ದಿನಸಿ ತರಲು ಹೋದ ಮಗ ಮನೆಗೆ ತಂದದ್ದು ಹೆಂಡತಿಯನ್ನು ,ತಾಯಿ ಏನು ಮಾಡಿದಳು ನೀವೇ ನೋಡಿ!

ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಲಾಕ್ ಡಾವುನ್ ಕಾಲದಲ್ಲಿ ವಿಚಿತ್ರ ಪ್ರಕರಣ ಒಂದು ಪ್ರಸಿದ್ಧಿ ಪಡೆದಿದೆ. ತರುಣನೊಬ್ಬ ದಿನಸಿ ಅಂಗಡಿಗೆ ಹೊಗಿ ಮರಳಿ ಬರುವಾಗ ಮದುವೆಯನ್ನೇ ಮಾಡಿಕೊಂಡು ಪತ್ನಿಯ ಜೊತೆಗೆ ವಾಪಸ್ ಬಂದಿದ್ದಾನೆ.ಇದನ್ನು ಕಂಡ ತಾಯಿ ಕೋಪದಿಂದ ಇಬ್ಬರಿಗೂ ಮನೆಯಲ್ಲಿ ಪ್ರವೇಶಕ್ಕೆ ಅಡ್ಡಿ ಮಾಡುತ್ತ ಮೂರ್ಛೆ ಹೋಗಿದ್ದಾಳೆ. ನಂತರ ವಾದ ಪೊಲೀಸ್ ಸ್ಟೇಶನ್ ಮೆಟ್ಟಲೇರಿದೆ. ಅಲ್ಲಿ ಸಾಕಷ್ಟು ಸಮಯ ವಾದವಿವಾದ ನಂತರ ಪ್ರಕರಣ ಬಗೆ ಹರಿಸುವಲ್ಲಿ ಪೊಲೀಸರಿಗೆ ಯಶಸ್ಸು ಲಭಿಸಿದೆ.
ತರಕಾರಿ ಮತ್ತು ದಿನಸಿ ಸಾಮಾನು ತರಲು ಹೋಗುತ್ತೇನೆಂದ ತರುಣ ಮರಳಿ ಬರುವಾಗ ಪ್ರೇಯಸಿಯ ಜೊತೆಗೆ ಮದುವೆಯಾಗಿ ನೇರ ಮನೆಗೆ ಕರೆದುಕೊಂಡು ಬಂದಿದ್ದಾನೆ.ಆದರೆ ತಾಯಿಯ ಒಪ್ಪಿಗೆ ಇಲ್ಲದ್ದರಿಂದ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಮಾಡಬೇಕಾಯಿತು.


ಇನ್ನು ವಿಶೇಷವೇನೆಂದರೆ,’ತನ್ನ ಮಗ ಲಾಕ್ ಡಾವುನ್ ನಿಯಮದ ಉಲ್ಲಂಘನೆ ಮಾಡಿದ್ದಾನೆ,ಆತನನ್ನು ನನ್ನ ಮನೆಯಲ್ಲಿ ಸೇರಿಸಿಕೊಳ್ಳುವದಿಲ್ಲ, ನಾನು ಇವನಿಗೆ ತರಕಾರಿ ಮತ್ತು ದಿನಸಿ ಸಾಮಾನು ತರಲು ಹೇಳಿದರೆ ಈತ ಹೆಂಡತಿಯನ್ನು ತಂದಿದ್ದಾನೆ ಇದಕ್ಕೆ ನನ್ನ ಸಮ್ಮತಿಯಿಲ್ಲ ಎಂಬ ಮಾತು ತಾಯಿಯದು.
ಸಂಪೂರ್ಣ ವಿಷಯವೇನೆಂದರೆ,26 ವರ್ಷದ ಗುಡ್ಡು ಹೆಸರಿನ ಯುವಕ ಮತ್ತು ಸವಿತಾ ಇವರಿಬ್ಬರ ಮದುವೆಯ ಬಗ್ಗೆ ಪೊಲೀಸರು ಹೆಚ್ಚುವರಿ ತನಿಖೆ ಮಾಡಿದಾಗ ಗುಡ್ಡು ಹೇಳುವ ಪ್ರಕಾರ ಎರಡು ತಿಂಗಳ ಹಿಂದೆ ಇವರ ಮದುವೆ ಹರಿದ್ವಾರದಲ್ಲಿ ನಡೆದು ಹೋಗಿದೆಯಂತೆ. ಮಾತ್ರ ಈ ಲಗ್ನದ ಯಾವುದೇ ಸಾಕ್ಷಾಧಾರಗಳಿಲ್ಲ. ಹಾಗೂ ಸಾಕ್ಷಿದಾರರು ಇಲ್ಲದ ಕಾರಣ ಮ್ಯಾರೇಜ್ ಸರ್ಟಿಫಿಕೇಟ್ ಸಿಕ್ಕಿಲ್ಲ. ನಾನು ಮ್ಯಾರೇಜ್ ಸರ್ಟಿಫಿಕೇಟ್ ತರಲು ಹರಿದ್ವಾರಕ್ಕೆ ಹೋಗಬೇಕೆನ್ನುವಷ್ಟರಲ್ಲಿಯೇ ಲಾಕ್ ಡಾವುನ್ ಕಾರಣದಿಂದ ನಿಂತು ಹೋಯಿತು ಎನ್ನುವ ವಿಚಾರ ಪೊಲೀಸರ ಮುಂದೆ ಮಂಡಿಸಿದ್ದಾನೆ.
ಆಮೇಲೆ ಪೊಲೀಸರು ಸರಿಯಾಗಿ ತನಿಖೆ ನಡೆಸಿ ಇಬ್ಬರಿಗೂ ಕೂಡಿ ಇರಲು ಸಮ್ಮತಿಸಿದ್ದಾರೆ.

ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದು ಒಂದು ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮನೆ ಮಾಲೀಕ ಲಾಕ್ ಡಾವುನ್ ಸಂದರ್ಭದಲ್ಲಿಯೇ ಸವಿತಾಗೆ ಮನೆ ಬಿಡಲು ಹೇಳಿದಾಗ ಗುಡ್ಡು ಆಕೆಯನ್ನು ಮನೆಗೆ ಕರೆದು ತರಲು ನಿರ್ಧರಿಸಿದಾಗ ಈ ಮೇಲಿನ ಅವಾಂತರ ಹೊರಬಿದ್ದಿದೆ. ಆದರೆ ತಾಯಿ ಮಾತ್ರ ಲಾಕ್ ಡಾವುನ್ ಸಂದರ್ಭದಲ್ಲಿ ತನ್ನ ಮಗ ನಿಯಮ ಭಂಗ ಮಾಡಿದ್ದಾನೆ,ಆದ ಕಾರಣ ಲಾಕ್ ಡಾವುನ್ ಮುಗಿಯುವವರೆಗೂ ಮನೆಯಲ್ಲಿ ನಾನು ಇಬ್ಬರಿಗೂ ತೆಗೆದುಕೊಳ್ಳುವದಿಲ್ಲ ಅಂದು ಪಟ್ಟು ಹಿಡಿದಿದ್ದಾಳೆ.ಕೊನೆಗೆ ಪೊಲೀಸರು ಸವಿತಾ ಇರುವ ಮನೆ ಮಾಲೀಕನಿಗೆ ಲಾಕ್ ಡಾವುನ್ ಮುಗಿಯುವವರೆಗೂ ಇದೇ ಬಾಡಿಗೆ ಮನೆಯಲ್ಲಿ ಇರಲಿ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ ಎಂದು ತಿಳಿಹೇಳಿದ್ದಾರೆ ಎಂದು ಎಎನ್ಆಯ್ ತಿಳಿಸಿದೆ.