ನಕಲಿ ಹುಲಿಯನ್ನು ನೋಡಿ ನಾಯಿಗಳು ನೀಡಿದ ವಿಚಿತ್ರ ರಿಯಾಕ್ಷನ್ ಗಳು: ಮೂರೇ ದಿನದಲ್ಲಿ ಲಕ್ಷ ಲಕ್ಷ ಜನರು ನೋಡಿದ್ದಾರೆ ಈ Video!

ಮನರಂಜನೆಗಾಗಿ ಪ್ರಾಂಕ್ ವಿಡಿಯೋಗಳನ್ನು ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಆಗಿದೆ. ಅನೇಕರು ಪ್ರಾಂಕ್ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ನಲ್ಲಿ ಹಾಗೂ ಇತರೆ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಳ್ಳಿವುದು ಕೂಡಾ ಸಾಮಾನ್ಯವಾಗಿದೆ. ಅಲ್ಲದೇ ಪ್ರಾಂಕ್ ವೀಡಿಯೋಗಳಿಗಾಗಿ ಅನೇಕ ಸಾ ಹ ಸ ಗಳನ್ನು ಕೂಡಾ ಯೂಟ್ಯೂಬರ್ ಗಳು ಮಾಡುವುದೂ ಕೂಡಾ ನಿಜ. ಇಂತಹ ವಿಡಿಯೋಗಳು ಕೂಡಾ‌‌ ಶೇರ್ ಆದ ಕೆಲವೇ ದಿನಗಳಲ್ಲಿ ಅಥವಾ ಕೆಲವೊಮ್ಮೆ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿಬಿಡುತ್ತವೆ. ಈ ವಿಡಿಯೋಗಳನ್ನು ನೋಡುವ ನೆಟ್ಟಿಗರು ಕೂಡ ಭರ್ಜರಿ ಮನೋರಂಜನೆಯನ್ನು ತಮ್ಮದಾಗಿಸಿಕೊಂಡರೆ, ಕೆಲವರು ಇಂತಹ ವೀಡಿಯೋ ಮಾಡುವವರಿಗೆ ಹಿಡಿ ಶಾ ಪ ಹಾಕಿ, ಕಾಮೆಂಟ್ ಗಳಲ್ಲಿ ಅ ಸಮಾಧಾನ ಕೂಡಾ ಹೊರಹಾಕುತ್ತಾರೆ.

ಇಂತಹದೇ ಒಂದು ಪ್ರಾಂಕ್ ವಿಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ಇದು ಯಾವ ಮಟ್ಟಕ್ಕೆ ವೈರಲ್ ಆಗಿದೆ ಎಂದ್ರೆ, ಈ ವಿಡಿಯೋ ಶೇರ್ ಆದ ಮೂರೇ ದಿನದಲ್ಲಿ 29 ಲಕ್ಷ ಜನರಿಂದ ವೀಕ್ಷಣೆ ಮಾಡಲ್ಪಟ್ಟಿದೆ. ಅನೇಕರು ಇದನ್ನು ಶೇರ್ ಮಾಡಿಕೊಂಡಿದ್ದರೆ, ನೂರಾರು ಜನ ವಿಡಿಯೋ ಬಗ್ಗೆ ಕಾಮೆಂಟ್ಗಳನ್ನು ಮಾಡಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಈ ಪ್ರಾಂಕ್ ವಿಡಿಯೋದಲ್ಲಿ ಅಂತಹುದು ಏನಿದೇ? ಮೂರೇ ದಿನದಲ್ಲಿ 29 ಲಕ್ಷ ಜನರು ನೋಡುವಂತದ್ದು ಅನ್ನೋದಾದ್ರೆ ಅದನ್ನು ಕೂಡಾ ತಿಳಿಯೋಣ ಬನ್ನಿ. ಇದೊಂದು ಫೇಕ್ ಟೈಗರ್ ಪ್ರಾಂಕ್ ಆಗಿದೆ. ಅಂದರೆ ಯೂಟ್ಯೂಬರ್ ಒಬ್ಬ ನಕಲಿ ಹುಲಿಯನ್ನು ಸೃಷ್ಟಿಸಿ ಅಂದರೆ ನಾಯಿ ಒಂದಕ್ಕೆ ಹುಲಿಯ ರೀತಿ ಕಾಣುವಂತೆ ವೇಷ ಹಾಕಿ, ಅದನ್ನು ಬೀದಿನಾಯಿಗಳು ಕಡೆ ಬಿಟ್ಟು ನಾಯಿಗಳು ಇರುವ ಕಡೆ ಬಿಟ್ಟಿದ್ದಾನೆ.

ಆದರೆ ಈ ನಕಲಿ ಹುಲಿಯನ್ನೇ ಅಸಲಿ ಹುಲಿ ಎಂದು ತಿಳಿದ ನಾಯಿಗಳು, ಅದನ್ನು ನೋಡಿದ ಕ್ಷಣದಲ್ಲಿ ಯಾವ ರೀತಿಯ ರಿಯಾಕ್ಷನ್ ಗಳನ್ನು ನೀಡಿವೆ ಎಂಬುದನ್ನು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಮನರಂಜನೆಯ ದೃಷ್ಟಿಯಿಂದ ಈ ವಿಡಿಯೋವನ್ನು ನೋಡುವುದಾದರೆ ಇದು ಒಂದು ಪಕ್ಕಾ ಹಾಸ್ಯಭರಿತ ವಿಡಿಯೋ ಎನಿಸುತ್ತದೆ. ಏಕೆಂದರೆ ಇದ್ದಕ್ಕಿದ್ದಂತೆ ತಮ್ಮ ಬಳಿಗೆ ಒಂದು ಹುಲಿಯನ್ನು ಬಂದಿದ್ದನ್ನು ನೋಡಿದ ನಾಯಿಗಳು ನೀಡಿರುವ ಚಿತ್ರ ವಿಚಿತ್ರ ರಿಯಾಕ್ಷನ್ ಗಳು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಏಕೆಂದರೆ ಮಲಗಿರುವ ನಾಯಿಗಳು ಏನೋ ಸದ್ದಾಯಿತು ಎಂದು ಎದ್ದು ನೋಡಿದಾಗ ತಮ್ಮ ಮುಂದೆ ಹುಲಿಯೊಂದನ್ನು ಕಂಡು ಕೆಲವು ನಾಯಿಗಳು ಭ ಯ ದಿಂದ ಗಟ್ಟಿಯಾಗಿ ಬೊಗಳುತ್ತಾ ಅಲ್ಲಿಂದ ಎದ್ದು ಬಿ ದ್ದು ಓಡಿ ಹೋಗುತ್ತದೆ.

ಆದರೆ ಇನ್ನೂ ಕೆಲವು ನಾಯಿಗಳು ಅದನ್ನು ನೋಡಿ ಭಯಪಡದೆ ಅದರ ಕಡೆ ಸೂಕ್ಷ್ಮವಾಗಿ ಗಮನಿಸುತ್ತವೆ. ಮತ್ತೂ ವಿಚಿತ್ರ ಎಂದರೆ ಕೆಲವು ನಾಯಿಗಳಂತೂ ಯಾವುದೇ ರಿಯಾಕ್ಷನ್ ನೀಡದೆ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತವೆ. ಆದರೆ ಒಂದೊಂದು ನಾಯಿಯ ರಿಯಾಕ್ಷನ್ ಕೂಡಾ ಒಂದೊಂದು ರೀತಿಯಲ್ಲಿ ಇದ್ದು, ಈ ನಾಯಿಗಳ ವಿಚಿತ್ರ, ಭ ಯ ಮಿಶ್ರಿತ ರಿಯಾಕ್ಷನ್ ನ ವಿಡಿಯೋ ನೋಡುಗನಿಗೆ ಮಾತ್ರ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ, ಬೇಸರವಾಗಿದ್ದ ಮನಸ್ಸುಗಳು ನಗುವಂತೆ ಮಾಡುತ್ತಿದೆ. ವಿಡಿಯೋ ನೋಡಿದೆ ನೆಟ್ಟಿಗರು ಕೂಡಾ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ. ಅದರಲ್ಲೂ ಬಹುತೇಕ ಮೆಚ್ಚುಗೆಯ ಮಾತುಗಳನ್ನು ಆಡಿದ್ದರೆ, ಕೆಲವರು ಮಾತ್ರ ನಾಯಿಗಳಿಗೆ ಈ ರೀತಿ ತೊಂದರೆ ಕೊಟ್ಟಿರುವುದಕ್ಕೆ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದಾರೆ.

ವಿಡಿಯೋ ನೋಡಿ

ನೆಟ್ಟಿಗರು ವಿಡಿಯೋ ಬಹಳ ಹಾಸ್ಯಭರಿತವಾಗಿದೆ, ಇದನ್ನು ನೋಡುತ್ತಿದ್ದರೆ ಸಿಕ್ಕಾಪಟ್ಟೆ ನಗು ಬರುತ್ತಿದೆ ಎಂದಿದಿದ್ದಾರೆ. ಕೆಲವರು ಹಣ ಸಂಪಾದನೆಗೆ ಮೈ ಬಗ್ಗಿಸಿ ಕೆಲಸ ಮಾಡಿ ಇಂತಹ ವಿಡಿಯೋಗಳನ್ನು ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಒಬ್ಬರಂತೂ ಮುಂದಿನ ಸಲ ಹುಲಿಯ ವೇಷವನ್ನು ನೀನೇ ಹಾಕಿಕೊಂಡು ನಾಯಿಗಳ ಮುಂದೆ ಹೋಗಿ ಪ್ರಾಂಕ್ ವಿಡಿಯೋ ಮಾಡು ಎಂದು ಕೂಡಾ ಸಲಹೆ ನೀಡಿದ್ದಾರೆ
ಕೆಲವರು ಇಲ್ಲಿ ‌ನಗುವಂಥದ್ದು ಏನು ಇಲ್ಲ ಸುಮ್ನೆ ಮೂಕ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದಿದ್ದಾರೆ. ಹೀಗೆ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಪಡೆದಿರುವ ವಿಡಿಯೋ ಮಾತ್ರ ಭರ್ಜರಿ ವೈರಲ್ ಆಗಿದೆ.