ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದರೂ 10 ವರ್ಷಗಳಿಂದ ತಂದೆ-ತಾಯಿಗೆ ಭೇಟಿಯಾಗಿಲ್ಲ; ಬದುಕಲು ಕಷ್ಟಪಡುತ್ತಿರುವ ಮಲಿಂಗಾ ಮನೆಯವರು!
ಲಸಿತ್ ಮಲಿಂಗ ಈ ವ್ಯಕ್ತಿಗೆ ಪರಿಚಯ ಮಾಡಿ ಕೊಡುವ ಅವಶ್ಯಕತೆ ಇಲ್ಲ. ತಮ್ಮ ವಿಚಿತ್ರ ಶೈಲಿಯ ಬೌಲಿಂಗ್ ಮುಖಾಂತರ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾದ ಹೆಸರನ್ನು ಗಳಿಸಿಕೊಂಡ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಲಿಂಗ ಅವರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ. ವಿಶ್ವ ಶ್ರೇಷ್ಠ ಬೌಲರ್ ಗಳಲ್ಲಿ ಲಸಿತ್ ಮಲಿಂಗ ಅವರ ಗಣನೆ ಯಾಗುತ್ತದೆ.
ಲಸಿತ್ ಮಲಿಂಗ ಅವರು ಸದ್ಯ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ನಿವೃತ್ತಿಯಾಗಿದ್ದಾರೆ. ಸದ್ಯ ಶ್ರೀಲಂಕಾದ t20 ಪಂದ್ಯಗಳಲ್ಲಿ ನಾಯಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ನಿವೃತ್ತಿಯಾದರೂ ಸಹಿತ ವಿಶ್ವದ ಅನೇಕ ಲೀಗ್ ಗಳಲ್ಲಿ ಆಡುತ್ತಲೇ ಇದ್ದಾರೆ.
ಮಲಿಂಗ ಅವರು ವಿಶ್ವಕ್ರಿಕೆಟಿನಲ್ಲಿ ತಮ್ಮ ಹೆಸರು ಉಜ್ವಲವಾಗಿ ಬೆಳಗಿಸಿದ್ದಾರೆ. ಆದರೆ ಇವರು ತಮ್ಮ ಪೋಷಕರ ಕಡೆಗೆ ದುರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ವರದಿಯಾಗುತ್ತಿದೆ. ಇಂಡಿಯನ್ ಎಕ್ಸ್ಪ್ರೆಸ್ ನೀಡಿದ ವರದಿಯ ಪ್ರಕಾರ, ಮಲಿಂಗ ಅವರ ತಂದೆ-ತಾಯಿ ಗಾಲೆ ಯಲ್ಲಿಯ ರಥಗಾಮ ಪ್ರಾಂತದಲ್ಲಿ ವಾಸಿಸುತ್ತಾರೆ. ಇಲ್ಲಿ ಅವರ ಒಂದು ಮಹಡಿಯ ಚಿಕ್ಕ ಮನೆ ಉಂಟು. ಇದೇ ಮನೆಯಲ್ಲಿ ಮಲಿಂಗ ಅವರ ತಾಯಿ ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದ್ಯ ಮಲಿಂಗ ಅವರ ಪೋಷಕರ ಪರಿಸ್ಥಿತಿ ತುಂಬಾ ಬಿಕ್ಕಟ್ಟಾಗಿದೆ ಎಂದು ಸುದ್ದಿಮೂಲಗಳಿಂದ ಗೊತ್ತಾಗಿದೆ. ಗಳಿಕೆಯ ಬೇರೆ ದಾರಿಗಳು ಇಲ್ಲದ್ದರಿಂದ ಜೀವನ ನಡೆಸುವದು ತುಂಬಾ ಕಷ್ಟವಾಗಿದೆ.

ಮಲಿಂಗ ಅವರ ಬಗ್ಗೆ ಹೇಳಬೇಕಾದರೆ ಕಳೆದ ಹತ್ತು ವರ್ಷಗಳಿಂದ ಮಲಿಂಗ ಅವರು ತನ್ನ ತಂದೆ-ತಾಯಿಗೆ ಭೇಟಿಯಾಗಿಲ್ಲ. ನಿಮ್ಮ ಮಗ ಮನೆಗೆ ಯಾಕೆ ಬರುತ್ತಿಲ್ಲ ಎಂದು ಕೇಳಿದಾಗ ತಾಯಿಯ ಉತ್ತರ ಹೀಗಿದೆ, ಮಗ ತನ್ನ ಕೆಲಸದಲ್ಲಿ ತುಂಬಾ ಬಿಜಿ ಆಗಿರಬೇಕು, ಮತ್ತು ಮಗನಿಗೆ ಕೊಲಂಬೋದಲ್ಲಿಯ ಜೀವನ ಹೆಚ್ಚು ಇಷ್ಟವಾಗುತ್ತಿರಬಹುದು ಆದ್ದರಿಂದ ಆತ ಈಕಡೆ ಬರುತ್ತಿಲ್ಲ. ಆತನು ಸಂತೋಷದಲ್ಲಿದ್ದರೆ ತಾನೇ ನಾವು ಸಂತೋಷದಲ್ಲಿ ಇರಲಿಕ್ಕೆ ಸಾಧ್ಯ ಎಂದು ತಾಯಿ ಹೇಳುತ್ತಾರೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಮೊದಲಿನಿಂದಲೂ ಆಡುತ್ತಿರುವ ಲಸಿತ್ ಮಲಿಂಗ ಅವರು ತಮ್ಮ ವಯಕ್ತಿಕ ಕಾರಣದಿಂದಾಗಿ ಕಳೆದ ಆವೃತ್ತಿಯಲ್ಲಿ ಆಡುವುದು ಸಾಧ್ಯವಾಗಲಿಲ್ಲ. ಮಲಿಂಗ್ ಅವರು ಶ್ರೀಲಂಕಾದ ಕಡೆಯಿಂದ ಒಟ್ಟು 30 ಟೆಸ್ಟ್ ಪಂದ್ಯಗಳಲ್ಲಿ 101 ಮತ್ತು 226 ಏಕದಿನ ಪಂದ್ಯಗಳಲ್ಲಿ 338 ಹಾಗೂ 84 ಟಿ20 ಪಂದ್ಯಗಳಲ್ಲಿ 107 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇಂದು ಲಸಿತ್ ಮಲಿಂಗ ಅವರು ಕ್ರಿಕೆಟ್ ನಿಂದ ಜೀವನದಲ್ಲಿ ಯಶಸ್ವಿಯಾಗಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ತನ್ನ ಹೆತ್ತವರ ಕಡೆಗೆ ಗಮನ ಕೊಡದೆ ಇರುವುದು ದುರದೃಷ್ಟಕರ.