ಕಬ್ಬಿನ ಗದ್ದೆಯಲ್ಲಿ ಕಬ್ಬು ತಿನ್ನುತ್ತಿದ್ದ ಮರಿ ಆನೆ: ಜನ ನೋಡುವರು ಎನ್ನುವ ಭಯದಿಂದ ಅವಿತುಕೊಳ್ಳಲು ಮಾಡಿತು ವಿಚಿತ್ರ ಪ್ರಯತ್ನ! ನೋಡಿ ಫೋಟೋ

ಆನೆಗಳು ಗಾತ್ರದಲ್ಲಿ ದೊಡ್ಡವು, ವಿಶಾಲ ಕಾಯವ ಹೊತ್ತು ತಿರುಗುವ ಈ ಆನೆಗಳು ಮರಿಗಳಾಗಿರುವಾಗ ಮಾಡುವ ತುಂಟಾಟಗಳು ನಿಜಕ್ಕೂ ಪ್ರತಿಯೊಬ್ಬರ ಮನಸ್ಸನ್ನು ಕೂಡಾ ಗೆದ್ದು ಬಿಡುತ್ತದೆ. ಆನೆ ಮರಿಗಳ ತುಂಟಾಟ ಪುಟ್ಟ ಮಕ್ಕಳ ಮುಗ್ಧ ಆಟದಂತೆ ಇರುತ್ತದೆ‌. ಅದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಆನೆ ಮರಿಗಳು ಆಡುವ ತುಂಟಾಟಗಳ ವೀಡಿಯೋ ಆಗಾಗ ಸಿಕ್ಕಾಪಟ್ಟೆ ವೈರಲ್ ಆಗಿ ಬಿಡುತ್ತವೆ. ಇಂತಹ ಬೇಕಾದಷ್ಟು ವೀಡಿಯೋಗಳು ಕೂಡಾ ನಮಗೆ ಆನ್ಲೈನ್ ನಲ್ಲಿ ನೋಡಲು ಕೂಡಾ ಲಭ್ಯವಿದೆ. ಆನೆ ಮರಿಗಳ ಈ ವೀಡಿಯೋ ನೋಡಿದಾಗ ಎಷ್ಟೇ ಬೇಸರದ ಮೂಡ್ ಇದ್ದರೂ ಕೂಡಾ ಮನಸ್ಸಿಗೆ ಒಂದು ಆಹ್ಲಾದ ಎನಿಸುವುದು ಮಾತ್ರವೇ ಅಲ್ಲದೇ ಒಂದು ಮಂದಹಾಸ ಮುಖದಲ್ಲಿ ಮೂಡುತ್ತದೆ‌.

ಈಗ ಹೊಸದಾಗಿ ಇಂತಹುದೇ ಒಂದು ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದೆ‌. ಈ ಹೊಸ ಫೋಟೋ ಹಾಗೂ ವೀಡಿಯೋ ನೋಡಿದರೆ ನೀವು ಕೂಡಾ ಆನೆ ಮರಿಯ ಮುಗ್ಧತೆ ನೋಡಿ ಖಂಡಿತ ಅದರ ಅಭಿಮಾನಿಯಾಗಿ ಬಿಡುವರು. ಈ ಆನೆ ಮರಿಯ ಮುಗ್ಧತೆಯನ್ನು ತೋರಿಸಿರುವ ಹೊಸ ಫೋಟೋದಲ್ಲಿನ ಘಟನೆ ನಡೆದಿರುವುದು ಥೈಲ್ಯಾಂಡ್ ನ ಚಿವಾಂಗ್ ಮಾಯಿ ನಗರದಲ್ಲಿ ಎನ್ನಲಾಗಿದೆ. ಈ ವೀಡಿಯೋ ರಾತ್ರಿಯ ಕತ್ತಲಲ್ಲಿ ಕಬ್ಬಿನ ತೋಟಕ್ಕೆ ಬಂದು ಕಬ್ಬು ತಿನ್ನುತ್ತಿದ್ದ ಆನೆ ಮರಿಯ ಫೋಟೋ ಆಗಿದ್ದು, ಇದರಲ್ಲೊಂದು ವಿಶೇಷತೆ ಕೂಡಾ ಇದೆ.

ಏನು ಆ ವಿಶೇಷತೆ ಎನ್ನುವಿರಾ? ಬನ್ನಿ ಅದು ಕೂಡಾ ಹೇಳ್ತೀವಿ‌‌. ಯಾರು ಇಲ್ಲದ ಸಮಯದಲ್ಲಿ ಆರಾಮವಾಗಿ ಕಬ್ಬಿನ ಸವಿ ಸವಿಯುತ್ತಿದ್ದ ಆನೆ ಮರಿಯ ಮೇಲೆ ಬೆಳಕು ಬಿದ್ದ ಕೂಡಲೇ ಅದು ಬಹಳ ಮುಗ್ಧತೆಯಿಂದ ಓಡಿ ಹೋಗಿ ಅಲ್ಲೇ ಇದ್ದ ಒಂದು ಲೈಟ್ ಕಂಬದ ಹಿಂದೆ ಬಚ್ಚಿಟ್ಟುಕೊಂಡಿದೆ. ಆನೆ ಮರಿ ಮನಸ್ಸಿನಲ್ಲಿ ತಾನು ಅಲ್ಲಿ ಇಲ್ಲವೇನೋ, ತಾನು ಯಾರಿಗೂ ಕಾಣುತ್ತಿಲ್ಲವೇನೋ ಎನ್ನುವಂತೆ ಬಹಳ ಮುಗ್ಧತೆಯಿಂದ ಬಚ್ಚಿಟ್ಟುಕೊಂಡಿದೆ. ಆದರೆ ಸಣ್ಣದಾದ ಲೈಟ್ ಕಂಬದ ಹಿಂದೆ ಅಡಗಿದ ಅದು ಎಲ್ಲರಿಗೂ ಕಂಡಿದೆ‌. ಆನೆ ಮರಿಯ ಈ ಫೋಟೋ ನೋಡಿದ ಪ್ರತಿಯೊಬ್ಬರೂ ಕೂಡಾ ಆನೆ ಮರಿಯ ಮುಗ್ಧತೆಗೆ ಮನೆ ಸೋತಿದ್ದಾರೆ.

ಆನೆ ಮರಿಯ ಮುಗ್ಧತೆಗೆ ಸಾಕ್ಷಿಯಾಗಿರುವ ಈ ಫೋಟೋ ನವೆಂಬರ್ 14 ರಂದು ಫೇಸ್ ಬುಕ್ ನಲ್ಲಿ ಶೇರ್ ಆಗಿತ್ತು. ಈ ಬಗ್ಗೆ ಲೇಖನಗಳು ಮೂಡಿ ಬರುವ ವೇಳೆಗೆ ಈ ಫೋಟೋ ವನ್ನು 2.7 ಸಾವಿರ ರಿಯಾಕ್ಷನ್ ಗಳು ಬಂದಿದ್ದರೆ ಸಾವಿರಕ್ಕಿಂತ ಅಧಿಕ ಮಂದಿ ಈ ಫೋಟೋ ವ ನ್ನು ಶೇರ್ ಮಾಡಿಕೊಂಡಿದ್ದಾರೆ. ಅನೇಕರು ಈ ಫೋಟೋ ನೋಡಿ ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾ, ಆನೆಯ ಮುಗ್ಧತೆಗೆ ಮನಸೋತು ಹೌದು ನಮಗೆ ಆನೆ ಕಾಣುತ್ತಲೇ ಇಲ್ಲವೆಂದು ಅವರು ಬರೆದುಕೊಂಡಿದ್ದಾರೆ ಹಾಗೂ ಮುಗ್ಧ ಪ್ರಾಣಿ ಎಂದು ಉದ್ಗರಿಸಿದ್ದಾರೆ ಕೂಡಾ.‌

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಕೂಡಾ ಇಂತಹುದೇ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡು ಎಲ್ಲರಿಗಿಂತ ಶಾಂತವಾದ ಟ್ಯಾಕ್ಸ್ ಕಲೆಕ್ಟರ್ ಎಂದು ಬರೆದುಕೊಂಡಿದ್ದರು. ಅದರಲ್ಲಿ ದಕ್ಷಿಣ ಭಾರತದ ನಗರ ವೊಂದರಲ್ಲಿ ಟ್ರಕ್ ನಲ್ಲಿ ಇದ್ದ ಆನೆಗಳು, ತಮ್ಮ ಪಕ್ಕ ಟ್ರಾಪಿಕ್ ನಲ್ಲಿ ಕಬ್ಬಿನ ಲೋಡ್ ಇರುವ ಲಾರಿಯೊಂದು ಬಂದು ನಿಂತಾಗ ಅವು ಅದರಿಂದ ಕಬ್ಬು ಎಳೆದುಕೊಂಡು ತಿನ್ನುವ ವಿಡಿಯೋ ಆಗಿತ್ತು. ಆ ವೀಡಿಯೋ ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿ ಜನರ ಗಮನವನ್ನು ಸೆಳೆದಿತ್ತು.