ತಾಯಿಯ ಹಳೇ ಸೀರೆಯಲ್ಲಿ ದೀಪಾವಳಿಗೆ ಹೊಸ ಡ್ರೆಸ್ ಹೊಲೆಸಿದ ಬಾಲಿವುಡ್ ನಟ; ವೈರಲ್ ಆಯ್ತು ವೀಡಿಯೋ!
ದೀಪಾವಳಿ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ತಮ್ಮ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಕೂಡಾ ಈ ಸಂಭ್ರಮ ಬಹಳ ಜೋರಾಗಿಯೇ ನಡೆದಿದೆ. ಅಭಿಮಾನಿಗಳು ಮಾತ್ರವೇ ಅಲ್ಲದೇ ಅಭಿಮಾನಿಗಳ ಅಚ್ಚು ಮೆಚ್ಚಿನ ನಟ ನಟಿಯರು ಕೂಡಾ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶುಭಾಶಯವನ್ನು ಕೂಡಾ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಅವರು ಕೂಡಾ ಒಂದು ಸುಂದರವಾದ ವೀಡಿಯೋವನ್ನು ಹಂಚಿಕೊಂಡಿದ್ದು, ಈ ವೀಡಿಯೋ ದೊಡ್ಡ ಸದ್ದನ್ನು ಮಾಡಿದೆ. ಎಲ್ಲರಂತೆ ಇವರು ಕೂಡಾ ಶುಭಾಶಯವನ್ನು ಹೇಳಿದ್ದರೂ ಅವರ ವೀಡಿಯೋದಲ್ಲೊಂದು ವಿಶೇಷ ಇದೆ.
ರಿತೇಶ್ ಅವರು ಹಂಚಿಕೊಳ್ಳುವ ವೀಡಿಯೋಗಳು ಸಾಮಾನ್ಯವಾಗಿಯೇ ವಿಶೇಷ ಹಾಗೂ ವಿಭಿನ್ನವಾಗಿರುತ್ತವೆ. ದೀಪಾವಳಿ ಸಂದರ್ಭದಲ್ಲಿ ಅವರು ತಮ್ಮಿಬ್ಬರು ಮಕ್ಕಳೊಂದಿದೆ ಕರ್ತಾ ಪೈಜಾಮ ಧರಿಸಿ ಜನರಿಗೆ ದೀಪಾಗಳಿ ಶುಭಾಶಯವನ್ನು ತಿಳಿಸಿದ್ದಾರೆ. ಇಲ್ಲಿನ ವಿಶೇಷ ಏನೆಂದರೆ ರಿತೇಶ್ ಮತ್ತು ಅವರ ಮಕ್ಕಳು ಧರಿಸಿದ್ದ ವಸ್ತ್ರಗಳನ್ನು ಅವರ ತಾಯಿಯ ಒಂದು ಹಳೇ ಸೀರೆಯಿಂದ ಸಿದ್ಧಪಡಿಸಲಾಗಿದೆ ಎಂದು ರಿತೇಶ್ ಅವರು ವೀಡಿಯೋದಲ್ಲಿ ತಿಳಿಸಿದ್ದು, ಈ ವಿಷಯ ಕೇಳಿ ಅನೇಕರಿಗೆ ಅದು ಆಶ್ಚರ್ಯ ಹಾಗೂ ಸಂತಸ ಎರಡನ್ನೂ ಕೂಡಾ ಉಂಟು ಮಾಡಿದೆ.
ರಿತೇಶ್ ದೀಪಾವಳಿ ವಿಶೇಷ ದಿನದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸುಂದರವಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ನೋಡಿದಾಗ ಅವರ ತಾಯಿ ಸೀರೆಯನ್ನು ಗಾಳಿಯಲ್ಲಿ ಹಾರಿಸುವುದನ್ನು ನಾವು ನೋಡಬಹುದು. ಅನಂತರ ಅದೇ ಸೀರೆಯಿಂದ ಸಿದ್ಧಪಡಿಸಿದ ಒಂದೇ ಬಣ್ಣದ ಕುರ್ತಾಗಳನ್ನು ಧರಿಸಿರುವ ರಿತೇಶ್ ಮತ್ತು ಅವರ ಇಬ್ಬರು ಮಕ್ಕಳು ಶುಭಾಶಯವನ್ನು ತಿಳಿಸುತ್ತಾರೆ. ವೀಡಿಯೋ ಶೇರ್ ಮಾಡಿಕೊಂಡ ರಿತೇಶ್ ಶೀರ್ಷಿಕೆಯಲ್ಲಿ, “ಅಮ್ಮನ ಹಳೇ ಸೀರೆ, ಮಕ್ಕಳಿಗೆ ದೀಪಾವಳಿಗೆ ಹೊಸ ಬಟ್ಟೆ, ಹ್ಯಾಪಿ ದೀಪಾವಳಿ” ಎಂದು ಬರೆದುಕೊಂಡಿದ್ದಾರೆ.
ವಿಡಿಯೋನೋಡಿ
ಈ ವೀಡಿಯೋ ಕೆಲವೇ ದಿನಗಳ ಹಿಂದೆ ಹಂಚಿಕೊಂಡಿದ್ದರೂ ಭರ್ಜರಿಯಾದ ವೀಕ್ಷಣೆಗಳನ್ನು ಅದು ಪಡೆದುಕೊಂಡಿದೆ. ರಿತೇಶ್ ಅವರು ಹಂಚಿಕೊಂಡ ಈ ವೀಡಿಯೋಗೆ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ಸೆಲೆಬ್ರಿಟಿಗಳು ಕೂಡಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ರಿತೇಶ್ ದೇಶ್ ಮುಖ್ ಬಾಲಿವುಡ್ ನಲ್ಲಿ ತಮ್ಮ ನಟನೆಯಿಂದಾಗಿ ಮಾತ್ರವಲ್ಲದೇ ತಮ್ಮದೇ ಆದಂತಹ ವಿಭಿನ್ನವಾದ ವ್ಯಕ್ತಿತ್ವದಿಂದ ಕೂಡಾ ಜನರ ಮನಸ್ಸನ್ನು ಗೆದ್ದಿರುವ ನಟ. ಕೆಲವೇ ದಿನಗಳ ಹಿಂದೆ ಅವರು ತಮ್ಮ ಪತ್ನಿ ಜೆನಿಲಿಯಾ ಜೊತೆಗೆ ಕಪಿಲ್ ಶರ್ಮಾ ನಡೆಸಿಕೊಡುವ ಹಾಸ್ಯ ಟಾಕ್ ಶೋ ನಲ್ಲಿ ಕೂಡಾ ಭಾಗವಹಿಸಿದ್ದರು.
ಆ ಸಂದರ್ಭದಲ್ಲಿ ಅವರು ತಮ್ಮ ಮತ್ತು ಜೆನಿಲಿಯಾ ಮದುವೆಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಅಲ್ಲದೇ ಪತಿ ಪತ್ನಿ ಇಬ್ಬರೂ ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಫೋಟೋ ಮತ್ತು ವಿಡಿಯೋ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ರಿತೇಶ್ ಹಾಗೂ ಜೆನಿಲಿಯಾ ತಮ್ಮ ಅಂಗಾಂಗಗಳನ್ನು ದಾನ ಮಾಡುವ ವಿಚಾರವನ್ನು ಕೂಡಾ ಕೆಲವು ದಿನಗಳ ಹಿಂದೆ ತಿಳಿಸಿದ್ದರು ಹಾಗೂ ಇತರರಿಗೂ ಈ ವಿಷಯವಾಗಿ ಸಲಹೆಯನ್ನು ನೀಡಿದ್ದರು.