ಬಂಗಾರ ವನ್ನು ಖರೀದಿ ಮಾಡಲು ಸದಾವಕಾಶ; 8000 ರೂ ಗಳಷ್ಟು ಕಡಿಮೆಯಾದ ಚಿನ್ನದ ಮೌಲ್ಯ!
ಬಂಗಾರದ ಬೆಲೆ ಮತ್ತೊಮ್ಮೆ ಪ್ರತಿ 10 ಗ್ರಾಂ ಗೆ 50 ಸಾವಿರ ರೂಪಾಯಿಗಳಿಗಿಂತ ಕೆಳಗೆ ಇಳಿದಿದೆ.ಎಂಸಿಎಕ್ಸ್ ನಲ್ಲಿ ಚಿನ್ನದ ಡಿಸೆಂಬರ್ ನ ವಾಯಿದೆಯು 48,512 ರೂಪಾಯಿಗಳಿಗೆ ಮುಗಿದಿತ್ತು. ಅದರೆ ಇದರಲ್ಲಿ ಇನ್ನೂರು ರೂಪಾಯಿಗಳ ಹತ್ತಿರಕ್ಕೆ ಸ್ವಲ್ಪ ಏರಿದೆ ಎನ್ನಲಾಗಿದೆ. ನವೆಂಬರ್ ನಲ್ಲಿ ಬಂಗಾರದ ಬೆಲೆಯು 4% ರಷ್ಟು ಅಗ್ಗವಾಗಿತ್ತು ಎನ್ನಲಾಗಿದ್ದು, ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ 2.5 % ಮತ್ತು 3.5% ಇಳಿಕೆಯಾಗಿತ್ತು. ಬಂಗಾರದ ಬೆಲೆ ದಾಖಲೆ ಮಟ್ಟಕ್ಕೆ ಅಂದರೆ ಎಂಟು ಸಾವಿರ ರೂಪಾಯಿಗಳಷ್ಟು ಅಗ್ಗವಾಗಿತ್ತು. 7 ಆಗಸ್ಟ್ 2020 ರಂದು ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂ ಗೆ 51,19 ರೂಗಳಾಗಿದ್ದರೆ ೨೫ ಆಗಸ್ಟ್ ರಂದು ಇದು 48500 ರೂಪಾಯಿಗಳಾಗಿತ್ತು.
ಬುಲಿಯನ್ ವೆಬ್‌ಸೈಟ್ ಇಬ್ಜಾ ಡಾಟ್ ಕಾಮ್ ನೀಡಿರುವ ಮಾಹಿತಿಯ ಅನ್ವಯ ಇಂದು ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 44705 ರೂ ಇದ್ದು, ನಿನ್ನೆ ಇದು 10 ಗ್ರಾಂಗೆ 44824 ರೂ ಗಳಾಗಿತ್ತೆನ್ನಲಾಗಿದೆ. ಅಂದರೆ ಇಂದು ಬೆಲೆ 119 ರೂ. ಏರಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 130 ರೂಪಾಯಿ ಇಳಿಕೆ ಕಂಡು ಬಂದಿದೆ. ದೆಹಲಿ ಮಾತ್ರವೇ ಅಲ್ಲದೇ ಇತರೆ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಕೂಡಾ ಚಿನ್ನದ ಬೆಲೆ ಕುಸಿದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 46,200 ರೂ, ಚೆನ್ನೈನಲ್ಲಿ 46,400 ರೂ, ಕೋಲ್ಕತ್ತಾದಲ್ಲಿ 50,070 ರೂ. ಮತ್ತು ಮುಂಬೈನಲ್ಲಿ 10 ಗ್ರಾಂಗೆ 49,800 ರೂ.ಗಳಾಗಿದೆ.

ಆದರೆ ಬಂಗಾರದ ಬೆಲೆಗೆ ಹೋಲಿಕೆ ಮಾಡಿದರೆ ಬೆಳ್ಳಿಯ ಬೆಲೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ ಎನ್ನಲಾಗಿದೆ. ಬೆಳ್ಳಿಯ ಬೆಲೆ ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು, ಬುಲಿಯನ್ ವೆಬ್‌ಸೈಟ್ ಇಬ್ಜಾ ಡಾಟ್ ಕಾಮ್ ನೀಡಿರುವ ಮಾಹಿತಿಯ ಅನ್ವಯ ದೆಹಲಿಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 60,050 ರೂ. ಇದ್ದು, ಇದು ನಿನ್ನೆ 59,500 ರೂ. ಗಳಾಗಿತ್ತು. ಅಂದರೆ, ಬೆಳ್ಳಿಯ ಬೆಲೆಯಲ್ಲಿ ನಾವು 550 ರೂ.ಗಳು ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ. ಕೊರೊನಾ ಲಸಿಕೆಯ ಸುದ್ದಿ ಕೂಡಾ ಪರೋಕ್ಷವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏರಿಳಿತಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
ತಜ್ಞರ ಪ್ರಕಾರ ಇವುಗಳ ಬೆಲೆ ನಿರಂತರವಾಗಿ ಏರುವ ಸಾಧ್ಯತೆಗಳು ಇವೆ ಎನ್ನಲಾಗಿದೆ.ಕೊರೊನಾ ವ್ಯಾಕ್ಸಿನ್ ನ ಮೊದಲ ಹಂತದ ಯಶಸ್ಸಿನ ಸುದ್ದಿ ಹೊರಗೆ ಬಂದ ಮೇಲೆ ಹೂಡಿಕೆಗಳು ಹೆಚ್ಚಾಗಿವೆ, ಜಾಗತಿಕ ಮಟ್ಟದಲ್ಲಿ
ರಾಜಕೀಯ ಅ ಸ್ಥಿರತೆಯ ಪರಿಸ್ಥಿತಿ ಕೂಡಾ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಬೆಲೆಯು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ವ್ಯಾಪಾರ ಹಾಗೂ ಯು ದ್ಧ ದಂತಹ ಪರಿಸ್ಥಿತಿ ಕೂಡಾ ಇಲ್ಲದ ಕಾರಣ ಆತಂಕಗಳು ಕಡಿಮೆಯಾಗುತ್ತಿದ್ದು ಹೂಡಿಕೆ ಹೆಚ್ಚಾಗುತ್ತಿದ್ದು ಚಿನ್ನದ ಬೆಲೆ ಕೂಡಾ ಏರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನಬಹುದಾಗಿದೆ.

ಕಳೆದ 6 ತಿಂಗಳಲ್ಲಿ ನವೆಂಬರ್‌ನಲ್ಲಿ ಚಿನ್ನದ ಬೆಲೆ ಹೆಚ್ಚು ಕುಸಿದಿದೆ. ಜೂನ್‌ನಲ್ಲಿ, ಚಿನ್ನವು ಸುಮಾರು 5% ಲಾಭವನ್ನು ನೀಡಿದ್ದರೆ, ಅದರ ಮುಂದಿನ ತಿಂಗಳಲ್ಲಿ, ಅಂದರೆ ಜುಲೈನಲ್ಲಿ ಚಿನ್ನದ ಬೆಲೆ 9% ಹೆಚ್ಚಾಗಿತ್ತು. ಆದರೆ ಇದರ ನಂತರ, ಚಿನ್ನದ ಬೆಲೆಯಲ್ಲಿ ನಿರಂತರವಾದ ಸೌಮ್ಯತೆಯೊಂದು ಕಂಡುಬಂದಿದೆ. ಆಗಸ್ಟ್ ನಲ್ಲಿ ಚಿನ್ನವನ್ನು 3% ವರೆಗೆ ಕೆಳದೆ ಬಂದರೆ ಇದು ಮತ್ತೊಮ್ಮೆ ನವೆಂಬರ್ ನಲ್ಲಿ 4% ರಷ್ಟು ಅಗ್ಗವಾಯಿದ್ದನ್ನು ನಾವು ಗಮನಿಸಬಹುದಾಗಿದೆ.