ರಕ್ತದಲ್ಲಿಯ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ನಿಮ್ಮ ಜೀವನದ 11 ವರ್ಷ ಕಡಿಮೆಯಾಗಬಹುದು! ಇದನ್ನು ನಿಯಂತ್ರಿಸಲು ಈ ಪದಾರ್ಥಗಳು ತಿನ್ನಿ..

ಮನುಷ್ಯರಿಗೆ ಇರುವ ರೋಗಗಳು ಒಂದೆರಡಲ್ಲ. ಅದರಲ್ಲಿ ವಿಜ್ಞಾನವು ಹೆಚ್ಚಾದಂತೆ ಹೊಸ ಹೊಸ ರೋಗಗಳು ಸಹ ಜನ್ಮ ತಾಳುತ್ತಿವೆ. ಇವೆಲ್ಲವುಗಳನ್ನು ಪಾರುಮಾಡಿ ಕೊನೆಗೆ ಹೋಗುವುದೆಂದರೆ ಮಾನವನಿಗೆ ಒಂದು ದೊಡ್ಡ ಸಾಧನೆ ಮಾಡಿದಂತೆಯೇ ಸರಿ.

ಮಾನವನ ರಕ್ತದಲ್ಲಿ ಯುರಿಕ್ ಎಸಿಡ್ ಎನ್ನುವ ಪ್ರಮಾಣವು ಹೆಚ್ಚಾದರೆ ವ್ಯಕ್ತಿ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ಈ ಲೇಖನದಲ್ಲಿ ವ್ಯಕ್ತಿಯ ದೇಹದಲ್ಲಿ ಯುರಿಕ್ ಎಸಿಡ್ ಪ್ರಮಾಣವು ಯಾವುದರಿಂದ ಹೆಚ್ಚಾಗುತ್ತದೆ? ಮತ್ತು ಇದಕ್ಕೆ ಉಪಾಯವೇನು ಮತ್ತು ಈ ಸಮಸ್ಯೆ ಇದ್ದವರು ಇದನ್ನು ನಿಯಂತ್ರಣದಲ್ಲಿ ಹೇಗಿಡಬೇಕು ಎಂಬ ಪ್ರಶ್ನೆಗೆ ಉತ್ತರಗಳನ್ನು ನೀಡಲಾಗಿದೆ.

ವೈದ್ಯರು ಹೇಳುವ ಪ್ರಕಾರ ವ್ಯಕ್ತಿಯ ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣವು ಹೆಚ್ಚಾಗುತ್ತಿದ್ದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯವನ್ನು ತಂದೊಡ್ಡುವುದು. ಇದರಿಂದ ವ್ಯಕ್ತಿ ಜೀವಂತವಾಗಿರುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಈ ಸಮಸ್ಯೆ ವ್ಯಕ್ತಿಗೆ ಇದ್ದರೆ ಆತನ ಜೀವನದಲ್ಲಿ 11 ವರ್ಷಗಳು ಕಡಿಮೆಯಾಗುತ್ತವೆ. ಈ ವಿಷಯವನ್ನು BMJ ಗ್ಲೋಬಲ್ ರಿಪೋರ್ಟ್ ನಲ್ಲಿ ಹೇಳಲಾಗಿದೆ. ಈ ರಿಪೋರ್ಟದ ಪ್ರಕಾರ ಈ ಸಮಸ್ಯೆ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಕಂಡುಬರುತ್ತದೆ. ಯೂರಿಕ್ ಆಸಿಡ್ ಹೆಚ್ಚಾದಂತೆ ವ್ಯಕ್ತಿಯ ವಯಸ್ಸು ಕಡಿಮೆಯಾಗುತ್ತ ಬರುತ್ತದೆ. ಪುರುಷನ ವಯಸ್ಸು ಈ ರೋಗದಿಂದ ಸುಮಾರು 11 ವರ್ಷಗಳ ವರೆಗೆ ಕಡಿಮೆಯಾದರೆ ಮಹಿಳೆಯ ವಯಸ್ಸು ಈ ರೋಗದಿಂದ ಸುಮಾರು ಆರು ವರ್ಷಗಳವರೆಗೆ ಕಡಿಮೆಯಾಗುತ್ತದೆ.

ಶರೀರದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಂತೆ ಅದರ ಜೊತೆಗೆ ಅನೇಕ ರೋಗಗಳು ಉಲ್ಬಣಿಸುತ್ತವೆ. ಇದರಿಂದ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವವೂ ಹೆಚ್ಚಾಗಿರುತ್ತದೆ.

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಲು ಮುಖ್ಯ ಕಾರಣಗಳು ಯಾವುವು? ಅದನ್ನು ನಾವು ಇಲ್ಲಿ ನೋಡುವಾ.

ಈ ರೋಗವು ಅಧಿಕ ಪ್ರಮಾಣದಲ್ಲಿ ಮಾಂಸಾಹಾರ ಸೇವನೆಯಿಂದ ಆಗುತ್ತದೆ. ಆಲ್ಕೋಹಾಲ್, ಸಾಫ್ಟ್ ಡ್ರಿಂಕ್ಸ್ ಮತ್ತು ಫಾಸ್ಟ್ ಫುಡ್ ಗಳ ಹೆಚ್ಚಿನ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ.

ಈ ರೀತಿಯ ದೇಹಕ್ಕೆ ಅಪಾಯವನ್ನು ತಂದೊಡ್ಡುವ ರೋಗವನ್ನು ಯಾವ ರೀತಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡುವ. ಇದಕ್ಕೆ ಕೆಲವೊಂದು ನೈಸರ್ಗಿಕ ಉಪಾಯಗಳು ಲಭ್ಯವಿವೆ. ದೇಹದಲ್ಲಿಯ ಅಧಿಕ ಯೂರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಅದನ್ನು ಹದ್ದುಬಸ್ತಿನಲ್ಲಿಡಲು ಈ ಕೆಳಗೆ ಕೊಟ್ಟ ಉಪಾಯಗಳನ್ನು ಮಾಡಿ ನೋಡಬಹುದು.

ಎಳನೀರು ಇದಕ್ಕೆ ತುಂಬಾ ಗುಣಕಾರಿಯಾದ ಔಷಧಿಯಾಗಿದೆ. ಎಳನೀರಿನ ಸೇವನೆಯಿಂದ ದೇಹಕ್ಕೆ ಅನೇಕ ಪ್ರಕಾರದ ಲಾಭವಾಗುತ್ತದೆ. ದಿನನಿತ್ಯ ಎಳನೀರಿನ ಸೇವನೆಯಿಂದ ದೇಹದಲ್ಲಿರುವ ಯೂರಿಕ್ ಆಸಿಡ್ ನ್ನು ಹದ್ದುಬಸ್ತಿನಲ್ಲಿಡಲು ಸಹಾಯವಾಗುತ್ತದೆ.

ಇದರ ಮೇಲೆ ಇನ್ನೊಂದು ಉಪಾಯವೆಂದರೆ, ಊಟದ ಜೊತೆಗೆ ಆಪಲ್ ಸೇವನೆಯನ್ನು ಮಾಡಬೇಕು. ಇದರಿಂದ ದೇಹಕ್ಕೆ ಅನೇಕ ಲಾಭಗಳು ಆಗುವುದರ ಜೊತೆಗೆ ರಕ್ತಪ್ರವಾಹದಲ್ಲಿ ಯೂರಿಕ್ ಆಸಿಡ್ ಕಡಿಮೆಯಾಗಲು ಸಹಾಯವಾಗುತ್ತದೆ. ಆದ್ದರಿಂದ ದಿನನಿತ್ಯ ಒಂದು ಸೇಬನ್ನು ತಿನ್ನಲೇಬೇಕು.