ಕ್ಯೂಟಿ ಪೈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಡಾನ್ಸ್ ಪ್ರಿಯರ ಹೃದಯಕ್ಕೆ ಮತ್ತೊಮ್ಮೆ ಲಗ್ಗೆಯಿಟ್ಟ ಧನಾಶ್ರೀ ವರ್ಮಾ! ನೋಡಿ ಈ Video
ದೇಶದಲ್ಲಿ ಪ್ರಸ್ತುತ ಸೋಶಿಯಲ್ ಮೀಡಿಯಾ ಗಳಲ್ಲಿ ತನ್ನ ಡಾನ್ಸ್ ಮೂಲಕವೇ ಸಂಚಲನವನ್ನು ಸೃಷ್ಟಿಸುತ್ತಿರುವ, ಸೋಷಿಯಲ್ ಮೀಡಿಯಾಗಳ ಡಾನ್ಸಿಂಗ್ ಸೆನ್ಸೇಷನ್ ಯಾರು ಎನ್ನುವುದಾದರೆ ಅದು ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಶ್ರೀ ವರ್ಮಾ. ಈಕೆಯ ಡ್ಯಾನ್ಸ್ ಗಳೆಂದರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾ ದಲ್ಲಿ ಡಾನ್ಸ್ ಪ್ರಿಯರ ಕಣ್ಣಿಗೆ ಅದೊಂದು ಹಬ್ಬವಾಗಿದೆ. ಧನಾಶ್ರೀ ವರ್ಮಾ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯಂತೆ ಬಂದು ಚಂ ಡ ಮಾರುತವನ್ನು ಸೃಷ್ಟಿಸುವಂತೆ ವೈರಲ್ ಆಗುತ್ತಿರುತ್ತವೆ. ಧನಾಶ್ರೀ ಅವರು ವೃತ್ತಿಯಿಂದ ಡಾಕ್ಟರ್ ಆಗಿದ್ದರೂ ಕೂಡಾ ಪ್ರಸ್ತುತ ಆಕೆ ಹೆಸರಾಗಿರುವುದು ಮತ್ತು ಜನಪ್ರಿಯತೆ ಪಡೆದಿರುವುದು ಮಾತ್ರ ಸುಪ್ರಸಿದ್ಧ ಯೂಟ್ಯೂಬರ್, ಡಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿ.
ಧನಶ್ರೀ ವರ್ಮ ಅವರ ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ ಲಕ್ಷ-ಲಕ್ಷ ವೀಕ್ಷಣೆಯನ್ನು ಪಡೆಯುತ್ತಾ ವೈರಲ್ ಆಗುತ್ತಿವೆ. ಪ್ರಸ್ತುತ ಬೇರಾವ ಡಾನ್ಸರ್ ಗಳಿಗೂ ಇಲ್ಲದಷ್ಟು ಕ್ರೇಜ್ ಧನಶ್ರೀ ವರ್ಮ ಅವರಿಗೆ ಇರುವುದು ವಿಶೇಷ. ಮತ್ತೊಂದು ಹೇಳಲೇಬೇಕಾದ ವಿಷಯವೇನೆಂದರೆ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಜೊತೆ ನಿಶ್ಚಿತಾರ್ಥ ಆದ ನಂತರ ಸೋಶಿಯಲ್ ಮೀಡಿಯಾ ಗಳಲ್ಲಿ ಧನಶ್ರೀ ಅವರ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ, ಅವರ ವೀಡಿಯೋಗಳ ಕ್ರೇಜ್ ಕೂಡಾ ಬೆಳೆಯುತ್ತಿದೆ.
4 ದಿನಗಳ ಹಿಂದೆ ಧನಶ್ರೀ ವರ್ಮ ಅವರು ಹೊಸ ಡಾನ್ಸ್ ವೀಡಿಯೋ ಒಂದನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹೊಸ ಡಾನ್ಸ್ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ನಾಲ್ಕೇ ದಿನಗಳಲ್ಲಿ 5 ಲಕ್ಷ 94 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಇನ್ಸ್ಟಾಗ್ರಾಮ್ ನಲ್ಲಿ ಇದೇ ವಿಡಿಯೋವನ್ನು 9 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಸಾವಿರಾರು ಜನ ಅಭಿಮಾನಿಗಳು ಹಾಗೂ ಡಾನ್ಸ್ ಪ್ರಿಯರು ಈ ವಿಡಿಯೋವನ್ನು ಮೆಚ್ಚಿ ಪ್ರತಿಕ್ರಿಯೆಗಳ ಪ್ರವಾಹವನ್ನು ಹರಿಸುತ್ತಿದ್ದಾರೆ.
ಬಾಲಿವುಡ್ ನ ಜನಪ್ರಿಯ ಸಿನಿಮಾ ಎ ದಿಲ್ ಹೈ ಮುಷ್ಕಿಲ್ ನ ಸೂಪರ್ ಹಿಟ್ ಹಾಡು ಕ್ಯೂಟಿಪೈ ಗೆ ಈ ಬಾರಿ ಧನಾಶ್ರೀ ವರ್ಮ ಮತ್ತು ಇನ್ನಿಬ್ಬರು ಡಾನ್ಸರ್ ಗಳು ಜೊತೆಯಾಗಿ ಸೇರಿ ಭರ್ಜರಿ ಸ್ಟೆಪ್ ಗಳನ್ನು ಹಾಕಿದ್ದಾರೆ. ಈ ಹಾಡಿಗೆ ರೋಹಿತ್ ಜೆಟ್ವಾಣಿ ನೃತ್ಯ ಸಂಯೋಜನೆಯನ್ನು ಮಾಡಿದ್ದು, ಧನಾಶ್ರೀ ಅವರ ಜೊತೆ ಡಾನ್ಸ್ ಮಾಡಿರುವ ಇಬ್ಬರು ಜಬರ್ದಸ್ತ್ ಡಾನ್ಸರ್ ಗಳಲ್ಲಿ ರೋಹಿತ್ ಕೂಡಾ ಒಬ್ಬರಾಗಿದ್ದು, ಇವರ ಜೊತೆ ಕಾಣುವ ಮತ್ತೊಬ್ಬ ಯುವ ಡಾನ್ಸರ್ ಹೆಸರು ಜಿಗರ್ ಟಕ್ಕರ್. ಮೂವರು ಸೇರಿ ಕ್ಯೂಟಿಪೈ ಹಾಡಿಗೆ ಹಾಕಿರುವ ಹೆಜ್ಜೆಗಳು ಡಾನ್ಸ್ ಪ್ರಿಯರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ವಿಡಿಯೋ ನೋಡಿ
ವೈರಲ್ ವಿಡಿಯೋ ನೋಡಿದ ಡಾನ್ಸ್ ಅಭಿಮಾನಿಗಳು ಧನಾಶ್ರೀ ಅವರನ್ನು ನೀವು ಬೆಸ್ಟ್ ಡ್ಯಾನ್ಸರ್ ಎಂದು ಹೊಗಳಿದ್ದಾರೆ.ಇನ್ನು ಕೆಲವರು ತಮ್ಮ ಪ್ರತಿಕ್ರಿಯೆಗಳಲ್ಲಿ ಹಾಡು ಮತ್ತು ಡ್ಯಾನ್ಸ್ ಎರಡೂ ಕೂಡ ಬಹಳ ಅದ್ಭುತವಾಗಿ ಮೂಡಿ ಬಂದಿದೆಯೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ.ಪಡಿಸಿದ್ದಾರೆ. ಧನಾಶ್ರೀ ಅವರು ಈ ವೀಡಿಯೋದಲ್ಲಿ ಟ್ರೆಡಿಷಿನಲ್ ಮತ್ತು ಮಾಡ್ರನ್ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ವಿಡಿಯೋ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನವನ್ನು ಸೃಷ್ಟಿಸಲು ಸಿದ್ಧವಾಗಿದ್ದು, ಅಭಿಮಾನಿಗಳು ಅನೇಕರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.