ಕೊರೊನಾದ ಮೇಲೆ ಔಷಧ!!! ಮೂರನೆಯ ಹಂತದ ಪ್ರಯೋಗ ಯಶಸ್ವಿ!!!

ನ್ಯೂಯಾರ್ಕ್: ಮಹಾಮಾರಿ ಕೊರೊನಾದ ಮೇಲೆ ಮದ್ದು ಹುಡುಕುವ ಕೆಲಸ ಜಗತ್ತಿನಾದ್ಯಂತ ಅಹೋರಾತ್ರಿ ಎಡಬಿಡದೆ ನಡದೇ ಇದೆ. ಇದರಲ್ಲಿ ಅನೇಕ ದೇಶಗಳು ಒಂದುಗೂಡಿ ಸಂಯುಕ್ತವಾಗಿಯೂ ಸಂಶೋಧನೆ ಮಾಡುತ್ತಿದ್ದಾರೆ. Gilead Science ಈ ಅಮೆರಿಕೆಯ ಕಂಪನಿ ಕೊರೊನಾ ವಿಷಾಣುವಿನ ಮೇಲೆ ಲಸಿಕೆಯನ್ನು ಶೋಧಿಸಿದ್ದೇವೆ ಎನ್ನುವ ದಾವೆ ಮಾಡಿದ್ದಾರೆ. ಈ ಕಂಪನಿಯ
Remdesivir ಔಷಧ ಕೊರೊನಾದ ಮೇಲೆ ಪ್ರಭಾವ ಬೀರುತ್ತದೆ ಎಂದು ಕಂಪನಿಯ ವತಿಯಿಂದ ದಾವೆ ಮಾಡಲಾಗಿದೆ. ಆದ್ದರಿಂದ ಈ ಔಷಧದ ಮೂರನೇಯ ಹಂತದ ಪರೀಕ್ಷೆ ಯಶಸ್ವಿಯಾಗಿದೆ ಅನ್ನುವ ಮಾತಿದೆ.

Remdesivir ನ ವಿಟ್ರೊ(ಟೆಸ್ಟ್ ಟ್ಯೂಬ್) ಮತ್ತು vivo (ಶರೀರದ ಮೇಲೆ) ಈ ಪ್ರಯೋಗ ಪ್ರಾಣಿಗಳ ಮೇಲೆ ಮಾಡಲಾಗಿದೆ. ಪ್ರಾಣಿಗಳಲ್ಲಿ MERS ಮತ್ತು SARS ಮೇಲೆ ಅವುಗಳ ಪ್ರಯೋಗ ಮಾಡಿದ್ದಾಗಿದೆ.
ಕೊರೊನಾ ವೈರಸ್ ಸಹಿತ ಇದೆ ಸಮೂಹದ ವೈರಸ್ ಆಗಿದೆ ಎಂಬುದು ಸಿದ್ಧವಾಗಿದೆ. ಆದ್ದರಿಂದ ಈ ಪ್ರಯೋಗಗಳಿಂದ ಧನಾತ್ಮಕ ಅಂಶ ಹೊರಬಂದದ್ದು ಸಮಾಧಾನಕರವಾಗಿದೆ.

ಈ ಔಷಧ compassionate-use ಸಲುವಾಗಿಯೂ ಕಲಿಸುವ ಸಾಧ್ಯತೆಗಳಿವೆ. ಮದ್ದಿಲ್ಲದ ರೋಗಕ್ಕೆ ಡಾಕ್ಟರ್ ಗಳು ಈ ಪದ್ಧತಿಯ ಉಪಚಾರವನ್ನು ಮಾಡುತ್ತಾರೆ. ಇಂಥ ಔಷಧ ಪೂರ್ಣ ಪರೀಕ್ಷೆ ಮಾಡದೇನೆ ಹಾಗೆಯೇ ತುರ್ತು ಸಮಯದಲ್ಲಿ ಉಪಯೋಗಿಸಲು ಬರುತ್ತದೆ.

ಅಮೆರಿಕೆಯ ಅನ್ನ ಮತ್ತು ಔಷಧಿ ವಿಭಾಗವು ಈ ಔಷಧಿಗೆ orphan drug ದರ್ಜೆಯನ್ನು ನೀಡಿದೆ. ಯಾವ ಔಷಧಿಯಲ್ಲಿ ರೋಗದ ಮೇಲೆ ಉಪಚಾರ ಮಾಡುವ ಕ್ಷಮತೆ ಇರುತ್ತದೆ ಅಂಥ ಔಷಧಿಗಳ ಉತ್ಪಾದನೆಗಾಗಿ ಸರಕಾರದ ಸಹಾಯದ ಅವಶ್ಯಕತೆ ಇರುತ್ತದೆಯೋ ಅಂಥ ಔಷಧಿಗಳಿಗೆ ಈ ದರ್ಜೆಯನ್ನು ನೀಡಲಾಗುತ್ತದೆ. ಇದರಿಂದ ಕರದಲ್ಲಿ ಸೂಟ್ ಬಿಡಲಾಗುತ್ತದೆ ಹಾಗೆಯೇ ಕಂಪನಿಗೆ ಕೆಲವೊಂದು ಸವಲತ್ತುಗಳನ್ನು ನೀಡಲಾಗುತ್ತದೆ.

ಆದ್ದರಿಂದಲೇ ಕಂಪನಿಯ ಔಷಧೀಯ ಕಡೆಗೆ ಸಂಪೂರ್ಣ ಜಗತ್ತಿನ ದೃಷ್ಟಿ ನೆಟ್ಟಿದೆ.