Viral Video: ಕಾಡೆಮ್ಮೆಯನ್ನು ಬೇಟೆಯಾಡಲು ಬಂದ ಸಿಂಹಕ್ಕೆ, ಹಗಲಲ್ಲೇ ನಕ್ಷತ್ರಗಳನ್ನು ತೋರಿಸಿದ ಕಾಡೆಮ್ಮೆ! ನೋಡಿ ಈ Video
ಕಾಡಿನ ರಾಜ ಸಿಂಹ ಎನ್ನುವುದು ಚಿಕ್ಕಂದಿನಿಂದ ನಾವು ಕೇಳಿ ಬಂದಿರುವು ಪಾಠ. ಇನ್ನು ಸಿಂಹದ ಶೌರ್ಯ, ಸಾಹಸ ಹಾಗೂ ಕಾಡಿನಲ್ಲಿ ಅದರ ಗತ್ತು ಗಮ್ಮತ್ತುಗಳ ಬಗ್ಗೆ ಕೂಡಾ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಅದೆಲ್ಲವನ್ನು ಕೇಳಿದಾಗ ಸಹಜವಾಗಿಯೇ ಸಿಂಹದ ಬಗ್ಗೆ ಒಂದು ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅದಕ್ಕೆ ಪೂರಕ ಎಂಬಂತೆ ಕಾಡಿನಲ್ಲಿ ಸಿಂಹದ ಜೀವನ, ಅದು ಬೇಟೆಯಾಡುವ ವಿಧಾನಗಳನ್ನು ನೋಡಿದಾಗ ಥ್ರಿಲ್ ಫೀಲಾಗುವುದು ಕೂಡಾ ನಿಜ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಿಂಹವು ಬೇರೆ ಪ್ರಾಣಿಗಳನ್ನು ಬೇಟೆ ಮಾಡುವ ನೂರಾರು ವೀಡಿಯೋಗಳು ಕೂಡಾ ಲಭ್ಯ ಇದ್ದು ಅದನ್ನು ನೋಡಿದಾಗ ಬಹಳ ಅಚ್ಚರಿ ಹಾಗೂ ಅದ್ಭುತ ಕೂಡಾ ಎನಿಸದೇ ಇರಲಾರದು.
ಸಿಂಹಗಳು ಬೇಟೆಯಾಡುವ ವಿಧಾನ ನಿಜಕ್ಕೂ ರೋಚಕತೆಯಿಂದ ಕೂಡಿರುತ್ತದೆ. ಹೊಂಚು ಹಾಕಿ ತಮ್ಮ ಬೇಟೆಯ ಬೆನ್ನು ಹತ್ತಿ ಹೋಗುವ ಸಿಂಹಗಳು ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಕೂಡಾ ತಪ್ಪಿಸಿಕೊಂಡು ಹೋಗದಂತೆ ಎಚ್ಚರ ವಹಿಸುತ್ತವೆ. ಇಂತಹ ಸಿಂಹದ ಒಂದು ಕಥೆಯಲ್ಲಿ ನಾವು ಹೇಗೆ ದನಗಳ ಒಗ್ಗಟ್ಟನ್ನು ಮುರಿದ ಸಿಂಹವು ಅವುಗಳನ್ನು ಬೇಟೆಯಾಡಲು ಸಂಚು ಹೂಡುತ್ತದೆ, ಆದರೆ ದನಗಳೆಲ್ಲಾ ಒಟ್ಟಾಗಿ ಒಗ್ಗಟ್ಟಿನಿಂದ ಬರಲು ಸಿಂಹ ಕಾಲ್ಕಿತ್ತಿತು ಎನ್ನುವ ಕಥೆ ಕೂಡಾ ಒಂದಿದೆ. ಬಹುಶಃ ಹೆಚ್ಚು ಜನರಿಗೆ ಇದು ತಿಳಿದಿಲ್ಲದೇ ಇರಬಹುದು ಕೂಡಾ.
ಆದರೆ ಈ ಕಥೆಯನ್ನು ನೆನಪಿಸುವಂತಹ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಕಾಡೆಮ್ಮಯೊಂದನ್ನು ಬೇಟೆಯಾಡಲು ಬಂದ ಸಿಂಹಕ್ಕೆ ಮತ್ತೊಂದು ಎಮ್ಮೆ ಹಗಲಿನಲ್ಲೇ ನಕ್ಷತ್ರಗಳನ್ನು ತೋರಿಸಿರುವ ವಿಚಿತ್ರ ಹಾಗೂ ಹಾಸ್ಯ ಎನಿಸುವ ವೀಡಿಯೋ ಒಂದು ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಇಂತಹ ಒಂದು ವೀಡಿಯೋವನ್ನು ಶೇರ್ ಮಾಡಿದ್ದು ಅವರು ವೀಡಿಯೋ ಶೀರ್ಷಿಕೆಯಲ್ಲಿ ಪ್ರಕೃತಿಯು ಬಗ್ಗೆ ಭವುಷ್ಯ ನುಡಿಯಲಾಗದು, ಸಿಂಹವು ಸ್ಪಿನ್ ಆಗಿ ಹೋಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಅವರು ಬರೆದ ಪದಗಳು ಅಕ್ಷರಶಃ ನಿಜ ಎಂದು ವೀಡಿಯೋ ನೋಡಿದಾಗ ತಿಳಿಯುತ್ತದೆ. ಎಮ್ಮೆಯೊಂದನ್ನು ಬೇಟೆಯಾಡಿ ಹಿಡಿದ ಸಿಂಹವು ಅದರ ಮೇಲೆ ಧಾ ಳಿ ಮಾಡುವಾಗಲೇ ಅದನ್ನು ನೋಡಿದ ಮತ್ತೊಂದು ಎಮ್ಮೆ ಎಷ್ಟು ಸಿಟ್ಟಿನಿಂದ ಅಲ್ಲಿಗೆ ಬರುತ್ತದೆ ಎಂದರೆ, ಅದು ಬಂದು ಸಿಂಹವನ್ನು ತನ್ನ ತಲೆ ಹಾಗೂ ಕೊಂಬಿನಿಂದ ಸಿಂಹದ ಹಿಂದಿನ ಕಾಲುಗಳನ್ನು ಮೇಲೆತ್ತಿ ಎಸೆದ ರಭಸಕ್ಕೆ ಸಿಂಹ ಗಾಳಿಯಲ್ಲಿ ಹಾರಿ ಸ್ಪಿನ್ ಗಳನ್ನು ಹೊಡೆದಿದೆ. ಅಷ್ಟಕ್ಕೇ ಸುಮ್ಮನಾಗದ ಕಾಡೆಮ್ಮೆ ಕೆಳಗೆ ಬಿದ್ದ ಸಿಂಹವನ್ನು ಮತ್ತೊಮ್ಮೆ ಎತ್ತಿ ಪಕ್ಕದಲ್ಲಿದ್ದ ಪೊದೆಯೊಂದರ ಮೇಲೆ ಎಸೆದಿದೆ.
Lion goes for a spin…
— Susanta Nanda (@susantananda3) November 22, 2020
Nature is so unpredictable pic.twitter.com/sSoTGuntuH
ನಿಜಕ್ಕೂ ಸಿಂಹದ ಗ್ರಹ ಗತಿ ಸರಿ ಇಲ್ಲಲಿಲ್ಲ ಎನಿಸುವಂತಿದೆ ಈ ದೃಶ್ಯ. ಕಾಡೆಮ್ಮೆಯ ಈ ವೀಡಿಯೋವನ್ನು 23 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಪ್ರತಿಕ್ರಿಯೆ ನೀಡಿದ ಟ್ವಿಟರ್ ಬಳಕೆದಾರರೊಬ್ಬರು ಇನ್ನು ಆ ಸಿಂಹ ಕೆಲವು ದಿನಗಳ ವರೆಗೆ ಡಯಟ್ ಮಾಡಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೆ ಕೆಲವರು ಸಿಂಹ ಒಂಟಿಯಾಗಿರುವುದರಿಂದ ಕಾಡೆಮ್ಮೆ ಧೈರ್ಯ ಮಾಡಿದೆ, ಅದೇ ಸಿಂಹ ಗುಂಪಾಗಿ ಬಂದಿದ್ದರೆ ಕಿಮೀ ದೂರ ಓಡುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಂದಿಬ್ಬರು ಸಿಂಹಕ್ಕೆ ಸವಾಲು ಎಸೆಯುವ ಕಾಡೆಮ್ಮೆ ಗಳು ಎಂದು ಮೆಚ್ಚುಗೆ ಸೂಚಿಸಿದ್ದಾರೆ.