45 ನೇ ವಯಸ್ಸಿನಲ್ಲಿ ತಾಯಿಯಾಗಿದ್ದಕ್ಕೆ ಕೆಳಮಟ್ಟದ ಟೀಕೆ ಮಾಡಿದವರಿಗೆ ಸರಿಯಾಗಿ ಉತ್ತರ ಕೊಟ್ಟ ಶಿಲ್ಪಾ ಶೆಟ್ಟಿ! ಅಂತಾರೆ…
ಸರೋಗೆಸಿ ಮುಖಾಂತರ ಶಿಲ್ಪ ಶೆಟ್ಟಿ ಅವರು ಈ ವರ್ಷದ ಫೆಬ್ರುವರಿ 15 ರಂದು ಮತ್ತೊಮ್ಮೆ ತಾಯಿಯಾದರು. ಈ ವಿಷಯವನ್ನು ಕೆಲವು ದಿವಸಗಳ ನಂತರ ಶಿಲ್ಪ ಅವರು ಹೊರಹಾಕಿದರು. ಬಾಲಿವುಡ್ ನಲ್ಲಿ ಯೋಗಗಳ ಮುಖಾಂತರ ಆರೋಗ್ಯಕರ ಜೀವನಶೈಲಿ ಹೊಂದಿದವರಲ್ಲಿ ಶಿಲ್ಪಾ ಶೆಟ್ಟಿ ಮೊದಲಿಗರು ಎಂದು ಹೇಳಬಹುದು. ಸದ್ಯ ಅವರ ವಯಸ್ಸು 45 ಇದೆ. ಈ ವಯಸ್ಸಿನಲ್ಲಿ ಅವರು ತಾಯಿಯಾದದ್ದು ಅನೇಕರಿಗೆ ಸರಿ ಎನಿಸಿಲ್ಲ. ಈ ಕಾರಣದಿಂದಾಗಿ ಅನೇಕರು ಶಿಲ್ಪ ಅವರ ಬಗ್ಗೆ ಕೆಳಮಟ್ಟದ ಕಮೆಂಟ್ಗಳನ್ನು ಮಾಡಿ ಟ್ರೊಲ್ ಮಾಡಿದ್ದರು. ಇದೇ ಕಮೆಂಟ್ ಗಳ ಬಗ್ಗೆ ಶಿಲ್ಪ ಶೆಟ್ಟಿಯವರು ಇಂತಹವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಸಶಕ್ತಳಾಗಿದ್ದೆನೆ ನನ್ನಲ್ಲಿ ಮಕ್ಕಳನ್ನು ಹೇರುವ ಆ ಶಕ್ತಿ ಇದೆ ಆದ್ದರಿಂದ ನಾನು ಈ 45 ನೇ ವಯಸ್ಸಿನಲ್ಲಿ ಮಗುವನ್ನು ಹೆತ್ತಿದ್ದೇನೆ ಮತ್ತು ತಾಯಿಯಾಗಿದ್ದೇನೆ ಎಂದು ಉತ್ತರಿಸಿದ್ದಾರೆ. ಯಾವಾಗ ನಾನು 50 ವರ್ಷದವಳಾಗಿ ಇರುತ್ತೇನೆ ಆಗ ನನ್ನ ಮಗಳು 5 ವರ್ಷಗಳಾಗಿರುತ್ತಾಳೆ. ಬೇರೆಯವರು ನನ್ನ ಬಗ್ಗೆ ಏನು ವಿಚಾರ ಮಾಡುತ್ತಾರೆ ಎಂಬುದರ ಬಗ್ಗೆ ನಾನು ಗಮನಹರಿಸುವುದಿಲ್ಲ ಎಂದು ಶಿಲ್ಪ ಅವರು ಹೇಳಿದರು. ತಾಯಿಯಾಗಿ ಎಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಿದೆಯೋ ಅದನ್ನು ನಾನು ಸರಿಯಾಗಿ ಮಾಡುತ್ತೇನೆ.

ಶಿಲ್ಪ ಶೆಟ್ಟಿ ಅವರ ಮೊದಲ ಮಗುವಿನ ಹೆಸರು ವಿಯಾನ್ ಇದೆ. ಸದ್ಯ ಆತ 8 ವರ್ಷದವನಾಗಿದ್ದಾನೆ. ಈಗ ಮತ್ತೊಮ್ಮೆ ಶಿಲ್ಪ ಶೆಟ್ಟಿ ಅವರು ಹೊಸದಾಗಿ ತಾಯಿಯಾದ ಬಗೆಗಿನ ಅನುಭವವನ್ನು ಶೇರ್ ಮಾಡಿದ್ದಾರೆ.