Video: ದೇವರಿಗೆ ನಮಿಸುತ್ತಿರುವಾಗಲೇ ಮಾಜಿ ಕಾಂಗ್ರೆಸ್ MLA ಹಾರ್ಟ್ ಅಟ್ಯಾಕ್ ನಿಂದ ಸಾವು; ಘಟನೆ CCTV ಯಲ್ಲಿ ಸೆರೆ!
ಮನುಷ್ಯನ ಸಾವು ತುಂಬಾ ಅನಿರೀಕ್ಷಿತವಾಗಿದೆ. ಅದು ಯಾವಾಗ, ಹೇಗೆ, ಯಾವ ರೀತಿಯಲ್ಲಿ ಬಂದು ಅಪ್ಪಿಕೊಳ್ಳುತ್ತದೆ ಗೊತ್ತಾಗುವುದಿಲ್ಲ.
ಕೆಲವು ದಿವಸಗಳ ಹಿಂದಿನ ಒಂದು ವಿಡಿಯೋ ಈಗ ಚರ್ಚೆಯಲ್ಲಿದೆ. ಈ ವಿಡಿಯೋ ಮಧ್ಯಪ್ರದೇಶದ ಬೈತುಲ್ ನಲ್ಲಿಯದಿದೆ. ಇಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕರಾದ ಹಾಗೂ ಪ್ರಸಿದ್ಧ ಉದ್ಯೋಗಪತಿ ವಿನೋದ್ ಡಾಗಾ ಇವರು ಸಾವನ್ನಪ್ಪಿದ್ದರು. ಇವರ ಸಾವು ಸಂಭವಿಸಿದ ರೀತಿಯೇ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ದೇವರ ಪಾದಗಳಲ್ಲಿ ಬಾಗಿ ನಮಿಸುವಾಗಲೆ ಇವರ ಮೃತ್ಯು ಸಂಭವಿಸಿದೆ. ಈ ದೃಶ್ಯವು ದೇವಸ್ಥಾನದಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿನೋದ್ ಡಾಗಾ ಇವರು ದೇವರ ಪರಮ ಭಕ್ತರಾಗಿದ್ದರು. ದಿನಂಪ್ರತಿ ಜೈನಮಂದಿರದಲ್ಲಿ ದೇವರ ದರ್ಶನಕ್ಕಾಗಿ ಹೋಗುತ್ತಿದ್ದರು. ನವೆಂಬರ್ 12 ರಂದು ಪ್ರತಿ ದಿವಸದ ಹಾಗೆ ಅಂದು ಸಹಿತ ದೇವರಿಗೆ ನಮಿಸಲು ದೇವಸ್ಥಾನಕ್ಕೆ ಹೋಗಿದ್ದಾರೆ. ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿ ನಂತರ ಮೂರ್ತಿಯ ಸಮೀಪ ಹೋಗಿ ಬಾಗಿ ಕಾಲುಗಳಿಗೆ ವಂದಿಸುತ್ತಿರುವಾಗಲೇ ಅವರ ಹೃದಯ ಬಡಿತ ನಿಂತು ಹೋಗಿದೆ. ದೇವರ ಅಧೀನದಲ್ಲಿರುವಾಗಲೇ ಅವರಿಗೆ ಸಾವು ಬಂದಿರುವುದರಿಂದ ಎಲ್ಲ ಕಡೆ ಕಳವಳ ವ್ಯಕ್ತವಾಗುತ್ತಿದೆ. ವಿಶೇಷವೆಂದರೆ, ಈ ದೃಶ್ಯವು ಅಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿ ವೈರಲ್ ಆಗಿದೆ.
ವಿನೋದ್ ಡಾಗಾ ಇವರು ಕಾಂಗ್ರೆಸ್ಸಿನ ಮಾಜಿ ಶಾಸಕರಾಗಿದ್ದು ಪ್ರಸಿದ್ಧ ಉದ್ಯೋಗಪತಿಗಳು ಸಹಿತ ಆಗಿದ್ದರು. ಈ ಘಟನೆಯಾದ ನಂತರ ದೇವಸ್ಥಾನದಲ್ಲಿದ್ದ ಹುಡುಗಿಯೊಬ್ಬಳು ಅಲ್ಲಿಯ ಅರ್ಚಕರಿಗೆ ಸುದ್ದಿ ತಲುಪಿಸಿದ ನಂತರ ಬೇಗನೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿಯವರೆಗೆ ಅವರು ಅಸುನೀಗಿದ್ದರು.
ವಿಡಿಯೋ ನೋಡಿ
Ex Congress MLA Vinod daga dies of Cardiac Arrest while worshipping..incident caught on CCTV..
— Gagan Sharma (@gagansharma2586) November 16, 2020
May his soul rest in peace..@pankajbajpai22 @i_m_dollar @INCIndia @betul_talks @INCMP pic.twitter.com/fCFpfIRNQ2
ವಿನೋದ್ ಡಾಗಾ ಅವರು ನಿಜಕ್ಕೂ ಭಾಗ್ಯವಂತರಾಗಿದ್ದಾರೆ. ಯಾಕೆಂದರೆ ದೇವರ ಪಾದಕಮಲಗಳಲ್ಲಿ ಅವರಿಗೆ ಸಾವು ಬಂದಿರುವುದರಿಂದ ನಿಜಕ್ಕೂ ಅವರು ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಅಲ್ಲಿಯ ಅರ್ಚಕರು ಈ ಬಗ್ಗೆ ಹೇಳಿದ್ದಾರೆ.