನ್ಯವಾಗಿದೆ. ವೀಡಿಯೋದಲ್ಲಿ ನೋಡಿದಾಗ ನಾಯಿಗಳು ತಮ್ಮ ಹಿಂದೆ ಹುಲಿಯನ್ನು ನೋಡಿದ ಕೂಡಲೇ ಭ ಯದಿಂದ ಅಲ್ಲಿಂದ ಎದ್ದು ಓಡಿ ಹೋಗಿವೆ. ಆದರೆ ಕೆಲವು ಕಡೆ ಮಾತ್ರ ನಾಯಿಗಳು ಭಯಪಡದೇ ಆ ಹುಲಿಯ ಬೊಂಬೆಯ ಮೇಲೆಯೇ ಆ ಕ್ರ ಮಣವನ್ನು ಮಾಡಲು ಹೊರಟಿರುವುದನ್ನು ಕೂಡಾ ನಾವು ನೋಡಬಹುದಾಗಿದೆ.

ಹೀಗೆ ನಕಲಿ ಹುಲಿಯನ್ನು ಇಟ್ಟು ನಾಯಿಗಳಿಗೆ ಭ ಯ ವನ್ನು ಉಂಟು ಮಾಡುವ ಯೂಟ್ಯೂಬರ್ ಇದೇ ವೀಡಿಯೋದಲ್ಲಿ ಪ್ರಾಣಿಗಳಿಗೆ ಕ್ಷಮೆಯನ್ನು ಕೂಡಾ ಕೇಳಿರುವುದನ್ನು ಕೂಡಾ ಗಮನಿಸಬಹುದಾಗಿದೆ. ಈ ಹಿಂದೆ ಕೂಡಾ ಈತ ಇಂತದ್ದೇ ಒಂದು ಪ್ರಾಂಕ್ ವೀಡಿಯೋವನ್ನು ಮಾಡಿದ್ದ. ಆ ಬಾರಿ ಆತ ಬೆಕ್ಕುಗಳ ಮೇಲೆ ಇಂತಹ ಪ್ರಯೋಗ ಮಾಡಿ ಅವುಗಳ ರಿಯಾಕ್ಷನ್ ಹೇಗಿರುತ್ತದೆ ಎನ್ನುವುದನ್ನು ರೆಕಾರ್ಡ್ ಮಾಡಿದ್ದ, ಆಗಲೂ ವೀಡಿಯೋ ಸೋಶಿಯಲ್ ಮೀಡಿಯಾದ ಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ಈ ಬಾರಿ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಪ್ರತಿಕ್ರಿಯೆಗಳನ್ನು ಕೂಡಾ ದೊಡ್ಡ ಸಂಖ್ಯೆಯಲ್ಲೇ ನೀಡಿದ್ದಾರೆ.

ವಿಡಿಯೋ ನೋಡಿ

ನೆಟ್ಟಿಗರು ಈ ವೀಡಿಯೋ ನೋಡಿ ನಕ್ಕಿದ್ದರೆ, ಕೆಲವರು ವೀಡಿಯೋ ಮಾಡಿರುವ ಯೂಟ್ಯೂಬರ್ ಬಗೆಗೆ ತಮ್ಮ ಅ ಸಹನೆಯನ್ನು ಕೂಡಾ ಹೊರಹಾಕಿದ್ದಾರೆ. ಅನೇಕರು ಪ್ರಾಣಿಗಳಿಗೆ ತೊಂದರೆ ಕೊಡುವುದು ಸರಿಯಲ್ಲವೆಂದು ಹೇಳಿದ್ದಾರೆ. ಇನ್ನೂ ಕೆಲವರು ನಿನ್ನ ಮೇಲೂ ಇಂತಹ ಪ್ರಯೋಗ ಮಾಡಬೇಕು ಎಂದು ಟೀ ಕೆ ಮಾಡಿದ್ದಾರೆ. ಮತ್ತೆ ಕೆಲವರು ವೀಡಿಯೋ ನೋಡಿ ಬಹಳ ಮನರಂಜನೆಯ ಹಾಗೂ ಹಾಸ್ಯದಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನು ಕೂಡಾ ಆಡಿದ್ದಾರೆ. ಒಟ್ಟಾರೆ ವೀಡಿಯೋ ಮಾತ್ರ ಭರ್ಜರಿ ವೀಕ್ಷಣೆಯನ್ನಂತೂ ಪಡೆದಿದೆ.‌