ಹರಿಯುವ ನೀರೊಳಗೆ ಓಡಿದ ಗೊರಿಲ್ಲ, ತಣ್ಣಗಿದೆಯೆಂದು ಮತ್ತೆ ತೀರಕ್ಕೆ ವಾಪಸಾಯ್ತು: ಗೊರಿಲ್ಲಾ ಆಟ ನೋಡಿ ನಕ್ಕರು ನೆಟ್ಟಿಗರು!

ಪ್ರಾಣಿಗಳು ಕೂಡಾ ಕೆಲವೊಮ್ಮೆ ಮನುಷ್ಯರ ರೀತಿ ವರ್ತಿಸುವುದು ಉಂಟು. ಅವುಗಳನ್ನು ನೋಡಿದಾಗ ನಮಗೆ ವಿಚಿತ್ರ, ವಿಸ್ಮಯ ಎನ್ನುವುದಕ್ಕಿಂತ ಅದೊಂದು ಮನೋರಂಜನೆ ಎನಿಸುವಂತೆ ಕಾಣಿಸುತ್ತದೆ. ಅಲ್ಲದೇ ಮತ್ತೆ ಮತ್ತೆ ಅದನ್ನು ನೋಡಬೇಕು ಎಂದು ಬಯಸುತ್ತದೆ ನಮ್ಮ ಮನಸ್ಸು. ಅದರಲ್ಲೂ ಗೊರಿಲ್ಲಾ ವರ್ತನೆ ನೋಡಿದಾಗ ನಮಗೆ ಅರೆರೆ ಇದೇನಿದು? ಇದು ಕೂಡಾ ಇಷ್ಟು ತುಂಟಾಟ ಆಡುವುದಾ? ಏನು ನಯ ನಾಜೂಕು ಎಂದು ಕೂಡಾ ಅಂದು ಕೊಳ್ಳುವುದು ಕೂಡಾ ಉಂಟು. ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಆಗಾಗ ಇಂತಹ ವೀಡಿಯೋಗಳು ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ ಮೆಚ್ಚುಗೆ ಕೂಡಾ ಪಡೆಯುತ್ತವೆ.

ಈಗ ಕೂಡಾ ಸೋಶಿಯಲ್ ಮೀಡಿಯಾದಲ್ಲೊಂದು ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಕೂಡಾ ಒಂದು ಗೊರಿಲ್ಲಾವನ್ನು ನಾವು ನೋಡಬಹುದಾಗಿದೆ. ಗೊರಿಲ್ಲಾ ಮಾಡುವ ಕೆಲಸವನ್ನು ನೋಡಿದಾಗ ಅದು ಒಂದು ತುಂಟಾಟ ಎನಿಸದೇ ಇರಲಾರದು. ಆದರೆ ಅದು ಬಹುಶಃ ಆ ಗೊರಿಲ್ಲಾದ ಸಾಮಾನ್ಯ ವರ್ತನೆ ಇದ್ದರೂ ಬರಬಹುದೇನೋ ಆದರೆ ನೋಡಲು ಮಾತ್ರ ಬಹಳ ಸುಂದರವಾಗಿದೆ ಕಾಣುತ್ತಿದೆ ಈ ವೀಡಿಯೋ. ಐಎಎಸ್ ಅಧಿಕಾರಿ ಸುಶಾಂತ್ ನಂದ ಅವರು ಒಂದು ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು ಈಗಾಗಲೇ ಅದು 24 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಈ ವೀಡಿಯೋದಲ್ಲಿ ನೋಡಿದಾಗ ಒಂದು ನದಿ ಹರಿಯುತ್ತಿದ್ದು,ಅದರ ಒಂದು ತೀರದಲ್ಲಿ ಒಂದು ಗೊರಿಲ್ಲಾ ನಿಂತಿರುತ್ತದೆ‌. ಸಾಗರ ತೀರದಲ್ಲಿ ಅಥವಾ ನದಿ ತೀರದಲ್ಲಿ ಸಾಮಾನ್ಯವಾಗಿದೆ ಅನೇಕರು ನೀರೊಳಗೆ ಕಾಲಿಟ್ಟು ನೀರು ತಣ್ಣಗಿದೆ ಎಂದು ಹಿಂದಕ್ಕೆ ಓಡಿ ಬರುವುದನ್ನು ನಾವು ನೋಡಿರುತ್ತೇವೆ. ಈ ವೀಡಿಯೋದಲ್ಲಿ ಕೂಡಾ ಗೊರಿಲ್ಲಾ ಮಾಡುವ ಆಟ ಅದೇ ರೀತಿ ಇರುವುದನ್ನು ನಾವು ಗಮನಿಸಬಹುದು. ಈ ವೀಡಿಯೋದಲ್ಲಿ ಗೊರಿಲ್ಲಾ ಕೂಡಾ ಅದೇ ರೀತಿ ಆಡುತ್ತಿರುವಂತೆ ನಮಗೆ ಕಾಣುತ್ತದೆ. ಅದು ಹರಿಯುತ್ತಿರುವ ನೀರನ್ನು ನೋಡಿ ಒಂದಷ್ಟು ದೂರ ನೀರಿನೊಳಕ್ಕೆ ಹೋಗಿ ಮತ್ತೆ ಹಿಂದಕ್ಕೆ ಓಡೋಡಿ ಬರುತ್ತದೆ.

ಗೊರಿಲ್ಲಾ ಹಾಗೆ ಓಡಿ ಬಂದುದನ್ನು ನೋಡಿದ ಸುಶಾಂತ್ ಅವರು ವೀಡಿಯೋ ಶೇರ್ ಮಾಡುತ್ತಾ ಓ ಇಟ್ಸ್ ಕೂಲ್ ಕೂಲ್ ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಗೊರಿಲ್ಲಾ ವರ್ತನೆ ನೋಡಿದಾಗ ನಮಗೂ ಬಹುಶಃ ಅದೇ ಇರಬೇಕು ಎನಿಸುತ್ತದೆ. ಇನ್ನು ಈ ನೀರು ನೋಡಿ ಓಡಿ ಬಂದ ಗೊರಿಲ್ಲಾದ ವೀಡಿಯೋಗೆ ಈಗಾಗಲೇ ಎರಡು ಸಾವಿರ ದಾಟಿದ ಲೈಕ್ಸ್ ಹಾಗೂ ನೂರಾರು ಬಾರಿ ರೀಟ್ವೀಟ್ ಆಗುತ್ತಿದ್ದು, ನೋಡಿದವರೆಲ್ಲಿ ಅನೇಕರು ತಮ್ಮ ಮೆಚ್ಚುಗೆಯನ್ನು ತಮ್ಮ ಪ್ರತಿಕ್ರಿಯೆಗಳ ಮೂಲಕ ನೀಡುತ್ತಾ ಸಾಗಿದ್ದಾರೆ.

ವಿಡಿಯೋ ನೋಡಿ

ಟ್ವಿಟರ್ ಬಳಕೆದಾರರೊಬ್ಬರು ಅವನು ನದಿಯನ್ನು ದಾಟಲು ಹೋಗಿದ್ದಾನೆ. ಆದರೆ ಮಾರ್ಗ ಮದ್ಯದಲ್ಲೇ ಲಾಕ್ ಡೌನ್ ಘೋಷಣೆಯಾದ ಕಾರಣ ವಾಪಸ್ ಓಡಿ ಬಂದಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಬಾರದು ಎಂದು ತಮಾಷೆ ಮಾಡಿದ್ದಾರೆ. ಗೊರಿಲ್ಲಾ ಬಹಳ ಚಾಲಾಕಿಯಾಗಿದೆ ಎಂದು ಕೆಲವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಟ್ಟಾರೆ ಗೊರಿಲ್ಲಾ ವೀಡಿಯೋ ಮಾತ್ರ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ.