2020 ತಂದ ಅದೃಷ್ಟ, ಬಿಲ್ ಗೇಟ್ಸ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತನಾದ ಎಲೆನ್ ಮಸ್ಕ್

ಟೆಸ್ಲಾದ ಮುಖ್ಯಸ್ಥ ಹಾಗೂ ಕೋಟ್ಯಾಧಿಪತಿ ಎಲೆನ್ ಮಸ್ಕ್ ಬಹಳ ಬೇಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿರುವ ಮೈಕ್ರೋಸಾಫ್ಟ್ ನ ದಿಗ್ಗಜ ಬಿಲ್ ಗೇಟ್ಸ್ ಅವರನ್ನು ಹಿಂದೆ ಹಾಕಿ ಆ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎನ್ನುವ ವಿಷಯ ಭಾರೀ ಸದ್ದು ಮಾಡುತ್ತಿತ್ತು. ಎಲ್ಲೆಲ್ಲೂ ಈ ವಿಷಯದ ಕುರಿತಾಗಿ ಸಾಕಷ್ಟು ಚರ್ಚೆಗಳು ಕೂಡಾ ನಡೆದಿತ್ತು. ಈಗ ಕೊನೆಗೆ ಅಂತಹ ದಿನ ಬಂದಿದ್ದಾಗಿದೆ‌. ಸೋಮವಾರದ ದಿನ ಇಂತಹುದೊಂದು ಊಹೆಗೆ ಸ್ಪಷ್ಟವಾದ ರೂಪ ಸಿಕ್ಕಿದೆ. ಏಕೆಂದರೆ ಈ ದಿನ ಎಲೆನ್ ಮಸ್ಕ್ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕೆ ವಿಶ್ವದ ಎರಡನೇ ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡು, ಇಡೀ ವಿಶ್ವದ ಗಮನವನ್ನು ಸೆಳೆದಿದ್ದಾರೆ ಹಾಗೂ ಇದೊಂದು ದೊಡ್ಡ ಸುದ್ದಿ ಕೂಡಾ ಆಗಿದೆ‌.

49 ವಯಸ್ಸಿನ ಎಲೆನ್ ಮಸ್ಕ್ ಅವರ ಸಂಪತ್ತು 7.2 ಬಿಲಿಯನ್ ಡಾಲರ್ ಗಳಿಂದ 127.9 ಬಿಲಿಯನ್ ಡಾಲರ್ ಗಳಿಗೆ ಹೆಚ್ಚಿದ್ದು ಇದು ಬಿಲ್ ಗೇಟ್ಸ್ ಅವರ ಸಂಪತ್ತಿಗಿಂತ ಅಧಿಕವಾಗಿದೆ. ಟೆಲ್ಸಾ ದ ಶೇರ್ ಗಳಲ್ಲಿ ಉಂಟಾದ ಮುಂಜಿಗಿತದ ಪರಿಣಾಮ ಎಲೆನ್ ಮಸ್ಕ್ ಅವರ ಸಂಪತ್ತಿನಲ್ಲಿ ಕೂಡಾ ದಿಢೀರ್ ಏರಿಕೆಯಾಗಿದೆ.
ನಾವು ಸರಿಯಾಗಿ ಗಮನಿಸಿದಾಗ ಎಲೆನ್ ಮಸ್ಕ್ ಅವರು 2020 ರಲ್ಲೇ ತಮ್ಮ ಸಂಪತ್ತಿಗೆ ನೂರು ಬಿಲಿಯನ್ ಡಾಲರ್ ಗಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದಾರೆ. ಬ್ಲೂಮ್ ಬರ್ಗ್ ಇಂಡೆಕ್ಸ್ ನ ಪ್ರಕಾರ ಇದೇ ವರ್ಷದ ಜನವರಿ ತಿಂಗಳಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯನ್ನು ಸಿದ್ಧಪಡಿಸಿದಾಗ ಅದರಲ್ಲಿ ಎಲೆನ್ ಮಸ್ಕ್ ಅವರಿಗೆ 35 ನೇ ಸ್ಥಾನವು ದಕ್ಕಿತ್ತು.

ಆದರೆ ನೋಡು ನೋಡುತ್ತಲೇ ಅವರ ಸಂಪತ್ತಿನ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದ ಹಿನ್ನೆಲೆಯಲ್ಲಿ ಜನವರಿಯಲ್ಲಿ 35 ನೇ ಸ್ಥಾನದಲ್ಲಿ ಇದ್ದ ಎಲೆನ್ ಮಸ್ಕ್ ನವೆಂಬರ್ ವೇಳೆಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಕೊರೊನಾ ದಿಂದ ವಿಶ್ವಕ್ಕೆ 2020 ಅಷ್ಟೊಂದು ಉತ್ತಮವಲ್ಲ ಎನಿಸಿದರೂ ಎಲೆನ್ ಅವರಿಗೆ ಮಾತ್ರ ಈ ವರ್ಷ ಅದೃಷ್ಟವನ್ನು ಅವರಿಗಾಗಿ ಹೊತ್ತು ತಂದಿದೆ. ಇನ್ನು ಪ್ರಸ್ತುತ ಅಮೆಜಾನ್ ನ ಜೆಫ್ ಬೆಜೋಸ್ ಅವರು 183 ಬಿಲಿಯನ್ ಡಾಲರ್ ಗಳ ಸಂಪತ್ತಿನ ಮಾಲಿಕತ್ವ ಹೊಂದಿ ವಿಶ್ವದ ಅತಿದೊಡ್ಡ ಅಥವಾ ನಂಬರ್ ಒನ್ ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಜೆಫ್ ಬೆಜೋಸ್ ನಂತರ ಎರಡನೇ ಸ್ಥಾನದಲ್ಲಿ ಈಗ 127.9 ಬಿಲಿಯನ್ ಡಾಲರ್ ಗಳ ಸಂಪತ್ತಿನೊಂದಿಗೆ ಎಲೆನ್ ಮಸ್ಕ್ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಇದ್ದ ಬಿಲ್ ಗೇಟ್ಸ್ ಇದೀಗ 127.7 ಬಿಲಿಯನ್ ಡಾಲರ್ ಗಳ ಸಂಪತ್ತಿನೊಂದಿಗೆ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಬರ್ನಾಲ್ಡ್ ಅರ್ನಾಲ್ಡ್ ಅವರು ವಿಶ್ವದ ನಾಲ್ಕನೇ ಅತಿದೊಡ್ಡ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅವರು ಒಟ್ಟು ಸಂಪತ್ತಿನ ಮೌಲ್ಯ 105 ಬಿಲಿಯನ್ ಡಾಲರ್ ಗಳಾಗಿವೆ. ಇನ್ನು ಇದೇ ಪಟ್ಟಿಯಲ್ಲಿ ವಿಶ್ವದ 5 ನೇ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿ 102 ಬಿಲಿಯನ್ ಡಾಲರ್ ಗಳ ಸಂಪತ್ತಿನೊಂದಿಗೆ ಮಾರ್ಕ್ಸ್ ಜುಕರ್ ಬರ್ಗ್ ಇದ್ದಾರೆ.

ಬಿಲ್ ಗೇಟ್ಸ್ ತನ್ನ ಸ್ಥಾನದಿಂದ ಕೆಳಗಿಳಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ನಂಬರ್ ಒನ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ 2017 ರಲ್ಲಿ ಅಮೆಜಾನ್ ನ ಸಂಸ್ಥಾಪಕ ಜೆಫ್ ಬೆಜೋಸ್ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಆಗ ಬಿಲ್ ಗೇಟ್ಸ್ ಎರಡನೇ ಸ್ಥಾನಕ್ಕೆ ಬಂದರು. ಈಗ ಎಲೆನ್ ಮಸ್ಕ್ ಅವರನ್ನು ಆ ಸ್ಥಾನದಿಂದ ಕೂಡಾ ಹಿಂದಿಕ್ಕಿರುವ ಕಾರಣ ಅವರು ಮೂರನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಬಿಲ್ ಗೇಟ್ಸ್ ಅವರ ಸಂಪತ್ತು ಕಡಿಮೆಯಾಗಲು ಪ್ರಮುಖವಾದ ಕಾರಣ ಕಳೆದ ಕೆಲವು ವರ್ಷಗಳಲ್ಲಿ ಅವರು ನೀಡಿದ ದೊಡ್ಡ ಮೊತ್ತದ ದೇಣಿಗೆಗಳು ಎನ್ನಲಾಗಿದೆ.