ದಿನಾಲು ಅರಿಶಿಣ ಮಿಶ್ರಿತ ನೀರು ಕುಡಿಯಿರಿ, ‘ಈ’ ಆಶ್ಚರ್ಯಕಾರಕ ಲಾಭ ಪಡೆಯಿರಿ!

ಆಯುರ್ವೇದದಲ್ಲಿ ಅರಿಶಿನಕ್ಕೆ ತುಂಬಾ ಮಹತ್ವವಿದೆ. ಅರಿಶಿಣವಿದು ಜಂತುನಾಶಕವಾಗಿದೆ. ಆಹಾರದಲ್ಲಿ ಇದನ್ನು ಉಪಯೋಗಿಸುವುದರಿಂದ ಆಹಾರಕ್ಕೆ ಒಂದು ರುಚಿ ಮತ್ತು ಬಣ್ಣ ಬರುತ್ತದೆ. ಅರಿಶಿಣವನ್ನು ಸೌಂದರ್ಯ ಪ್ರಸಾಧನೆಯಲ್ಲಿ ಹಾಗೂ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಲ್ಲಿ ಉಪಯೋಗಿಸುವರು. ದೇಹವನ್ನು ನಿರೋಗಿಯಾಗಿಡಲು ಅರಿಶಿಣವು ತುಂಬಾ ಗುಣಕಾರಿಯಾಗಿದೆ. ಇದು ಮನುಷ್ಯನಿಗೆ ಅನೇಕ ಸಂಸರ್ಗಗಳಿಂದ ರಕ್ಷಿಸುತ್ತದೆ.

ಅರಿಶಿಣ ಬರೀ ಮಸಾಲೆ ಪದಾರ್ಥವಾಗಿರದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅರಿಶಿಣ ದೇಹಕ್ಕೆ ಔಷಧೀಯ ಸ್ವರೂಪದಲ್ಲಿ ಅನೇಕ ಪ್ರಕಾರಗಳಲ್ಲಿ ಸಹಾಯವಾಗುತ್ತದೆ, ಹಾಗೆಯೇ ಅರಿಶಿನ ಮಿಶ್ರಿತ ನೀರು ಸಹ ಮನುಷ್ಯನಿಗೆ ಅನೇಕ ಲಾಭವನ್ನು ತಂದು ಕೊಡುತ್ತದೆ. ಇಂತಹ ಅರಿಶಿಣ ಮಿಶ್ರಿತ ನೀರಿನಿಂದ ಆಗುವ ಅನೇಕ ಲಾಭಗಳ ಬಗ್ಗೆ ತಿಳಿಯುವ.

ಅರಿಶಿಣ ಮಿಶ್ರಿತ ನೀರನ್ನು ಸೇವಿಸುವುದರಿಂದ ಕರ್ಕರೋಗ ದಂತಹ ಗಂಭೀರವಾದ ರೋಗವನ್ನು ತಡೆಗಟ್ಟಬಹುದು.

ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಚಿಟಿಕೆ ಅರಿಶಿನದ ಜೊತೆಗೆ ಜೇನುತುಪ್ಪ ಮತ್ತು ನಿಂಬೆರಸವನ್ನು ಸೇರಿಸಿ ಕುಡಿಯಬೇಕು. ಈ ಮೇಲೆ ಹೇಳಿದ ಮಿಶ್ರಣದ ಪೇಯವು ಶರೀರದಲ್ಲಿಯೇ ವಿಷಯುಕ್ತ ಪದಾರ್ಥವನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಇದು ಉತ್ತಮವಾದ ಪೇಯವಾಗಿದೆ.

ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್ ಹೆಸರಿನ ತತ್ವ ಇರುವುದರಿಂದ ದೇಹದಲ್ಲಿಯ ಜೀವಕೋಶಗಳನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಶರೀರದ ಮೇಲೆ ಬಾವು ಹಾಗೂ ಕೀಲುನೋವಿನಂತ ಸಮಸ್ಯೆ ಇದ್ದರೆ ಅರಿಶಿನ ಮಿಶ್ರಿತ ನೀರು ಇದಕ್ಕೆ ತುಂಬಾ ಫಲಕಾರಿಯಾಗುವುದು. ಯಾಕೆಂದರೆ ಇದರಲ್ಲಿ ಕರಿಕ್ಯೂಮಿನ್ ಹೆಸರಿನ ತತ್ವವು ಔಷಧದ ಹಾಗೆ ಕೆಲಸ ಮಾಡುತ್ತದೆ.

ಅರಿಶಿಣ ಮಿಶ್ರಿತ ನೀರಿನ ಸೇವನೆಯಿಂದ ದೇಹದಲ್ಲಿ ರಕ್ತ ಪರಿಚಲನೆಯ ಕ್ರಿಯೆ ಸುಲಭವಾಗಿ ನಡೆಯುವುದು. ಇದರಿಂದ ರಕ್ತ ಶುದ್ಧವಾಗುವುದು.

ವ್ಯಕ್ತಿ ಪಿತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅರಿಶಿಣ ಮಿಶ್ರಿತ ನೀರು ಕುಡಿಯುವುದರಿಂದ ಸಮಸ್ಯೆಯು ದೂರವಾಗುವುದು.

ನೀವು ಯಾವತ್ತು ತರುಣರಂತೆ ಕಾಣಿಸಿಕೊಳ್ಳಬೇಕಾದರೆ ಈ ಪೇಯವನ್ನು ದಿನಾಲು ಸೇವಿಸಬೇಕು. ಇದರಲ್ಲಿರುವ ಘಟಕಗಳು ಫ್ರೀ ರೆಡಿಕಲ್ಸ್ ಗಳೊಂದಿಗೆ ಹೋರಾಡಲು ಸಶಕ್ತವಾಗಿರುತ್ತವೆ. ಆದ್ದರಿಂದ ದಿನಂಪ್ರತಿ ಪೇಯವನ್ನು ಸೇವಿಸಬೇಕು.

ಬಾಯೋ ಕೆಮಿಸ್ಟ್ರಿ ಮತ್ತು ಬಯೋಫಿಜಿಕಲ್ ರಿಸರ್ಚಿನ ಅಭ್ಯಾಸದ ಪ್ರಕಾರ ಅರಿಶಿಣದ ನಿಯಮಿತ ಸೇವನೆಯನ್ನು ಮಾಡಲಾಗಿ ದೇಹದಲ್ಲಿಯ ಗ್ಲುಕೋಜ್ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಟೈಪ್ 2 ಮಧುಮೇಹವು ದೂರವಾಗುತ್ತದೆ.

ನೀವು ನಿಮ್ಮ ಮನಸ್ಸನ್ನು ದಿನಂಪ್ರತಿ ಉಲ್ಲಸಿತವಾಗಿ ಮತ್ತು ತೇಜಸ್ವಿಯುತವಾಗಿ ಇಡಲು ಪ್ರಯತ್ನಿಸುತ್ತಿದ್ದರೆ ಪ್ರತಿನಿತ್ಯ ಮುಂಜಾನೆ ಅರಿಶಿಣ ಮಿಶ್ರಿತ ನೀರನ್ನು ಕುಡಿಯಿರಿ.