‘ಪುಟಾಣಿ’ ತಿಂದು ‘ಈ’ ದೊಡ್ಡ ರೋಗಗಳ ಮೇಲೆ ನಿಯಂತ್ರಣ ಪಡೆಯಬಹುದು; ತಿಳಿದುಕೊಳ್ಳಿ ಅದ್ಭುತ ಪ್ರಯೋಜನಗಳು
ಭಾರತೀಯ ಆಯುರ್ವೇದದಲ್ಲಿ ವನಸ್ಪತಿಗೆ ಮಹತ್ವದ ಸ್ಥಾನವಿದೆ. ಅಮೂಲ್ಯವಾದ ವನಸ್ಪತಿಗಳಿಂದ ಅನೇಕ ಮತ್ತು ದೊಡ್ಡ ದೊಡ್ಡ ರೋಗಗಳನ್ನು ದೂರ ಮಾಡಲು ಸಾಧ್ಯವಿದೆ. ಈ ವನಸ್ಪತಿಗಳ ಔಷಧಿಯನ್ನು ಯೋಗ್ಯ ಪ್ರಮಾಣದಲ್ಲಿ ಸರಿಯಾಗಿ ಸೇವನೆ ಆದರೆ ಶರೀರದಲ್ಲಿ ಅನೇಕ ರೀತಿಯ ಚಮತ್ಕಾರಿಕ ಬದಲಾವಣೆಗಳು ಕಂಡುಬರುತ್ತವೆ.
ಇನ್ನು ಭಾರತೀಯರು ಉಪಯೋಗಿಸುವಂತ ಅನೇಕ ರೀತಿಯ ಮಸಾಲೆ ಪದಾರ್ಥಗಳಲ್ಲಿಯೂ ಸಹಿತ ಈ ರೀತಿಯ ಶಕ್ತಿಗಳು ಕಂಡುಬರುತ್ತವೆ.
ಇಂದಿನ ಈ ಲೇಖನದಲ್ಲಿ ಪುಟಾಣಿಯ ಸೇವನೆಯಿಂದ ದೇಹದಲ್ಲಾಗುವ ಮಹತ್ವದ ಧನಾತ್ಮಕ ಬದಲಾವಣೆಗಳ ಬಗ್ಗೆ ಹೇಳಲಿದ್ದೇವೆ. ಹಾಗೂ ಇದರಿಂದ ಯಾವ ಯಾವ ರೋಗಗಳು ದೂರವಾಗುವವು ಮತ್ತು ಅವುಗಳ ಮೇಲೆ ನಿಯಂತ್ರಣ ಪಡೆಯಲು ಹೇಗೆ ಸಾಧ್ಯವಿದೆ ಎಂಬುದರ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ನೀಡಲಿದ್ದೇವೆ.
ಪುಟಾಣಿಯನ್ನು ಹೆಚ್ಚಾಗಿ ನಾವು ಸ್ನಾಕ್ಸ್ ರೀತಿಯಲ್ಲಿ ಸೇವಿಸುತ್ತೇವೆ. ಇಲ್ಲ ಯಾವತ್ತಾದರೂ ಟೈಮ್ ಪಾಸ್ ಗಾಗಿ ತಿನ್ನುತ್ತೇವೆ. ಆದರೆ ಇದು ತಿನ್ನುವುದರಿಂದ ವ್ಯಕ್ತಿಯು ಆರೋಗ್ಯವಂತನಾಗಿರಲು ಮತ್ತು ಒತ್ತಡದಿಂದ ಮುಕ್ತವಾಗಿರಲು ಸಹಾಯಮಾಡುತ್ತದೆ. ಜೊತೆಗೆ ವ್ಯಕ್ತಿ ದಿನಪೂರ್ತಿ ಉತ್ಸಾಹದಿಂದ ಉಲ್ಲಸಿತನಾಗಿರುತ್ತಾನೆ.
ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರವು ತುಂಬಾ ಶಕ್ತಿವರ್ಧಕವಾಗಿರುತ್ತಿತ್ತು. ಆಹಾರವು ಮುಖ್ಯವಾಗಿ ನೈಸರ್ಗಿಕವಾಗಿ ಬೆಳೆದು ಬಂದದ್ದಾಗಿರುತ್ತಿತ್ತು. ಅದರಲ್ಲಿ ದೇಹಕ್ಕೆ ಹಾನಿ ಮಾಡುವಂತಹ ಯಾವುದೇ ರೀತಿಯ ರಾಸಾಯನಿಕಗಳು ಕೂಡಿಕೊಂಡಿರುತ್ತಿರಲಿಲ್ಲ. ಈ ಕಾರಣದಿಂದ ಆಗಿನ ಜನರು ತುಂಬಾ ಆರೋಗ್ಯವಂತರಾಗಿರುತ್ತಿದ್ದರು. ಕೆಲವೊಂದು ಸಲ ಈಗಿನ ವೃದ್ಧರು ಸಹಿತ ನಮ್ಮ ತರುಣರಗಿಂತ ಎಷ್ಟೋ ಪಟ್ಟು ವಾಸಿ ಎನಿಸುತ್ತದೆ. ಇದಕ್ಕೆ ಕಾರಣ ಈಗಿನ ತರುಣರು ಸೇವಿಸುವ ಹೊರಗಿನ ಆಹಾರ ಮತ್ತು ಉಪಯೋಗಕ್ಕೆ ಬಾರದ ಜಂಕ್ ಫುಡ್ಸ್ ಗಳು. ಈ ರೀತಿಯ ಆಹಾರಗಳು ಅನೇಕ ರೋಗಗಳಿಗೆ ಆಮಂತ್ರಣ ನೀಡುವುದು ಸಹಜ.
ಈ ಪುಟಾಣಿಯ ಸೇವನೆಯಿಂದ ಎಲುಬುಗಳಿಗೆ ದೃಢತೆ ಪ್ರಾಪ್ತವಾಗುತ್ತದೆ. ಪುಟಾಣಿಯಲ್ಲಿರುವ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ದೇಹದ ಎಲುಬುಗಳಿಗೆ ಶಕ್ತಿ ವರ್ಧಕವಾಗಿದೆ.

ಮಕ್ಕಳು ಮತ್ತು ತರುಣರ ಸ್ಥೂಲ ಶರೀರಕ್ಕೆ ಈಗಿನ ಜಂಕ್ ಫುಡ್ಸ್ ಗಳು ಕಾರಣವಾಗಿವೆ. ಪುಟಾಣಿ ಕಾಳಿನ ಸೇವನೆಯಿಂದ ದೇಹದ ತೂಕ ಹೆಚ್ಚಾಗದೆ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ.
ಆಹಾರದ ಮೇಲೆ ನಿಯಂತ್ರಣವಿಲ್ಲದೆ ಬೇಕಾಬಿಟ್ಟಿಯಾಗಿ ತಿನ್ನುವುದಕ್ಕೇನೆ ಅಸಮತೋಲನ ಆಹಾರ ಸೇವನೆ ಎನ್ನುತ್ತಾರೆ. ಈ ರೀತಿಯ ಆಹಾರ ಸೇವನೆಯಿಂದಾಗಿ ದೇಹದಲ್ಲಿ ಕೊಬ್ಬಿನ ಪ್ರಮಾಣವು ಹೆಚ್ಚಾಗುತ್ತ ಹೋಗುತ್ತದೆ. ಇದರಿಂದ ದೇಹದಲ್ಲಿಯ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗುವದರ ಜೊತೆಗೆ ಅಧಿಕ ರಕ್ತದೊತ್ತಡದ ಸಮಸ್ಯೆಯು ಪ್ರಾರಂಭವಾಗುತ್ತದೆ. ದೇಹದಲ್ಲಿರುವ ಹೆಚ್ಚುವರಿ ಕೊಬ್ಬಿನಂಶದಿಂದ ದೇಹಕ್ಕೆ ಯಾವುದೇ ರೀತಿಯ ಲಾಭವಿಲ್ಲ. ಆದರೆ ಪುಟಾಣಿಯ ಸೇವನೆಯಿಂದ ಮಾತ್ರ ಈ ಕೊಬ್ಬನ್ನು ಕಡಿಮೆ ಮಾಡಬಹುದು. ಆದ್ದರಿಂದ ದೈನಂದಿನ ಆಹಾರದಲ್ಲಿ ಪುಟಾಣಿಯನ್ನು ಸಹ ಸೇರಿಸಬೇಕು. ಇದರ ಸೇವನೆಯಿಂದ ದೇಹದಲ್ಲಿರುವ ಕೊಬ್ಬು ಹೆಚ್ಚಾಗದೆ ಕಡಿಮೆಯಾಗಲು ಸಹಾಯವಾಗುತ್ತದೆ.
ಓಡಾಟದ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬ ವ್ಯಕ್ತಿ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದಾನೆ. ಈ ಮಾನಸಿಕ ಒತ್ತಡದಿಂದಾಗಿ ವ್ಯಕ್ತಿ ದೈಹಿಕ ಮತ್ತು ಆರ್ಥಿಕ ಸಂಕಟಗಳಿಗೆ ಎದುರಾಗುತ್ತಾನೆ. ಇದರಿಂದ ಮನೆಯಲ್ಲಿಯ ವಾತಾವರಣವು ಸಹಿತ ಕಲುಷಿತವಾಗುತ್ತದೆ. ಆದ್ದರಿಂದ ವ್ಯಕ್ತಿ ಮಾನಸಿಕ ಒತ್ತಡದ ಮೇಲೆ ನಿಯಂತ್ರಣ ಪಡೆಯುವುದು ತುಂಬಾ ಅಗತ್ಯ. ಇದಕ್ಕಾಗಿ ಮಾರ್ಕೆಟಿನಲ್ಲಿ ಅನೇಕ ರೀತಿಯ ಔಷಧಿಗಳು ದೊರೆಯುತ್ತವೆ. ಈ ಔಷಧಿಗಳಿಗೆ ಮಾರುಹೋಗದೆ ದಿನಂಪ್ರತಿ ಪುಟಾಣಿಯ ಸೇವನೆಯನ್ನು ಮಾಡುವುದರಿಂದ ವ್ಯಕ್ತಿಯು ಒತ್ತಡರಹಿತನಾಗುತ್ತಾನೆ. ಪುಟಾಣಿ ವ್ಯಕ್ತಿಗೆ ಉಲ್ಲಸಿತನಾಗಿರಲು ಸಹಾಯ ಮಾಡುತ್ತದೆ.