ಈ ಒಂದು ಮರ ನಮ್ಮ ಅನೇಕ ರೋಗಗಳನ್ನು ಬೇರು ಸಹಿತ ಕಿತ್ತೊಗೆಯುವದು. ನೋಡಿ ಈ ಮರದ ಆಶ್ಚರ್ಯಕಾರಕ ಲಾಭಗಳು.

ನಿಸರ್ಗ ನಮಗೆ ಎಲ್ಲವನ್ನು ಕೊಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ವಿವಿಧ ವನೌಷಧಿಗಳನ್ನು ಸಹಿತ ಕೊಟ್ಟಿದೆ. ಅದರಲ್ಲಿ ಮತ್ತಿ ಮರ ಅಥವಾ ಅರ್ಜುನ ಮರವೆಂದು ಅಂತಲೂ ಕರೆಯುವ ಈ ಗಿಡದ ತೊಗಟೆ ಒಂದು ಪ್ರಕಾರದ ಆಯುರ್ವೇದ ಔಷಧಿಯಾಗಿದ್ದು ಇದರ ಉಪಯೋಗ ವಿವಿಧ ಪ್ರಕಾರದ ರೋಗಗಳನ್ನು ದೂರ ಮಾಡಲು ಮತ್ತು ಕಡಿಮೆ ಮಾಡಲು ಉಪಯೋಗ ಮಾಡಲಾಗುತ್ತದೆ. ವಾಸ್ತವಿಕವಾಗಿ ಮತ್ತಿ ಅಥವಾ ಅರ್ಜುನ ಒಂದು ಮರವಾಗಿದ್ದು ಇದರ ಎಲೆಗಳು ಪೆರುವಿನ ಮರದ ಎಲೆಗಳಿಗಿಂತ ಆಕಾರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ.

ವೈಜ್ಞಾನಿಕ ಭಾಷೆಯಲ್ಲಿ ಇದಕ್ಕೆ ಟರ್ಮಿನೆಲಿಯಾ ಅರ್ಜುನ ಎಂದು ಕರೆಯುತ್ತಾರೆ. ಇದು ಭಾರತದ ಬಿಹಾರ ಮಧ್ಯಪ್ರದೇಶ ಹಾಗುವ ಹಿಮಾಲಯದ ಕೆಳಗಡೆ ಕಂಡುಬರುತ್ತದೆ. ಈ ಮರದಲ್ಲಿರುವ ಅನೇಕ ಪೋಷಕ ಘಟಕಗಳು ಮರವನ್ನು ವಿಶೇಷವಾಗಿಸುತ್ತದೆ. ಈ ಮರದ ಲಾಭಕರ ಗುಣಗಳ ಬಗ್ಗೆ ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ ಆದ್ದರಿಂದ, ಇಂದಿನ ಈ ಲೇಖನದಲ್ಲಿ ಈ ಮತ್ತಿ ಮರದ ಲಾಭಗಳ ಬಗ್ಗೆ ತಿಳಿದುಕೊಳ್ಳುವ.

ಮತ್ತಿ ಮರದ ತೊಗಟೆಯು ಹೊರಗಿನಿಂದ ಬೆಳ್ಳಗೆ ಮತ್ತು ಒಳಗಿನಿಂದ ನಯವಾಗಿ, ದಪ್ಪ ಹಾಗೂ ತಿಲಿಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿರುತ್ತದೆ.

ಇದರ ತೊಗಟೆಯಲ್ಲಿ ಬೀಟಾ- ಸಿಟೋಸ್ಟೆರಾಲ್, ಎಲಿಸಿಕ್ ಎಸಿಡ್, ಟ್ರಾಯಹೈಡ್ರಾಕ್ಸಿ ಟ್ರಾಯ್ ಟರ್ಪೆನ್, ಮೋನೋ ಕಾರ್ಬೋ ಕ್ಖೀಲಿಕ್ ಎಸಿಡ್, ಆರ್ಗಾನಿಕ್ ಎಸಿಡ್ ದಂತಹ ಘಟಕಗಳಿವೆ. ಇವುಗಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಅಂತಹ ಶಕ್ತಿ ಇದೆ. ಆದರೆ ಇವುಗಳಿಂದ ಕೆಲವು ಹಾನಿಯು ಸಹಿತ ಇದೆ. ಆದ್ದರಿಂದ ಇವುಗಳ ಕಡೆಗೆ ದುರ್ಲಕ್ಷ್ಯ ಮಾಡುವುದರಿಂದ ದೇಹಕ್ಕೆ ಹಾನಿ ಆಗುವುದು. ಆದ್ದರಿಂದ ಮತ್ತಿ ಮರದ ಲಾಭಗಳು ಹಾಗೂ ಹಾನಿಯ ಬಗ್ಗೆಯೂ ಇಲ್ಲಿ ತಿಳಿದುಕೊಳ್ಳುವ.

ಮತ್ತಿ ಮರದ ಲಾಭಗಳು:- ಈ ಮರದ ಅನೇಕ ಲಾಭಗಳಿವೆ. ಆಯುರ್ವೇದ ಔಷಧಿಗಳನ್ನು ತಯಾರಿಸಲು ಈ ಮರದ ತೊಗಟೆಯನ್ನು ಉಪಯೋಗಿಸುತ್ತಾರೆ.

ಹೃದಯಕ್ಕೆ ಲಾಭದಾಯಕ:- ಈ ಮರದ ತೊಗಟೆಯು ಹೃದಯಕ್ಕೆ ನಿರೋಗಿಯಾಗಿಡಲು ಸಹಾಯಕಾರಿಯಾಗಿದೆ. ಈ ಮರದ ತೊಗಟೆಯ ಸೇವನೆಯಿಂದ ದೇಹದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಕೆಲವು ದಿನಗಳವರೆಗೆ ಸೇವನೆ ಮಾಡುವುದರಿಂದ ಇದರ ಲಾಭ ಕಂಡು ಬರುತ್ತವೆ.

ಬಾಯಿಯ ಅಲ್ಸರ್ ಸಲುವಾಗಿ:- ಅರ್ಜುನ ಮರದ ತೊಗಟೆಯು ಬಾಯಿಯ ಅಲ್ಸರ್ ನ್ನು ದೂರಮಾಡಲು ಪರಿಣಾಮಕಾರಿಯಾದ ಔಷಧಿಯಾಗಿದೆ. ಇದರ ತೊಗಟೆಯನ್ನು ಕುಟ್ಟಿ ಪುಡಿ ಮಾಡಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕೂಡಿಸಿ ತಯಾರಿಸಿದ ಮಿಶ್ರಣವನ್ನು ಕೆಲವು ದಿವಸಗಳವರೆಗೆ ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆ ದೂರವಾಗುವುದು.

ಹೊಟ್ಟೆನೋವಿನಿಂದ ಮುಕ್ತತೆ:- ಅರ್ಜುನ ಮರದ ತೊಗಟೆ ಉದರಕ್ಕೆ ಸಂಬಂಧಿಸಿದ ರೋಗಗಳನ್ನು ದೂರ ಮಾಡಲು ಯಶಸ್ವಿಯಾದ ಔಷಧಿಯಾಗಿದೆ. ವ್ಯಕ್ತಿಗೆ ಹೊಟ್ಟೆನೋವು ಇದ್ದರೆ ಅರ್ಜುನ ಮರದ ತೊಗಟೆಯಲ್ಲಿ ಹುರಿದ ಇಂಗು ಮತ್ತು ಕಪ್ಪು ಉಪ್ಪನ್ನು ಮಿಶ್ರಣ ಮಾಡಿ ದಿನಕ್ಕೆ ಎರಡು ಸಲ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುವುದು.

ಚರ್ಮಕ್ಕಾಗಿ ಉಪಯುಕ್ತ:- ಅರ್ಜುನ ಮರದ ತೊಗಟೆ ಯಾವುದೇ ಒಂದು ವರದಾನವೇ ಸರಿ. ಈ ಮರದ ತೊಗಟೆಯಿಂದ ಚರ್ಮವು ಕಾಂತಿಯುತ ಹಾಗೂ ನಯವಾಗಲು ಸಹಾಯಕಾರಿಯಾಗುತ್ತದೆ. ಇದಕ್ಕಾಗಿ ತೊಗಟೆಯನ್ನು ಪುಡಿ ಮಾಡಿ ಅದರಲ್ಲಿ ಬಾದಾಮಿಯ ತೈಲ, ಅರಿಶಿಣ ಮತ್ತು ಕರ್ಪೂರವನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿಕೊಳ್ಳಬೇಕು. ನಂತರ ಅದು ಒಣಗಿದ ಮೇಲೆ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದರಿಂದ ಮುಖವು ಸ್ವಚ್ಛವಾಗುವುದರೊಂದಿಗೆ ಕಾಂತಿಯುತವಾಗಿ ಹೊಳೆಯುವುದು.

ಅಡ್ಡ ಪರಿಣಾಮಗಳು

ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದು.

ಅರ್ಜುನ ಮರದ ತೊಗಟೆಯಲ್ಲಿ ಟ್ಯಾನಿನ್, ಪೊಟ್ಯಾಶಿಯಂ, ಮ್ಯಾಗ್ನಿಷಿಯಂ, ಅರ್ಜುನಿಕ್ ಎಸಿಡ್ ಈ ರೀತಿಯ ಅನೇಕ ಘಟಕಗಳು ಇವೆ. ಇವು ದೇಹದಲ್ಲಿಯ ರಕ್ತದ ಒತ್ತಡವನ್ನು ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿರ್ಧರಿಸುತ್ತವೆ. ಒಂದು ವೇಳೆ ಮೊದಲಿಂದಲೇ ಸಕ್ಕರೆ ಕಾಯಿಲೆ ಇದ್ದರೆ ಡಾಕ್ಟರ್ ಮಾರ್ಗದರ್ಶನದಲ್ಲಿ ಇದನ್ನು ಸೇವಿಸಬೇಕು. ಇದರ ಅಧಿಕ ಪ್ರಮಾಣದ ಸೇವನೆಯು ದೇಹದಲ್ಲಿಯ ಸಕ್ಕರೆಯ ಮಟ್ಟವನ್ನು ಗಮನಾರ್ಹ ರೀತಿಯಲ್ಲಿ ಕಡಿಮೆ ಮಾಡುತ್ತದೆ.

ಎಲುಬು ಮತ್ತು ಸೊಂಟ ನೋವು:- ಇದರ ಅತಿಯಾದ ಸೇವನೆಯು ಕೆಲವೊಮ್ಮೆ ದೊಡ್ಡ ತಪ್ಪಿನಲ್ಲಿ ರೂಪಾಂತರವಾಗುತ್ತದೆ. ಇದರ ಸೇವನೆ ಶರೀರದ ತೂಕವನ್ನು ಕಡಿಮೆಮಾಡಲು ಉಪಯೋಗವಾಗುತ್ತದೆ. ಆದರೆ ಇದು ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ದೇಹಕ್ಕೆ ಹಾನಿಯನ್ನು ನೀಡುತ್ತದೆ. ಇದು ಎಲುಬುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಬೆನ್ನುಹುರಿಗೆ ಹಾನಿಯನ್ನು ಮುಟ್ಟಿಸುತ್ತದೆ.

ಗರ್ಭದಲ್ಲಿರುವ ಮಗುವಿಗೆ ಹಾನಿ:- ಇಲ್ಲಿಯವರೆಗೆ ಅರ್ಜುನ ಮರದ ತೊಗಟೆಯಿಂದ ಮಹಿಳೆಯರಿಗೆ ಹಾನಿಯಾಗುವ ಯಾವುದೇ ರೀತಿಯ ನಿಷ್ಪನ್ನಗಳು ಕಂಡುಬಂದಿಲ್ಲ. ಆದರೂ ಗರ್ಭಾವಸ್ಥೆಯಲ್ಲಿ ಇದನ್ನು ಉಪಯೋಗಿಸುವುದು ಸರಿಯಲ್ಲ. ಯಾಕೆಂದರೆ ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹವು ವಿವಿಧ ಪ್ರಕ್ರಿಯೆಗಳಿಂದ ಹೋಗುತ್ತಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಗೊತ್ತಿಲ್ಲದ ವಿಷಯಗಳಿಂದ ದೂರವಿರುವುದೇ ಲೇಸು. ಯಾಕೆಂದರೆ ಕೆಲವೊಮ್ಮೆ ಇಂಥ ನಡತೆಗಳು ಪ್ರಾಣಕ್ಕೆ ಅಪಾಯ ತಂದೊಡ್ಡುವದು.

ತೊಗಟೆಯನ್ನು ಸೇವಿಸುವ ಯೋಗ್ಯವಾದ ಸಮಯ ಮತ್ತು ಪದ್ಧತಿ ಈ ಕೆಳಗಿನಂತಿವೆ.

  • ಅರ್ಜುನ ಮರದ ತೊಗಟೆಯನ್ನು ಪುಡಿಮಾಡಿ ನೀರಿನಲ್ಲಿ ಕೂಡಿಸಿ ಊಟ ಮಾಡುವ ಮುನ್ನ 50 ಮಿಲಿ ತೆಗೆದುಕೊಳ್ಳಬೇಕು. ಸಾಧ್ಯವಾದರೆ ದಿನಕ್ಕೆರಡು ಬಾರಿ ಈ ರೀತಿ ತೆಗೆದುಕೊಳ್ಳಬಹುದು.
  • ಈ ಪೌಡರನ್ನು ಹಾಲಿನಲ್ಲಿ ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ಲಾಭವಾಗುವುದು.
  • ಈ ಮರದ ತೊಗಟೆಯ ಔಷಧಿಗಳು ಮತ್ತು ಕ್ಯಾಪ್ಸೂಲ್ಗಳು ಮಾರ್ಕೆಟಿನಲ್ಲಿ ಉಪಲಬ್ಧವಿವೆ. ಆದ್ದರಿಂದ ಇದನ್ನು ಔಷಧ ಸ್ವರೂಪದಲ್ಲಿಯೂ ಸೇವಿಸಬಹುದು.