ಟೂತ್ ಪೆಸ್ಟಿನ್ ಬಾಟಮ್ ನಲ್ಲಿ ಈ ರೀತಿಯ ಬಣ್ಣದ ಪಟ್ಟಿಗಳು ಯಾಕೆ ಇರುತ್ತವೆ? ಇದರ ಬಗ್ಗೆ ನಿಮಗೆ ಗೊತ್ತಾ?
ಹಲ್ಲುಗಳ ಸ್ವಚ್ಛತೆಯ ಸಲುವಾಗಿ ಮೊದಲೆಲ್ಲ ಕಲ್ಲಿದ್ದಲು, ಸೆಗಣಿಯ ಬೂದಿ, ಉಪ್ಪು ಹೀಗೆ ನಾನಾ ವಿಧವಾಗಿ ಉಪಯೋಗಿಸುತ್ತಿದ್ದರು. ಕಾಲ ಬದಲಾದಂತೆ ಈಗ ನಾವು ದಿನಾಲು ಹಲ್ಲುಗಳ ಸ್ವಚ್ಛತೆಯ ಸಲುವಾಗಿ ಅನೇಕ ಟೂಥ್ ಪೇಸ್ಟ್ ಗಳ ಉಪಯೋಗವನ್ನು ಮಾಡುತ್ತಿದ್ದೇವೆ.
ಇವುಗಳ ಉಪಯೋಗ ಮಾಡುವಾಗ ಪೇಸ್ಟ್ ಟ್ಯೂಬಿನ ಕೆಳಗಡೆಯ ಭಾಗದಲ್ಲಿ ಕೆಂಪು, ಹಸಿರು, ಕಪ್ಪು ಹಾಗೂ ನೀಲಿ ಬಣ್ಣದ ಪಟ್ಟಿಗಳು ಇದ್ದದ್ದನ್ನು ಗಮನಿಸಿರಬಹದು. ಅನೇಕ ಜನರಿಗೆ ಇದನ್ನು ನೋಡಿದಾಗ ಒಂದು ಪ್ರಶ್ನೆಯೂ ಹುಟ್ಟಿರಬೇಕು, ಯಾಕೆ ರೀತಿಯ ಬಣ್ಣದ ಪಟ್ಟಿಗಳನ್ನು ಬಳಿದಿರುತ್ತಾರೆ ಎಂದು.
ವಾಚಕರೇ, ಇದೇ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವನ್ನು ಹುಡುಕಿ ತಂದಿದ್ದೇವೆ. ನೋಡಿ ಏನಂತ….
ಈ ಪಟ್ಟಿಗಳ ಬಗ್ಗೆ ಇರುವ ತಪ್ಪು ಸಂದೇಶ ಅಥವಾ ಗ್ರಹಿಕೆ:-
ಪೇಸ್ಟ್ ಟ್ಯೂಬ್ ನ ಕೆಳಗೆ ಇರುವ ಬಣ್ಣದ ಪಟ್ಟಿಗಳ ಸಂದರ್ಭವಾಗಿ ತಪ್ಪು ತಿಳುವಳಿಕೆಯೊಂದು ಯಾವತ್ತು ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಏನೆಂದರೆ, ಹಸಿರು ಪಟ್ಟಿ ನೈಸರ್ಗಿಕ, ನೀಲಿ ಪಟ್ಟಿಯ ಅರ್ಥ ಪೇಸ್ಟ್ ಔಷಧಿಯುಕ್ತವಾಗಿದೆ ಎಂದು, ಕೆಂಪು ಪಟ್ಟಿ ನೈಸರ್ಗಿಕ ಮತ್ತು ರಾಸಾಯನಿಕವಾಗಿದೆ ಎಂದು ಹೇಳುತ್ತದೆ, ಮತ್ತು ಕಪ್ಪು ಬಣ್ಣವು ಬರೀ ರಾಸಾಯನಿಕವಾಗಿದೆ ಎಂಬ ಸಂಕೇತವನ್ನು ನೀಡುತ್ತದೆ ಎಂದು.
ಆದರೆ ಈ ಮಾಹಿತಿಯು ಸಂಪೂರ್ಣವಾಗಿ ತಪ್ಪಾಗಿದೆ. ಈ ಬಣ್ಣಗಳ ಸಂಬಂಧ ಯಾವುದಕ್ಕೂ ಯಾವ ರೀತಿಯ ಸಂಬಂಧವೇ ಇಲ್ಲ. ಕಪ್ಪು ಬಣ್ಣದ ಪೇಸ್ಟ್ ರಾಸಾಯನಿಕ ಪದಾರ್ಥಗಳಿಂದ ತಯಾರಾಗಿರುತ್ತದೆ ಅದನ್ನು ಉಪಯೋಗಿಸಬೇಡಿ ಹಾಗೂ ಹಸಿರಾದ ಪೇಸ್ಟ್ ನೈಸರ್ಗಿಕವಾಗಿರುತ್ತದೆ ಅದನ್ನೇ ಉಪಯೋಗಿಸಬೇಕು ಎನ್ನುವಂಥ ಮೆಸೇಜ್ ನಿಮ್ಮ ಕಡೆಗೆ ಬಂದಿರಲೂ ಬಹುದು. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ.
ಈ ಬಣ್ಣದ ಪಟ್ಟಿಗಳ ನಿಜವಾದ ಅರ್ಥ…
ಇದರ ಮೇಲಿರುವ ಬಣ್ಣದ ಪಟ್ಟಿಗಳು ಮಾನವರಿಗೆ ಯಾವುದೇ ರೀತಿಯ ಉಪಯೋಗವಿಲ್ಲ. ಅಥವಾ ಅದು ನಮಗೆ ಮತ್ತು ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಟ್ಯೂಬ್ ಗಳ ಉತ್ಪಾದನೆಗೆ ಸಂಬಂಧಿಸಿದ ಪ್ರಕ್ರಿಯೆಯ ಒಂದು ಭಾಗವಾಗಿದೆ. ಈ ಬಣ್ಣದ ಪಟ್ಟಿಗಳಿಗೆ ಆಯ್ ಮಾರ್ಕ್ ಎಂದು ಸಂಬೋಧಿಸುತ್ತಾರೆ. ಇದಕ್ಕೂ ಮತ್ತು ರಸಾಯನಕ್ಕೂ ಯಾವ ಸಂಬಂಧವಿಲ್ಲ. ಟ್ಯೂಬ್ ನ್ನು ಎಲ್ಲಿ ಕತ್ತರಿಸಬೇಕು? ಮತ್ತು ಎಲ್ಲಿ ಫೋಲ್ಡ್ ಮಾಡಬೇಕು ಈ ಬಗ್ಗೆ ಸೂಚನೆಯನ್ನು ನೀಡುವ ಕೆಲಸ ಈ ಬಣ್ಣದ ಪಟ್ಟಿಗಳು ಅಂದರೆ ಆಯ್ ಮಾರ್ಕ್ ಮಾಡುತ್ತವೆ. ಕೊಲ್ಗೆಟ್ ಕಂಪನಿಯ ವೆಬ್ ಸೈಟ್ ನಲ್ಲೂ ಈ ರೀತಿಯ ಮಾಹಿತಿ ಸುಳ್ಳಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಬಣ್ಣದ ಮೇಲಿಂದ ಟೂಥ್ ಪೇಸ್ಟ್ ಆರೋಗ್ಯಕ್ಕಾಗಿ ಚೆನ್ನಾಗಿದೆ ಎಂದು ನಿರ್ಧರಿಸಬೇಡಿ. ಒಂದು ವೇಳೆ ಇದರ ಬಗ್ಗೆ ತಿಳಿದುಕೊಳ್ಳಬೇಕಾದರೆ ನೀವು ನಿಮ್ಮ ಡೆಂಟಿಸ್ಟ್ ರ ಸಲಹೆಯನ್ನು ಪಡೆಯಬಹುದಾಗಿದೆ.