ಹೊಟ್ಟೆ ನೋವೆಂದು ಆಸ್ಪತ್ರೆ ತಲುಪಿದ ಯುವಕ; ಎಕ್ಸ್ ರೇ ತೆಗೆದ ಡಾಕ್ಟರ್ ಫುಲ್ ಶಾಕ್!

ಸೋಶಿಯಲ್ ಮೀಡಿಯಾಗಳಲ್ಲಿ ಹೀರೋ ಆಗಿ ಮಿನುಗಬೇಕೆಂಬ ಹಂಬಲದಿಂದಾಗಿ ಸದ್ಯದ ತರುಣ ವರ್ಗವು ಏನು ಬೇಕಾದರೂ ಮಾಡಲು ರೆಡಿಯಾಗಿರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಫ್ರ್ಯಾಂಕ್ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಕಾರಣ ಈ ವಿಡಿಯೋಗಳು ನೋಡುಗರಿಗೆ ತುಂಬಾ ಮೆಚ್ಚುಗೆಯಾಗುತ್ತವೆ.

ಈ ಫ್ರ್ಯಾಂಕ್ ವಿಡಿಯೋ ಮಾಡುವ ಹಂಬಲದಿಂದಾಗಿ ಈಜಿಪ್ಟ್ ನಲ್ಲಿ ಯುವಕನೊಬ್ಬನಿಗೆ ದೊಡ್ಡ ಬೆಲೆ ತೆತ್ತಬೇಕಾಗಿದೆ. ಈತ ತನ್ನ ಮಿತ್ರನಿಗೆ ಫ್ರ್ಯಾಂಕ್ ಮಾಡುವ ಸಲುವಾಗಿ ಮೊಬೈಲನ್ನೇ ನುಂಗಿ ಬಿಟ್ಟಿದ್ದಾನೆ. ಇದು ಮನೆಯವರಿಗೆ ಗೊತ್ತಾದಾಗ ಡಾಕ್ಟರ್ ಕಡೆಗೆ ತೆಗೆದುಕೊಂಡು ಹೋಗಿದ್ದಾರೆ. ಮೊದಲು ಮನೆಯವರು ಇದನ್ನು ನೈಸರ್ಗಿಕವಾಗಿಯೇ ಹೊರಗೆ ತೆಗೆಯಬೇಕೆಂದು ತುಂಬಾ ಪ್ರಯತ್ನ ಮಾಡಿದ್ದಾರೆ. ಆದರೆ ಅದರಲ್ಲಿ ಯಶಸ್ವಿಯಾಗದ ಕಾರಣ ಕೊನೆಗೆ ಏಳು ತಿಂಗಳುಗಳ ನಂತರ ಆಪರೇಷನ್ ಮಾಡಬೇಕಾಗಿ ಬಂತು. ಸದ್ಯ ಆಪರೇಷನ್ ಯಶಸ್ವಿಯಾಗಿ ಮೊಬೈಲನ್ನು ಹೊರಗೆ ತೆಗೆದಿದ್ದಾರೆ.

ಮೊಬೈಲ್ ನಂಗಿದ್ದು ತಿಳಿದಮೇಲೆ ಮನೆಯವರು ಅನೇಕ ರೀತಿಯ ಮನೆಮದ್ದುಗಳ ಉಪಯೋಗವನ್ನು ಮಾಡಿದ್ದಾರೆ. ಆದರೆ ಅದರಿಂದ ಯಾವ ಲಾಭವೂ ಆಗಿಲ್ಲ ಮತ್ತು ಮೊಬೈಲ್ ಸಹಿತ ಹೊಟ್ಟೆಯಲ್ಲಿಯೇ ಉಳಿದುಬಿಟ್ಟಿದೆ. ಈ ಪ್ರಯತ್ನವು ಏಳು ತಿಂಗಳುಗಳವರೆಗೆ ಸತತವಾಗಿ ನಡೆದಿತ್ತು. ಏಳು ತಿಂಗಳ ನಂತರ ಯಾವಾಗ ಹೊಟ್ಟೆ ನೋವು ಪ್ರಾರಂಭವಾಯಿತು ಆಗ ಡಾಕ್ಟರುಗಳ ಕಡೆಗೆ ಹೋಗಿ ಶಸ್ತ್ರಕ್ರಿಯೆ ಮುಖಾಂತರ ಈ ಸಮಸ್ಯೆಗೆ ಸಮಾಧಾನ ಹುಡುಕಲಾಯಿತು. ಈ ಘಟನೆ ಉತ್ತರ ಕೈರೋದ ಬೇಹಾನಾ ಪ್ರಾಂತದಲ್ಲಿ ಘಟಿಸಿದೆ.

ಆಸ್ಪತ್ರೆಯಲ್ಲಿ ಡಾಕ್ಟರ್ ಮಹಮ್ಮದ್ ಅಲ್ ಜಹರ್ ಇವರು ಈ ಯುವಕನ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದರು. ಪರೀಕ್ಷೆಯಲ್ಲಿ ಗೊತ್ತಾಯ್ತು ಯುವಕನ ಹೊಟ್ಟೆಯಲ್ಲಿ ಮೊಬೈಲ್ ಇದ್ದದ್ದು. ಮತ್ತು ಈ ಮೊಬೈಲ್ ನೈಸರ್ಗಿಕವಾಗಿ ಹೊರಗೆ ಬರುವ ಯಾವ ಸಾಧ್ಯತೆಗಳು ಇರಲಿಲ್ಲವಂತೆ. ಆದ್ದರಿಂದಲೇ ಡಾಕ್ಟರ್ ಸರ್ಜರಿ ಮಾಡುವ ನಿರ್ಣಯವನ್ನು ತೆಗೆದುಕೊಂಡರು.

ಪ್ರಸ್ತುತ ಯುವಕ ತನ್ನ ಮೊಬೈಲ್ ರಿಂಗ್ಟೋನ್ ಶಬ್ದವನ್ನು ಮಿತ್ರನ ಹೊಟ್ಟೆಯೊಳಗಿನಿಂದ ಕೇಳಬೇಕೆಂಬ ಉದ್ದೇಶದಿಂದ ಫ್ರ್ಯಾಂಕ್ ಮಾಡಲು ಹೋಗಿ ಈ ಘಟನೆ ನಡೆದಿದೆ.

ಈ ತರುಣನ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಕಾರಣ ತರುಣನು ತನ್ನ ಗುರುತನ್ನು ಹೇಳಕೂಡದು ಎಂದು ಮೊದಲೇ ವಿನಂತಿಸಿದ್ದನು.