10 ಕೋಟಿಯ ‘ಚೀಯರ್ ಲೀಡರ್’ ಎಂದು ಗೇಲಿ ಮಾಡಿದ ಸೆಹ್ವಾಗ್ ಗೆ ತಕ್ಕ ಉತ್ತರ ಕೊಟ್ಟ ಗ್ಲೇನ್ ಮ್ಯಾಕ್ಸ್’ವೆಲ್!
ಪ್ರತಿ ಸಲದಂತೆ ಈ ಬಾರಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಈ ತಂಡದ ದುಬಾರಿ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಸಹ ತಮ್ಮ ಒಳ್ಳೆಯ ಪ್ರದರ್ಶನವನ್ನು ನೀಡಲಿಲ್ಲ. ಇದೇ ಕಾರಣಕ್ಕಾಗಿ ವೀರೇಂದ್ರ ಸೆಹ್ವಾಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈನ್ ಮ್ಯಾಕ್ಸ್ವೆಲ್ ಅವರ ಕಾಲೆಳೆದಿದ್ದರು. ಗ್ಲೆನ್ ಮ್ಯಾಕ್ಸ್ವೆಲ್ ಅವರ ಕಳಪೆ ಪ್ರದರ್ಶನದಿಂದಾಗಿ ವೀರೇಂದ್ರ ಸೆಹ್ವಾಗ್ ಅವರನ್ನು 10 ಕೋಟಿ ರೂಪಾಯಿಗಳ ಚಿಯರ್ ಲೀಡರ್ ಎಂದು ತಮಾಷೆ ಮಾಡಿದ್ದರು.
ವೀರೇಂದ್ರ ಸೆಹ್ವಾಗ್ ಅವರು ಮಾಡಿದ ಈ ಕಮೆಂಟ್ ಬಗ್ಗೆ ಗ್ಲೆನ್ ಮ್ಯಾಕ್ಸ್ವೆಲ್ ಅವರು ಸೆಹ್ವಾಗ್ ಅವರಿಗೆ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳಲ್ಲಿ ಕೇಳಿದ ಪ್ರಶ್ನೆಗೆ ಮ್ಯಾಕ್ಸ್ವೆಲ್ ಅವರು ಈ ರೀತಿ ಉತ್ತರ ನೀಡಿದ್ದಾರೆ. ಸೆಹ್ವಾಗ್ ಅವರು ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಇರುವುದಕ್ಕಾಗಿ ಈ ರೀತಿಯ ಕಾಮೆಂಟ್ಗಳನ್ನು ಮಾಡುತ್ತಿರುತ್ತಾರೆ. ಮತ್ತು ವೀರೇಂದ್ರ ಸೆಹ್ವಾಗ್ ಅವರು ಯಾವತ್ತೂ ನನ್ನನ್ನು ಇಷ್ಟಪಡುವುದಿಲ್ಲ.
ಮ್ಯಾಕ್ಸ್ವೆಲ್ ಅವರು ಮುಂದೆ ಹೀಗೆ ಹೇಳುತ್ತಾರೆ, ಅವರು ಮಾಡಿದ ನನ್ನ ಬಗೆಗಿನ ಕಮೆಂಟ್ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ವೀರು ಅವರು ಮಾಡಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಪಂಜಾಬ್ ತಂಡದ ಮೆಂಟರ್ ಇದ್ದಾಗಲೂ ಇದೇ ರೀತಿಯ ಚೇಷ್ಟೆಗಳನ್ನು ಮಾಡಿದ್ದಾರೆ. ಅವರು ನನ್ನನ್ನು ಇಷ್ಟಪಡುವುದಿಲ್ಲ ಹಾಗಾಗಿ ಈ ರೀತಿಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅವರಿಗೆ ಯಾವುದು ಸರಿ ಅನಿಸುತ್ತದೆ ಅದನ್ನು ಅವರು ಮಾಡಲಿ. ಅದರಿಂದ ನನಗೇನು ವ್ಯತ್ಯಾಸವಾಗುವುದಿಲ್ಲ. ಯಾವಾಗಲೂ ಮೀಡಿಯಾದಲ್ಲಿ ಸುದ್ದಿಗಳನ್ನು ಮಾಡುವ ಸಲುವಾಗಿ ಹೀಗೆ ಮಾಡುತ್ತಿರುತ್ತಾರೆ. ಆದರೆ ನಾನು ಇಂಥವುಗಳೆಲ್ಲವನ್ನು ಮೆಟ್ಟಿ ಮುಂದೆ ಸಾಗುವ ವ್ಯಕ್ತಿಯಾಗಿದ್ದೇನೆ, ಎಂದು ಮ್ಯಾಕ್ಸ್ವೆಲ್ ಹೇಳುತ್ತಾರೆ.

ವೀರೇಂದ್ರ ಸೆಹ್ವಾಗ್ ಅವರು ಫೇಸ್ಬುಕ್ ನ ವಿಡಿಯೋ ಒಂದರಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು 10 ಕೋಟಿ ರೂಪಾಯಿಗಳ ಚಿಯರ್ ಲೀಡರ್ ಮತ್ತು ಕಾಮ್ ಚೋರ್ (ಕೆಲಸದ ಜವಾಬ್ದಾರಿಯಿಂದ ಓಡಿಹೋಗುವವ) ಎಂದು ಉಪಾಧಿಯನ್ನು ಕೊಟ್ಟಿದ್ದರು. ಈ 10 ಕೋಟಿ ರೂಪಾಯಿಗಳ ಚಿಯರ್ ಲೀಡರ್ ಪಂಜಾಬ್ ತಂಡಕ್ಕೆ ತುಂಬಾ ದುಬಾರಿಯಾಗಿ ಪರಿಣಮಿಸಿದರು. ಕಳೆದ ಕೆಲವು ಸೀಸನ್ ಗಳಲ್ಲಿ ಮ್ಯಾಕ್ಸ್ವೆಲ್ ಅವರ ರೆಕಾರ್ಡ್ ಕಾಮ್ ಚೋರ್ ರೀತಿಯದ್ದಾಗಿದೆ. ಈ ಸೀಸನ್ ನಲ್ಲಂತೂ ಹಿಂದಿನ ರೆಕಾರ್ಡ್ ನ್ನೆ ಮುರಿದರು ಎಂದು ಹೀಯಾಳಿಸಿದ್ದಾರೆ.
2020 ರ ಈ ಸೀಸನ್ ನೋಡಲಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ರೆಕಾರ್ಡ್ ತುಂಬಾ ಕೆಳ ಮಟ್ಟದ್ದಾಗಿದೆ. ಮ್ಯಾಕ್ಸ್ವೆಲ್ ಅವರು ಆಡಿದ ಒಟ್ಟು 13 ಮ್ಯಾಚುಗಳಲ್ಲಿ 15.42 ರ ಸರಾಸರಿಯಲ್ಲಿ ಬರೀ 108 ರನ್ಗಳನ್ನು ಮಾತ್ರ ಕಲೆಹಾಕಿದ್ದಾರೆ. ಇನ್ನೊಂದು ಕಳಪೆ ಗುಣವೆಂದರೆ ಪೂರ್ತಿ ಈ ಸೀಸನ್ ನಲ್ಲಿ ಒಂದು ಸಿಕ್ಸ್ ಸಹಿತ ಅವರಿಗೆ ದಾಖಲಿಸಲಾಗಿಲ್ಲ.
ಈಗ ಗ್ಲೆನ್ ಮ್ಯಾಕ್ಸ್ವೆಲ್ ಅವರು ಭಾರತ ತಂಡದ ವಿರುದ್ಧ ತಮ್ಮ ಶಕ್ತಿಯನ್ನು ತೋರಿಸಲು ತಯಾರಾಗಿದ್ದಾರೆ. ತಮ್ಮದೇ ಆದ ನಾಡಿನಲ್ಲಿ ಮ್ಯಾಕ್ಸ್ವೆಲ್ ಅವರು ಚೆನ್ನಾಗಿ ಆಡಿದ ರೆಕಾರ್ಡ್ ಇದೆ. ಈ ಸಲ ಭಾರತದ ವಿರುದ್ಧ ಹೇಗೆ ಆಡುತ್ತಾರೆ ಎಂಬುದು ಅವರ ಅಭಿಮಾನಿಗಳಿಗೆ ಪ್ರಶ್ನೆಯಾಗಿದೆ.