ಮಾರುತಿ ಕಂಪನಿ ಕಾರುಗಳು ಎಷ್ಟು ಸುರಕ್ಷಿತ: ಕ್ರ್ಯಾಶ್ ಟೆಸ್ಟ್ ನಲ್ಲಿ ಸಿಕ್ಕ ಅಂಕಗಳೆಷ್ಟು?

ಇತ್ತೀಚಿಗಷ್ಟೇ ಗ್ಲೋಬರ್ ಎನ್ ಸಿ ಎ ಪಿ ಹಲವು ಭಾರತೀಯ ವಾಹನಗಳ ಕ್ರ್ಯಾಶ್ ಪರೀಕ್ಷೆಯನ್ನು ನಡೆಸಿದ್ದು, ಅದರ ಫಲಿತಾಂಶವನ್ನು ಕೂಡಾ ಪ್ರಕಟಣೆ ಮಾಡಿದೆ‌. ಇದರಲ್ಲಿ ಟಾಟಾ ಮೋಟರ್ಸ್ ಮತ್ತು ಮಹೀಂದ್ರಾ ಕಂಪನಿಯ ವಾಹನಗಳಿಗೆ ಉತ್ತಮ ಅಂಕಗಳು ಸಿಕ್ಕರೆ, ಮಾರುತಿ ಸುಜುಕಿಯ ಕೆಲವು ವಾಹನಗಳಿಗೆ ಶೂನ್ಯ ಸ್ಟಾರ್ ದೊರೆತಿದೆ. ಇಂತಹ ಸ್ಕೋರ್ ಸಿಕ್ಕ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಟೀ ಕೆ ಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ಲೋಬಲ್ ಎನ್ ಸಿ ಎ ಪಿ ಒಂದು ವಿಶ್ವ ಮಟ್ಟದ ಏಜನ್ಸಿಯಾಗಿದ್ದು, ಇದು ಹೊಸ ಹೊಸ ಕಾರುಗಳ ಕ್ರ್ಯಾ ಶ್ ಟೆಸ್ಟ್‌ ನಡೆಸಿ ಅವುಗಳ ಸುರಕ್ಷತೆಯ ಮಟ್ಟ ನಿರ್ಧರಿಸಿ ಸೊನ್ನೆ ಯಿಂದ ಐದರ ವರೆಗೆ ಸ್ಕೋರ್ ನೀಡುತ್ತದೆ. ಹಾಗಾದರೆ ಮಾರುತಿಯ ಯಾವ ಕಾರಿಗೆ ಎಷ್ಟು ಸ್ಕೋರ್ ಸಿಕ್ಕಿದೆ ಎಂಬುದನ್ನು ನೋಡೋಣ ಬನ್ನಿ.

ಮಾರುತಿ ಸುಜುಕಿ S presso : ಈ ಕಾರಿಗೆ ಶೂನ್ಯ ಸ್ಕೋರ್ ದೊರೆತಿದೆ. ಈ ಕಾರಿನಲ್ಲಿ ವಯಸ್ಕರ ಸುರಕ್ಷತೆಗೆ ಶೂನ್ಯ ಸ್ಟಾರ್ ದೊರೆತಿದ್ದು, ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಎರಡು ಸ್ಟಾರ್ ಗಳನ್ನು ಪಡೆದುಕೊಂಡಿದೆ. ಈ ಕಾರಿನ VXI ವೇರಿಯಂಟ್ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ ಡ್ರೈವರ್ ಸೈಡ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ರಿಮೈಂಡರ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ನಂತರ ಸ್ಟಾಂಡರ್ಡ್ ಸೇಫ್ಟಿ ಸವಲತ್ತುಗಳನ್ನು ಕೂಡಾ ಪರೀಕ್ಷೆ ಮಾಡಲಾಗಿದೆ.

ಮಾರುತಿ ಈಕೋ : ಶೂನ್ಯ ಸ್ಟಾರ್. ಈ ಕಾರು ಭಾರತದಲ್ಲಿ ಈಗಾಗಲೇ ಒಂದು ದಶಕವನ್ನು ಪೂರೈಸಿದೆ. ವಯಸ್ಕರ ರಕ್ಷಣೆಯಲ್ಲಿ ಇದು ಕ್ರ್ಯಾಶ್ ಟೆಸ್ಟ್ ನಲ್ಲಿ ಸೊನ್ನೆ ಅಂಕ ಪಡೆದಿದ್ದು ಮಕ್ಕಳ ರಕ್ಷಣೆಯಲ್ಲಿ ಎರಡು ಅಂಕಗಳನ್ನು ಪಡೆದಿದೆ. ಕೆಲವು ದಿನಗಳ ಹಿಂದೆ ಮಾರುತಿ ತನ್ನ ಈ ಕಾರಿನ ಸುಮಾರು 40 ಸಾವಿರ ಯೂನಿಟ್ ಗಳನ್ನು ಹಿಂಪಡೆದಿದೆ. ಅಲ್ಲದೇ ಈ ಕಾರಿನ ಹೆಡ್ ಲ್ಯಾಂಪ್ ನಲ್ಲಿ ಪ್ರಮಾಣಿತ ಚಿಹ್ನೆ ಕೂಡಾ ಇಲ್ಲ ಎನ್ನಲಾಗಿದೆ.

ಮಾರುತಿ ಸೆಲೆರಿಯೋ: ಶೂನ್ಯ ಸ್ಟಾರ್. ಮಾರುತಿ ಸೆಲೆರಿಯೋ ಕಾರಿಗೂ ಕೂಡಾ ಶೂನ್ಯ ಸ್ಟಾರ್ ದಕ್ಕಿದೆ. ಈ ಕಾರಿನಲ್ಲಿ ಕೂಡಾ ವಯಸ್ಕರ ರಕ್ಷಣೆಯ ವಿಚಾರದಲ್ಲಿ ಸೊನ್ನೆ ಅಂಕ ದೊರೆತಿದ್ದು, ಮಕ್ಕಳ ಆಕ್ಯುಪೆನ್ಸಿಯಲ್ಲಿ ಒಂದು ಅಂಕ ಪಡೆದಿದೆ. ಈ ಕಾರಿನ ಬೆಲೆ 4.41 ಲಕ್ಷ ರೂಪಾಯಿಗಳಿಂದ ಆರಂಭವಾಗಿ 5.68 ಲಕ್ಷ ರೂಪಾಯಿಗಳವರೆಗೆ ಲಭ್ಯವಿದೆ. ಈ ಕಾರಿನಲ್ಲಿ ಸಿಎನ್ ಜಿ ಸೌಲಭ್ಯ ಕೂಡಾ‌ ಒದಗಿಸಲಾಗಿದೆ.

ಮಾರುತಿ ಸುಜುಕಿ ವ್ಯಾಗನಾರ್: ಎರಡು ಸ್ಟಾರ್. ನ್ಯೂ ಜನರೇಶನ್ ವ್ಯಾಗನಾರ್ ಕಾರು ಕ್ರ್ಯಾಶ್ ಪರೀಕ್ಷೆಯಲ್ಲಿ ಎರಡು ಸ್ಟಾರ್ ಪಡೆದುಕೊಂಡಿದೆ. ಇದು ವಯಸ್ಕರ ರಕ್ಷಣೆ ಹಾಗೂ ಮಕ್ಕಳ ಆಕ್ಯುಪೆಂನ್ಸಿ ವಿಚಾರದಲ್ಲಿ ಎರಡು ಸ್ಟಾರ್ ಗಳನ್ನು ಪಡೆದುಕೊಂಡಿದೆ. ಟಾಲ್ ಬಾಯ್ ವಿನ್ಯಾಸದ ಈ ಕಾರಿನಲ್ಲಿ ಎರಡು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ.

ಮಾರುತಿ ಸ್ವಿಫ್ಟ್: ಎರಡು ಸ್ಟಾರ್. ಮಾರುತಿಯ ಒಂದು ಜನಪ್ರಿಯ ಮಾಡೆಲ್ ಕಾರು ಇದಾಗಿದೆ. ಇದಕ್ಕೆ ಎನ್ ಸಿ ಎ ಬಿ ಪರೀಕ್ಷೆಯಲ್ಲಿ ಎರಡು ಸ್ಟಾರ್ ದೊರೆತಿದೆ. ವಯಸ್ಕರ ಹಾಗೂ ಮಕ್ಕಳ ರಕ್ಷಣಾ ವಿಚಾರದಲ್ಲಿ ತಲಾ ಎರಡು ಸ್ಟಾರ್ ಗಳನ್ನು ಪಡೆದಿರುವ ಈ
ಕಾರಿನ ಬೆಲೆ 5.19 ಲಕ್ಷದಿಂದ 8.02 ಲಕ್ಷ ರೂ. ಗಳಾಗಿವೆ ಎನ್ನಲಾಗಿದೆ.

ಮಾರುತಿ ಸುಜುಕಿ ಎರ್ಟಿಗಾ: ಮೂರು ಸ್ಟಾರ್. ಇದು ಮಾರುತಿಯ ಬಹುಪಯೋಗಿ ಕಾರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಏಳು ಜನರು ಕೂರಬಲ್ಲ ಈ ಕಾರ್ ಎನ್ ಸಿ ಎ ಬಿ ಪರೀಕ್ಷೆಯಲ್ಲಿ ಮೂರು ಸ್ಟಾರ್ ಗಳನ್ನು ತನ್ನದಾಗಿಸಿಕೊಂಡಿದೆ. ಇದು ಪೆಟ್ರೋಲ್ ಮತ್ತು ಸಿ ಎನ್ ಜಿ ಎರಡನ್ನೂ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಹೈಸ್ಪೀಡ್ ಅಲರ್ಟ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸೆಂಟ್ರಲ್ ಲಾಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ವಿಟಾರಾ ಬ್ರೆಜಾ: ನಾಲ್ಕು ಸ್ಟಾರ್ ಗಳು. ಮಾರುತಿಯ ಸಬ್ ಕಾಂಪ್ಯಾಕ್ಟ್ ಎಸ್ ಯು ವಿ ವಿಟಾರಾ ಬ್ರೆಜಾ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್ ಗಳನ್ನು ಪಡೆದಿದೆ. ಕಂಪನಿ ಕೂಡಾ 2020 ರಲ್ಲಿ ಈ ಕಾರನ್ನು ನವೀಕರಣ ಮಾಡಿದೆ. ಮೊದಲು ಕೇವಲ ಡೀಸೆಲ್ ಆಪ್ಷನ್ ಇದ್ದ ಈ ಕಾರಿನಲ್ಲಿ ಈಗ 1.5 ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆ ಕೂಡಾ ಇದೆ.