ಅಬ್ಬಾ! 2 ಕೋಟಿಯ ಜಾಹೀರಾತನ್ನು ನಿರಾಕರಿಸಿದಳು ಈ ಸುಂದರ ನಟಿ; ಕಾರಣ ಕೇಳಿದರೆ ಸಲ್ಯೂಟ್ ಎನ್ನುವಿರಿ!

ಬ್ರಿಟಿಷರು ಭಾರತವನ್ನು ಬಿಟ್ಟು 75 ವರ್ಷಗಳಾಗುತ್ತ ಬಂದವು. ಆದರೆ ಅವರ ಹಾಗೆ ಬೆಳ್ಳಗಾಗುವ ಹುಚ್ಚು ಕ್ರೇಜ್ ಮಾತ್ರ ನಮ್ಮ ಜನರಲ್ಲಿ ಇನ್ನೂ ಇದೆ. ಏಕೆಂದರೆ ಭಾರತೀಯರಿಗೆ ಬೆಳ್ಳಗಾಗುವ ಆಸೆಯು ಮೊದಲಿನಿಂದಲೂ ಇದ್ದೇ ಇದೆ. ಇದಕ್ಕೆ ಕಾರಣ ಬೆಳ್ಳಗಿದ್ದರೆ ಸುಂದರ ಎನ್ನುವ ತಪ್ಪುಗ್ರಹಿಕೆ ನಮ್ಮ ಜನರಲ್ಲಿ ಬೇರೂರಿಬಿಟ್ಟಿದೆ. ಈ ಕಾರಣದಿಂದಾಗಿ ನಾವು ಭಾರತೀಯರು ಏನು ಮಾಡಿದರೆ ಬೆಳ್ಳಗಾಗುತ್ತೆವೆ ಎಂಬುದರ ಮೇಲೆ ಉಪಾಯಗಳನ್ನು ಹುಡುಕುತ್ತಲೇ ಇರುತ್ತಾರೆ.

ಹಿಂದೂಗಳ ಮುಖ್ಯ ದೇವರುಗಳಾದ ಪ್ರಭು ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಹಾಗೂ ದ್ರೌಪದಿ ಇವರೆಲ್ಲರೂ ಕಪ್ಪು ವರ್ಣದವರೇ ಇದ್ದರೆಂದು ವರ್ಣನೆ ಮಾಡಲಾಗುತ್ತದೆ.

ಆದರೂ ಬೆಳ್ಳಗಾಗುವ ಪ್ರಯತ್ನವಂತೂ ಭಾರತೀಯರು ಬಿಟ್ಟೆ ಬಿಡುತ್ತಿಲ್ಲ. ಇದಕ್ಕಾಗಿ ಮನೆ ಮದ್ದಾದ ಬೇಸನ್ ಹಿಟ್ಟಿನಿಂದ ಹಿಡಿದು ಮಾರ್ಕೆಟಿನಲ್ಲಿ ದೊರೆಯುವ ಅನೇಕ ಫೇರ್ ನೆಸ್ ಕ್ರೀಮ್ ಗಳನ್ನು ಉಪಯೋಗಿಸಿಯೇ ಉಪಯೋಗಿಸುತ್ತಾರೆ. ಇದರ ಹೊರತಾಗಿ ಸ್ಕಿನ್ ವೈಟ್ ನಿಂಗ್ ಮತ್ತು ಲೇಸರ್ ಟ್ರೀಟ್ಮೆಂಟ್ ಗಳಂತಹ ದುಬಾರಿಯಾದ ಉಪಚಾರ ಪದ್ಧತಿಗಳನ್ನು ಸಹಿತ ಅನುಕರಿಸುವರು.

ಒಟ್ಟಿನಲ್ಲಿ ಹೇಳುವುದಾದರೆ ಭಾರತದಲ್ಲಿ ಬಿಳಿ ಬಣ್ಣಕ್ಕೆ ತುಂಬಾ ಮಹತ್ವವನ್ನು ಕೊಟ್ಟು ಕಪ್ಪಗಿರುವ ಹುಡುಗ-ಹುಡುಗಿಯರಿಗೆ ಏನಾದರೂ ಕಡಿಮೆ ಇದೆ ಎಂಬ ಭಾವನೆ ನಿರ್ಮಾಣವಾಗಿಬಿಟ್ಟಿದೆ.

ಈಗಂತೂ ಪುರುಷರಿಗಾಗಿಯೂ ಫೇರ್ ನೆಸ್ ಕ್ರೀಮ್ ಗಳು ಮಾರ್ಕೆಟ್ ನಲ್ಲಿ ಬಂದಿವೆ. ಪುರುಷರು ಸಹಿತ ತಮ್ಮ ಬಣ್ಣ ಬದಲಾಗಬಹುದೆಂಬ ಆಸೆಯಿಂದ ಇಂಥ ಕಂಪನಿಗಳಿಗೆ ಕೋಟಿ ಕೋಟಿ ರೂಪಾಯಿಗಳ ಲಾಭ ಮಾಡಿ ಕೊಡುತ್ತಿದ್ದಾರೆ.

ಅನೇಕ ನಟಿಮಣಿಯರು ಮುಖದ ಮೇಲೆ ಮೇಕಪ್ ನ ಥರ ಎರಿಸಿಕೊಂಡು ಬರೀ 7 ದಿನಗಳಲ್ಲಿ ಅಥವಾ 14 ದಿನಗಳಲ್ಲಿ ಬೆಳ್ಳಗಾಗಿ ಎಂಬ ಆಶಯದ ಆಡ್ ಗಳನ್ನು ಮಾಡಿ ಕೊಟ್ಯಾವಧಿ ರೂಪಾಯಿಗಳನ್ನು ಗಳಿಸಿದ್ದಾರೆ.

ಕೇವಲ ಪ್ರಸಿದ್ಧಿ ಮತ್ತು ಹಣಕ್ಕಾಗಿ ಈ ಫೇರ್ ನೆಸ್ ಪ್ರಾಡಕ್ಟ್ ಗಳ ಜಾಹೀರಾತನ್ನು ಸ್ವೀಕರಿಸುವ ನಟಿಯರಿಗೂ ಇದರಲ್ಲಿಯ ಸುಳ್ಳುತನ ಗೊತ್ತಿರುತ್ತದೆ. ಈ ಪ್ರಾಡಕ್ಟ್ ಗಳಿಂದ ಬಣ್ಣದಲ್ಲಿ ಯಾವ ಬದಲಾವಣೆಯೂ ಆಗುವದಿಲ್ಲ ಅಂತ. ಇನ್ನೂ ಒಂದು ತಮಾಷೆಯ ವಿಷಯವೇನೆಂದರೆ, ಸ್ವತಃ ಅವರು ಈ ಉತ್ಪಾದನೆಗಳನ್ನು ಎಂದೂ ಉಪಯೋಗಿಸುವುದಿಲ್ಲ.

ಆದರೆ ಈ ಕಂಪನಿಗಳು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ನಟಿಯರನ್ನು ತೆಗೆದುಕೊಳ್ಳುತ್ತಾರೆ. ಕಾರಣ ಇವರ ಹಿಂದೆ ಇವರ ದೊಡ್ಡ ಕುರುಡ ಫ್ಯಾನ್ಸ್ ಗಳ ವರ್ಗವಿರುತ್ತದೆ. ಆ ವರ್ಗ ಬೆಳ್ಳಗಾಗುವ ಕನಸು ಹೊತ್ತು ಕೊಂಡಿರುತ್ತಾರೆ.

ಬರೀ ಹಣಕ್ಕೆ ಮಹತ್ವ ಕೊಡುವ ಮತ್ತು ಸಿದ್ಧಾಂತಗಳಿಗೆ ತಿಲಾಂಜಲಿ ನೀಡುವ ಅನೇಕ ನಟಿಯರಲ್ಲಿ ಒಬ್ಬಳು ನಟಿ ಹೀಗೂ ಇದ್ದಾಳೆ ಆಕೆ ತನ್ನ ಸಿದ್ಧಾಂತಗಳಿಗೆ ತಿಲಾಂಜಲಿ ಇಡಲು ಸಾಧ್ಯವಿಲ್ಲ ಎಂದಿದ್ದಾರೆ. ಅವರೇ ಸಾಯಿ ಪಲ್ಲವಿ ಹೆಸರಿನ ಸುಂದರ ಸೌತ್ ನಟಿ. ಇವರು ಫೇರ್ ನೆಸ್ ಪ್ರಾಡಕ್ಟ್ ನ 2 ಕೋಟಿ ರೂಪಾಯಿಗಳ ಆಫರ್ ನ್ನು ನಿರಾಕರಿಸಿದ್ದಾರೆ.

ಸಾಯಿ ಪಲ್ಲವಿಯವರು ದಕ್ಷಿಣದ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ಚಿತ್ರಗಳಲ್ಲಿಯೂ ಹೆಚ್ಚು ಮೇಕಪ್ ಮಾಡಿಕೊಳ್ಳದೇ ನೈಸರ್ಗಿಕ ಸೌಂದರ್ಯದ ಮೇಲೆ ಹೆಚ್ಚು ಒತ್ತು ನೀಡುತ್ತಾರೆ. ಈ ಎಲ್ಲ ಕಾರಣದಿಂದಾಗಿ ಸಾಯಿ ಪಲ್ಲವಿಯವರು 2 ಕೋಟಿ ರೂಪಾಯಿಗಳ ಆಫರ್ ನ್ನು ನಿರಾಕರಿಸಿ ಜಾಹೀರಾತು ಮಾಡಲಿಲ್ಲ.

ನಾನು ಎಂದಿಗೂ ಸೌಂದರ್ಯ ವರ್ಧಕಗಳ ಜಾಹೀರಾತನ್ನು ಮಾಡುವದಿಲ್ಲ. ನನ್ನ ಮನಸ್ಸು ಎಂದಿಗೂ ಇದಕ್ಕೆ ಒಪ್ಪುವುದಿಲ್ಲ. ನಿಮ್ಮ ಮೈ ಬಣ್ಣ ಹೇಗಿದ್ದರೂ ನೀವು ನಿಮ್ಮ ಸ್ವಂತದ ರೂಪದ ಬಗ್ಗೆ ಸೌಂದರ್ಯದ ಬಗ್ಗೆ ಯಾವತ್ತು ಆತ್ಮವಿಶ್ವಾಸವನ್ನು ಹೊಂದಿಕೊಂಡಿರಿ, ಎಂದು ಸಾಯಿ ಪಲ್ಲವಿಯವರು ಹೇಳುತ್ತಾರೆ.

ಹಣ ಮತ್ತು ಪ್ರಸಿದ್ಧಿಗಾಗಿ ಯಾವುದೇ ಮಾರ್ಗವನ್ನು ಸ್ವೀಕರಿಸುವ ಈ ಕ್ಷೇತ್ರದಲ್ಲಿ ಸಾಯಿಪಲ್ಲವಿ ಅವರು ಯುವಕ-ಯುವತಿಯರ ಮುಂದೆ ಒಂದು ಹೊಸ ಆದರ್ಶವನ್ನು ಇಟ್ಟಿದ್ದಾರೆ ಎಂದು ಹೇಳಬಹುದು.