ತನ್ನ ಕಾಲಿನ ಫೋಟೋಗಳನ್ನು ಮಾರಿ ತಿಂಗಳಿಗೆ 8 ಲಕ್ಷ ಸಂಪಾದಿಸುತ್ತಿರುವ 22 ವರ್ಷದ ಹುಡುಗಿ! ಹೇಗೆ ಅಂತೀರಾ? ಇಲ್ಲಿ ನೋಡಿ…

ಅಮೆರಿಕದ 22 ವರ್ಷ ವಯಸ್ಸಿನ ಮಾಡೆಲ್ ಡಿಜಾಯರ್ ಗೆಟೋ ಒಂದು ಕಾಲದಲ್ಲಿ ಆಸ್ತಿ ವ್ಯವಹಾರಗಳನ್ನು ಮಾಡುತ್ತಾ ಒಂದು ಸಾಮಾನ್ಯ ಜೀವನ ಶೈಲಿಯನ್ನು ನಡೆಸುತ್ತಿದ್ದರು. ಆದರೆ ಆಕೆ ಪರ್ಯಾಯ ವ್ಯವಹಾರವಾಗಿ (ಸೈಡ್ ಬ್ಯುಸಿನೆಸ್) ಮಾಡೆಲಿಂಗ್ ನಲ್ಲಿ ಕೂಡಾ ಒಂದು ಪ್ರಯತ್ನವನ್ನು ಮಾಡಲು ಹೋಗಿದ್ದಾರೆ. ಹಾಗೆ ಹೋದ ಆಕೆಗೆ ನಿಜಕ್ಕೂ ಅಲ್ಲಿ ಕಾದಿತ್ತು ಆಶ್ಚರ್ಯ. ಆ ಆಶ್ಚರ್ಯ ಆದರೂ ಏನೂ ಎನ್ನುವುದಾದರೆ ಅನೇಕರು ಆಕೆ ಕಾಲುಗಳಿಗೆ ಅಭಿಮಾನಿಗಳಾಗಿದ್ದಾರೆ ಎಂಬುದು. ಆಕೆಯ ಪಾದಗಳ ಬಗ್ಗೆ ಎಂತಹ ಹು ಚ್ಚು ಉಂಟಾಗಿದೆ ಎಂದರೆ ಆಕೆಯ ಪಾದಗಳ ಚಿತ್ರಕ್ಕಾಗಿ ಸಾವಿರ, ಲಕ್ಷಗಳ ಮೊತ್ತದಲ್ಲಿ ಹಣ ನೀಡಲು ಕೂಡಾ ಸಿದ್ಧವಿದ್ದಾರೆ.

ಡಿಜಾಯಿರ್ ಗೆಟೋ ಇನ್ಸ್ಟಾಗ್ರಾಂ ನಲ್ಲೂ ಕೂಡಾ ಸಾಕಷ್ಟು ಜನಪ್ರಿಯ ಆಗಿದ್ದು, ಒಂದು ಮಿಲಿಯನ್ ದಾಟಿದ ಹಿಂಬಾಲಕರನ್ನು ಹೊಂದಿದ್ದಾರೆ. ಪ್ರಸ್ತುತ ಅವರು ಓನ್ಲಿ ಫ್ಯಾನ್ಸ್ ನಲ್ಲಿ ಸಕ್ರಿಯವಾಗಿದ್ದು ಈ ಖಾತೆಯ ಮೂಲಕ ತಿಂಗಳಿಗೆ ಆಕೆ ಸುಮಾರು ಎಂಟು ಲಕ್ಷ ರೂ ಗಳಿಸುತ್ತಾರೆ. ಇಲ್ಲಿ ಆಕೆ ಮಾಡುವುದು ಕೇವಲ ತನ್ನ ಪಾದಗಳ ಫೋಟೋಗಳನ್ನು ಕ್ಲಿಕ್ ಮಾಡಿ ಹಾಕುವುದು‌. ಗೆಟೋ ಹೇಳುವ ಪ್ರಕಾರ ಒಮ್ಮೆ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಕಾಲುಗಳ ಹತ್ತು ಫೋಟೋ ನೀಡಿ 300 ಡಾಲರ್ ಗಳನ್ನು ನೀಡುವುದಾಗಿ ಹೇಳಿದ್ದರಂತೆ. ಮೊದಲು ನಂಬಲು ಸಾಧ್ಯವಾಗಲಾರದು ಆದರೆ ಅನಂತರ ಜನರಿಗೆ ಕಾಲುಗಳ ಮೇಲೂ ಕ್ರೇ ಜ್ ಇದೆಯೆಂದು ಅರ್ಥವಾಯಿತು ಎಂದಿದ್ದಾರೆ.

ಆಕೆ ಮಾತನಾಡುತ್ತಾ ಕೆಲವರು ನನ್ನ ಕಾಲಿನ ಪೆಡಿಕ್ಯೂರ್ ಮಾಡುವ ಬಗ್ಗೆ ನೋಡಲು ಬಯಸಿದರೆ, ಇನ್ನೂ ಕೆಲವರು ಕಾಲಿಗೆ ಸಾಕ್ಸ್ ಗಳನ್ನು ಖರೀದಿ ಮಾಡುತ್ತಾರೆ. ಮತ್ತೆ ಕೆಲವರು ಪದಗಳನ್ನು ಮಾತ್ರ ನೋಡಲು ಬಯಸುತ್ತಾರೆ‌. ಇಲ್ಲಿ ಜನರಿಗೆ ನ್ಯೂ ಡಿ ಟಿ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಬದಲಿಗೆ ಅವರು ಕೇವಲ ನನ್ನ ಕಾಲುಗಳನ್ನು ನೋಡಲು ಬಯಸುತ್ತಾರೆ ಎಂದಿದ್ದಾರೆ. ಈಕೆ ತನ್ನ ಕಾಲಿನ ಫೋಟೋಗಳನ್ನು ಅಂದರೆ ಒಂದು ಫೋಟೋ ವನ್ನು 25 ಡಾಲರ್‌ ಗಳಿಗೆ ಮಾರಾಟ ಮಾಡುವಳು. ಈಕೆ ಬಹುತೇಕ ತನ್ನ ಕಾಲುಗಳ ಮಸಾಜ್ ಮಾಡುವ ವೀಡಿಯೋಗಳನ್ನು ಮಾಡುತ್ತಾರೆ.

ಅಲ್ಲದೇ ಪೆಡಿಕ್ಯೂರ್ ಮಾಡುವ, ಹೀಲ್ಸ್ ತೊಡುವ, ತೆಗೆಯುವ ವೀಡಿಯೋಗಳನ್ನು ಕೂಡಾ ಮಾಡಿ ಶೇರ್ ಮಾಡಿಕೊಳ್ಳುವುದುಂಟು. ಆಕೆಯ ಅಭಿಮಾನಿಗಳು ಈ ವಿಡಿಯೋಗಳನ್ನು ಭರ್ಜರಿ ಯಾಗಿ ನೋಡುವರು.
ಫುಟ್ ಕ್ವೀನ್ ಆಗುವುದು ಹೇಗೆ ಎನ್ನುವ ಟಿಪ್ಸ್ ಕೊಡುವ ಈಕೆ ಪ್ರತಿ ಬಾರಿ ತನ್ನ ಅಭಿಮಾನಿಗಳನ್ನು ಅವರು ಎಂತಹ ಫೋಟೋ ನೋಡಲು ಬಯಸುವರು ಎಂದು ಕೇಳುವರು‌. ಏಕೆಂದರೆ ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿಯಲ್ಲಿ ಇರುವುದರಿಂದ ಎಲ್ಲರ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ತಿಳಿಯಲು ಆಕೆ ಪ್ರಯತ್ನವನ್ನು ಮಾಡುತ್ತಾರೆ.

ಪಾದಗಳನ್ನು ಆಕರ್ಷಕವಾಗಿ ಮಾಡಲು ಫುಟ್ ಜ್ಯುವೆಲ್ಲರಿ, ಸಾಕ್ಸ್ ಧರಿಸುವ ಟಿಪ್ಸ್ ಗಳನ್ನು ನೀಡುತ್ತಾರೆ. ಅಲ್ಲದೇ ಫೋಟೋ ತೆಗೆಯುವ ವೇಳೆ ಒಳ್ಳೆಯ ಕ್ಯಾಮೆರಾ ಮತ್ತು ಲೈಟಿಂಗ್ಸ್ ಇರಬೇಕು ಎಂದಿದ್ದಾರೆ‌. ಡಿಜಾಯರ್ ಗೆ ಇಂದಿಗೂ ಕೂಡಾ ಜನರಿಗೆ ಏಕೆ ತನ್ನ ಪಾದಗಳನ್ನು ಕಂಡರೆ ಅಷ್ಟೊಂದು ಇಷ್ಟ ಎನ್ನುವುದು ತಿಳಿದಿಲ್ಲವಂತೆ. ಆದರೆ ಹಾಗೆಂದು ಜನರ ಆಸಕ್ತಿ ಬಗ್ಗೆ ಅವರು ವಿಮರ್ಶೆ ಮಾಡುವುದಿಲ್ಲವಂತೆ. ಇನ್ನು ಈಕೆಯ ಸಂಗಾತಿಗೆ 42 ವರ್ಷ ವಯಸ್ಸಾಗಿದ್ದು ಅವರೇ ಡಿಜಾಯರ್ ಳ ಫೋಟೊಗಳನ್ನು ಕ್ಲಿಕ್ಕಿಸುತ್ತಾರೆ. ಗಳಿಸಿದ ಹಣದಿಂದ ಅವರು ದುಬಾರಿ ಪ್ರವಾಸ ಮಾಡುವರಂತೆ.