ಹಾವಿನ ವಿಷ ಮನುಷ್ಯನ ರಕ್ತದಲ್ಲಿ ಸೇರಿಕೊಂಡಾಗ ಏನಾಗುತ್ತದೆ..? ಮೈ ಜುಂ ಎನಿಸುವ ಈ Video ಒಮ್ಮೆ ನೋಡಿ
ಹಾವು ಎಂದರೆ ಒಂದು ರೀತಿಯ ಭಯ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಇದಕ್ಕೆ ಬಹಳ ಮುಖ್ಯ ಕಾರಣವೆಂದರೆ ಹಾವಿನ ವಿಷ. ಹಾವು ಕಚ್ಚಿದರೆ ಸಾವೇ ನಿಶ್ಚಿತ ಎನ್ನುವ ಭಯ ನಮ್ಮಲ್ಲಿ ದಟ್ಟವಾಗಿದೆ. ಕೆಲವು ಸಂದರ್ಭಗಳಲ್ಲಿ ಇದು ನಿಜವೂ ಹೌದು. ಏಕೆಂದರೆ ಸೂಕ್ತ ಸಮಯದಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ದೊರೆಯದೇ ಹೋದರೆ, ಹಾವು ಕಚ್ಚಿದ ಕೂಡಲೇ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯನ್ನು ತೆಗೆದುಕೊಳ್ಳದೇ ಹೋದರೂ ಪ್ರಾಣಕ್ಕೆ ಅದು ಕಂ ಟ ಕ ಎಂದೇ ನಾವು ಹೇಳಬಹುದು. ಅದಕ್ಕೆ ಜನರು ಹಾವನ್ನು ನೋಡಿದ ಕೂಡಲೇ ಮಾರು ದೂರ ಓಡುತ್ತಾರೆ. ಇನ್ನೂ ಕೆಲವರು ಹಾವಿನ ಹೆಸರು ಕೇಳಿದರೂ ಕೂಡಾ ಬೆಚ್ಚಿ ಬೀಳುವುದು ಉಂಟು.
ಇನ್ನು ಜಗತ್ತಿನಲ್ಲಿ ಕೆಲವು ಹಾವುಗಳಿದ್ದು ಅವುಗಳ ವಿಷವಂತೂ ಎಷ್ಟು ಭೀ ಕರ ಎಂದರೆ ಆ ಹಾವುಗಳೇನಾದರೂ ಕಚ್ಚಿದರೆ ಮನುಷ್ಯ ಕೆಲವೇ ನಿಮಿಷಗಳಲ್ಲಿ ಸಾಯುತ್ತಾನೆ. ಅಂತಹ ಹಾವಿನ ವಿಷಕ್ಕೆ ಔಷಧವಂತೂ ಖಂಡಿತ ಇಲ್ಲ ಎನ್ನಬಹುದು. ವಿಷಪೂರಿತ ಹಾವುಗಳು ಎಂದರೆ ಎಂತಹ ಧೈರ್ಯವಂತರೂ ಕೂಡಾ ಒಂದು ಕ್ಷಣ ಭಯ ಪಡಲೇ ಬೇಕು ಎನ್ನುವುದು ಕೂಡಾ ನಿಜ. ಹಾವುಗಳಿಗೆ ಹಲ್ಲು ಕತ್ತರಿಸಿದರೆ ಅದು ಕಚ್ಚಿದರೂ ಕೂಡಾ ಏನಾಗುವುದಿಲ್ಲ ಎನ್ನುತ್ತಾರೆ. ಏಕೆಂದರೆ ಹಾವು ತನ್ನ ಹಲ್ಲಿನಿಂದ ಕಚ್ಚಿದಾಗಲೇ ವಿಷವು ಹೊರಗೆ ಬರುವುದು ಎಂದು ವೈಜ್ಞಾನಿಕ ವಿಶ್ಲೇಷಣೆಯನ್ನು ಕೂಡಾ ನೀಡುತ್ತಾರೆ.
ಹಾಗಾದರೆ ಹಾವಿನ ವಿಷ ನಿಜಕ್ಕೂ ಇಷ್ಟೊಂದು ಭೀ ಕರ ಹಾಗೂ ಇಷ್ಟೊಂದು ಅಪಾಯಕಾರಿಯೇ? ಅಸಲಿಗೆ ಹಾವಿನ ವಿಷಯ ಮಾನವನ ದೇಹ ಸೇರಿದರೆ ಏನಾಗುತ್ತದೆ ? ಹೀಗೆ ಅನೇಕ ಪ್ರಶ್ನೆಗಳು ಅನೇಕರಲ್ಲಿ ಇದೆ , ಅದು ಮಾತ್ರವಲ್ಲದೇ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವೀಡಿಯೋಗಳು, ಲೇಖನಗಳು ಕೂಡಾ ಲಭ್ಯ ಇದ್ದು, ಅವುಗಳ ಸಹಾಯದಿಂದ ನಾವು ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದಾಗಿದೆ. ಈಗ ಅಂತಹುದೇ ಒಂದು ಪ್ರಶ್ನೆಗೆ ಉತ್ತರ ನೀಡುವಂತಹ ಒಂದು ವೀಡಿಯೋ ಎಲ್ಲರ ಗಮನವನ್ನು ಸೆಳೆದಿದೆ.
ಅಂದರೆ ಹಾವಿನ ವಿಷವು ಮಾನವನ ರಕ್ತವನ್ನು ಸೇರಿದರೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ವ್ಯಕ್ತಿಯೊಬ್ಬರು ಪ್ರಾಯೋಗಿಕವಾಗಿ ವೀಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದು ಎಲ್ಲರ ಗಮನವನ್ನು ಕೂಡಾ ಸೆಳೆದಿದೆ. ವೀಡಿಯೋದಲ್ಲಿ ನೋಡಿದಾಗ ಹಾವಿನ ದೇಹದಿಂದ ವಿಷವನ್ನು ತೆಗೆಯುವ ಬಗ್ಗೆ ಪರಿಣತಿ ಹೊಂದಿರುವ ವ್ಯಕ್ತಿಯೊಬ್ಬ ಹಾವಿನ ಹಲ್ಲಿನಿಂದ ರಕ್ತವನ್ನು ತೆಗೆಯುತ್ತಾನೆ. ಅದನ್ನು ನೋಡಿದಾಗ ನಮಗೆ ಅಯ್ಯೋ ಪಾಪ ಹಾವು ಎನಿಸಬಹುದು. ಆದರೆ ಪ್ರಯೋಗಕ್ಕೆ ಹೀಗೆ ಮಾಡಲೇಬೇಕಲ್ಲವೇ?
ವಿಡಿಯೋ ನೋಡಿ
सांप का ज़हर इन्सान के ख़ून मे मिलने के बाद देखिये कीस तरहा ख़ून जम जाता है 😳 pic.twitter.com/Q7HAcMcqUk
— Crazy Panda (@CrazyPa50956318) November 18, 2020
ಅನಂತರ ವಿದೇಶಿ ವ್ಯಕ್ತಿ ಆ ವಿಷವನ್ನು ತೆಗೆದುಕೊಂಡು ಅದನ್ನು ರಕ್ತದಲ್ಲಿ ಮಿಶ್ರಣ ಮಾಡುತ್ತಾರೆ. ರಕ್ತಕ್ಕೆ ವಿಷವನ್ನು ಹಾಕಿದ ಕೆಲವೇ ಸೆಕೆಂಡುಗಳ ನಂತರ ದ್ರವ ರೂಪದಲ್ಲಿ ಇದ್ದ ರಕ್ತವು ಗಟ್ಟಿಯಾಗಿ ಬಿಡುತ್ತದೆ. ಅದನ್ನು ಅವರು ಮತ್ತೊಂದು ಲೋಟಕ್ಕೆ ಬಗ್ಗಿಸಿದಾಗ ರಕ್ತವು ಹೆಪ್ಪುಗಟ್ಟಿರುವ ರೂಪದಲ್ಲಿ ಬೀಳುವುದನ್ನು ನಾವು ನೋಡಬಹುದು, ನಿಜಕ್ಕೂ ಹಾವಿನ ವಿಷ ನಮ್ಮ ರಕ್ತವನ್ನು ಸೇರಿದಾಗ ರಕ್ತದಲ್ಲಿ ಇಂತಹುದೊಂದು ಬದಲಾವಣೆ ಆಗುತ್ತದೆ ಎನ್ನುವುದನ್ನು ನೋಡಿದಾಗ ಒಂದು ಕ್ಷಣ ಆಶ್ಚರ್ಯ ಖಂಡಿತ ಆಗುತ್ತದೆ.